Sunday, 15th December 2024

ಅಕ್ರಮ ಮೈನ್ಸ್ ಮಾಡಿ ಠಾಣೆಯಲ್ಲಿ ಬರೀ ಚಡ್ಡಿಯಲ್ಲಿ ಕೂತವನಿಂದ ಪಾಠ ಕಲಿಯಬೇಕಿಲ್ಲ

ದಿಲೀಪ್ ವಿರುದ್ದ ಶಾಸಕ ಶ್ರೀನಿವಾಸ್ ಏಕವಚನದಲ್ಲಿ ಕಿಡಿ

ಸರಕಾರಿ ಜಮೀನು ಕಬಳಿಕೆ ಆರೋಪ ಪ್ರಕರಣ

ತುಮಕೂರು: ಅಕ್ರಮ ಮೈನ್ಸ್ ಮಾಡಿ ಠಾಣೆಯಲ್ಲಿ ಬರೀ ಚಡ್ಡಿಯಲ್ಲಿ ಕೂತವನಿಂದ ಪಾಠ ಕಲಿಯಬೇಕಿಲ್ಲ ಎಂದು ಗುಬ್ಬಿ ಶಾಸಕ ಶ್ರೀನಿವಾಸ್, ಬಿಜೆಪಿಯ ದಿಲೀಪ್ ವಿರುದ್ದ ಕಿಡಿಕಾ ರಿದರು.

ಗುಬ್ಬಿ ತಾಲೂಕಿನಲ್ಲಿ ನಡೆದಿರುವ ಸರಕಾರಿ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ದಿಲೀಪ್ ಕುಮಾರ್ ಮಾಡಿರುವ ಆರೋಪಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ತಿರುಗೇಟು ನೀಡಿದರು.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ೨೦೦೪ ರಲ್ಲಿ ಕದ್ದು ಅಕ್ರಮ ಮೈನ್ಸ್ ಮಾಡಿ೧೨ ಲಾರಿ, ಹಿಟಾಚಿಯನ್ನು ಪೊಲೀಸರು ಸೀಜ್ ಮಾಡಿ, ಬರೀ ಚಡ್ಡಿಯಲ್ಲಿ ಠಾಣೆಯಲ್ಲಿ ಕೂರಿಸಿ ದ್ದರು. ಅವಾಗ ಸ್ಟೇಷನ್ಗೆ ಹೋಗಿ ಬಿಡಿಸಿದ್ದು ನಾನು. ಆತ ಮಾತನಾಡುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಗರಂ ಆದರು.

ಬಗರ್ ಹುಕ್ಕುಂನಲ್ಲಿ ಬಡವರಿಗೆ ಜಮೀನು ಮಂಜೂರು ಮಾಡಿದ್ದೀನಿ. ನಮ್ಮ ಸಂಬಂಧಿಕ ರಿಗೆ, ಹಿಂಬಾಲಕರಿಗೆ ರ‍್ಧ ಗುಂಟೆ ಜಮೀನು ಮಾಡಿಕೊಟ್ಟಿದ್ದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಒಂದೇ ಒಂದು ಕ್ಷಣವೂ ಶಾಸಕನಾಗಿ ಮುಂದುವರಿಯುವುದಿಲ್ಲ. ಕೇವಲ ಒಂದು ರ‍್ಷ ಸಮಯವಿದೆ. ಬೇಗ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ.

ಯಾವುದಾದರೂ ತಪ್ಪಾಗಿದ್ದರೆ ಅದನ್ನು ವಜಾ ಮಾಡುವುದಕ್ಕೆ ಅವಕಾಶ ಇದೆ.ತಪ್ಪಾಗಿದ್ದರೆ ವಜಾ ಮಾಡಲಿ ಎಂದರು.