Thursday, 12th December 2024

ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು: ಸಚಿವ ನಾಗೇಂದ್ರ

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ

ರಾಯಚೂರು: ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.

ಅವರು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಾ ಸಂವಿಧಾನಕ್ಕೆ ಅವಮಾನಿಸಿದ್ದಾರೆ ಅವರೊಬ್ಬ ಮೂರ್ಖ ಎಂದರು.

ಶ್ರೀ ರಾಮುಲುರವರು ಅನಂತ ಕುಮಾರ್ ಹೆಗಡೆ ಹೇಳಿಕೆ ಖಂಡಿಸುವ ಬದಲು ಅದನ್ನು ವಯಕ್ತಿಕ ಹೇಳಿಕೆ ಎಂದು ಸಮರ್ಥಿಸಿಕೊಳ್ಳುವ ರೀತಿ ಪ್ರತಿಕ್ರಿಯಿ ಸಿದ್ದು ಅವರು ಇಂತಹ ಧೋರಣೆ ಹೊಂದಿದ್ದರಿಂದಲೇ ಜನರು ಅವರನ್ನು ಸೋಲಿಸಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಸಂವಿಧಾನ ಬದಲಾದರೆ ರಕ್ತಪಾತವಾಗುತ್ತದೆ ಎಂದು ಹೇಳಿದ್ದನ್ನು ಸಮರ್ಥಿಸಿಕೊಂಡ ಅವರು ಸೂರ್ಯ ಚಂದ್ರರು ಇರುವವ ರೆಗೂ ಸಂವಿಧಾನವಿರುತ್ತದೆ ನಾವು ಇಂದು ನಿರ್ಭೀತರಾಗಿ ಓಡಾಡುತ್ತೇವೆಂದರೆ, ಮಾತನಾಡುತ್ತೇವೆಂದರೆ ಅದಕ್ಕೆ ಕಾರಣ ಸಂವಿಧಾನವೆಂದರು. ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಜನಸಾಮಾನ್ಯರ ಮನ ಗೆದ್ದಿದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ಮಂತ್ರಿಮಂಡಲ ಸಚಿವರು ಉತ್ತಮ ಕಾರ್ಯ ಮಾಡುತ್ತಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದ ಅವರು ಹೈಕಮಾಂಡ್ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಎಂದರು.

ಸಿಎಎ ಕಾಯ್ದೆ ಬಗ್ಗೆ ಪರ ವಿರೋಧ ನಿಲುವು ಜನರಾದ್ದಾಗಿದ್ದರಿಂದ ಕೇಂದ್ರ ಸರ್ಕಾರ ಕುಲಂಕುಷ ಪರಿಶೀಲಿಸಿ ಕಾಯ್ದೆ ಜಾರಿ ಮಾಡಬೇಕೆಂದರು. ಗಾಲಿ ಜನಾರ್ಧನ ರೆಡ್ಡಿ ಒಂದು ಪಕ್ಷದ ಸಂಸ್ಥಾಪಕರು ಅವರು ಯಾವ ಪಕ್ಷ ಸೇರುತ್ತಾರೆ ಎಂಬುದು ಅವರ ವೈಯಕ್ತಿಕ ವಿಷಯವೆಂದ ಅವರು ಬಳ್ಳಾರಿಯಲ್ಲಿ ಬಾಂಬ್ ಸ್ಪೋಟ ಮಾಡಿದ ವ್ಯಕ್ತಿ ಚಲನ ವಲನ ಬಗ್ಗೆ ಮಾಹಿತಿಯಿದ್ದು ಬಳ್ಳಾರಿ ಶಾಂತಿ ಪ್ರಿಯ ಪ್ರದೇಶ ಅಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲವೆಂದರು.