ಇಂಡಿ: ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ರಾಜಕಾರಣಿ ಗಳು ಮರೆಯಬಾರದು ಆದರೆ ಬಿಜೆಪಿ ಸರಕಾರ ಅದಾನಿ, ಅಂಬಾನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಠಾಚಾರ ರಹಿತ ಆಡಳಿತ ಮಾಡುತ್ತೇವೆ ಎಂದಿರುವ ಬಿಜೆಪಿಗರು ಕಪ್ಪು ಚುಕ್ಕೆ ಇಲ್ಲದಂತೆ ತಿನ್ನುತ್ತಾರೆ ಈ ಬಾರಿ ಪ್ರೋ ರಾಜು ಆಲಗೂರ ಗೆಲುವು ಖಚಿತ ರೈತರ ಪರವಾಗಿ ಧ್ವನಿ ಎತ್ತಿ ಎಂದು ಮಾಜಿ ಉಪಮುಖ್ಯ ಮಂತ್ರಿ ಸ್ಟಾರ್ ಪ್ರಚಾರಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಕೂಡಾ ಬಿಜೆಪಿ ಯಲ್ಲಿದಾಗ ಬೆಂಗಳೂರು ಬಿಟ್ಟು ದೂರ ಕರೆದುಕೊಂಡು ಹೋಗಿ ಭಾಷಣ ಕಲಿಸುತ್ತಿದ್ದರು ಅದು ತಮಗೆ ಅನುಕೂಲವಾಗುವಂತೆ. ಸೂಲಿ ಬೆಲೆ ಭಾಷಣ ಕೇಳಿರಬಹುದು ಭಾರತದ ಬಂಡವಾಳ ಶ್ರೀಮಂತರ ಉದ್ದೀಮೆದಾರರಲ್ಲಿದೆ ಮೋದಿಜೀ ಪ್ರಧಾನಿಯನ್ನಾಗಿ ಮಾಡಿದರೆ ಪ್ರತಿ ಬಡವರ ಕುಟುಂಬಕ್ಕೆ ೧೫ ಲಕ್ಷ ದಂತೆ ಹಾಕಿದರೂ ಇನ್ನು ಹಣ ಉಳಿಯುತ್ತೆ ಅಷ್ಠೇ ಅಲ್ಲ ಈ ದೇಶದ ರಸ್ತೆ ಬಂಗಾರ ಹೋದಿಕೆ ಮಾಡಿ ದರೂ ಇನ್ನು ಹಣ ಉಳಿಯುತ್ತೆ ಎಂದು ಕೀರಾಕಿ ಭಾಷಣ ಮಾಡುತ್ತಿದ್ದ ಜನರಿಗೆ ದಾರಿ ತಪ್ಪಿಸುತ್ತಿದ್ದ ಮತ್ತೆ ಚುನಾವಣೆ ಬಂದಾಗ ಮತ್ತೆ ಭಾಷಣಕ್ಕೆ ಬರುವ ಸುಳ್ಳು ಹೇಳುವ ಕೀರಾಕಿ. ಗಂಗಾ ಕಾವೇರಿ, ಕೃಷ್ಣಾ ನದಿ ಜೋಡಣೆ ಮಾಡುತ್ತೇವೆ, ಬುಲೇಟ ಟ್ರೀನ್ ಓಡಿಸುತ್ತೇವೆ.
ಕಪ್ಪು ಹಣತರುತ್ತೇವೆ, ಹಣ ದ್ವೀಗುಣ ಎಂದು ಹೇಳಿರುವುದು ಇದಾವುದಾದರೂ ಇಡೇರಿದಿಯಾ ? ಕಾಂಗ್ರೆಸ್ ಜಾರಿಗೆ ತಂದ ಪಂಚ ಗ್ಯಾರಂಟಿ ಮಾತ್ರ ಇಡೇರಿದೆ. ಸುಳ್ಳು ಹೇಳಿ ಆಡಳಿತ ಮಾಡಿದ ಬಿಜೆಪಿ ನಿಮಗೆ ಮತ ನೀಡುವುದಿಲ್ಲ ಎಂದು ಖಡಾಖಂಡಿತ ಹೇಳಿ. ರೈತ ನಾಯಕ ಎಂದು ಹೇಳುವ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಮಣ್ಣಿನ ಮಗ ಕುಮಾರಸ್ವಾಮಿ ರೈತರ ಬಗ್ಗೆ ಎನು ಮಾಡಿದ್ದೀರಿ, ಇಡೀ ದೇಶದ ಅನೇಕ ರಾಜ್ಯಗಳಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ.
ದೇಶದ ಪ್ರಧಾನಿ ಮೋದಿಯವರು ಅತ್ಯೆಂತ ಕೆಳಮಟ್ಟದಿಂದ ಭಾಷಣ ಮಾಡುವುದು ದುಧೈರ್ವ ಸಂಗತಿ. ಸಣ್ಣ ವಿಚಾರಗಳು ಮಾತನಾಡಬಾರದು ನಿಮ್ಮ ಹುದ್ದೆಗೆ ಗೌರವ ಅಲ್ಲ. ಭಾರತ ಮಾತಾಕೀ ಜೈ ಎಂದು ಘೋಷಣೆ ಮಾಡುವುದು ಯಾರಪ್ಪನ ಸೊತ್ತಲ್ಲ ಇಡೀ ದೇಶದ ಪ್ರತಿ ನಾಗರೀಕನ ಸ್ವತ್ತು ಬಿಜೆಪಿ ಹುಟ್ಟಿದ್ದು ಸ್ವಾತಂತ್ರö್ಯ ನಂತರ ನಿಜವಾಗಿ ದೇಶಭಕ್ತರು ಕಾಂಗ್ರೇಸಿಗರು ಬಿಜೆಪಿಯವರ ಮಾತಿಗೆ ಸೊಪ್ಪು ಹಾಕಬೇಡಿ ಪ್ರೋ,ರಾಜು ಆಲಗೂರ ಗೆಲುವು ಖಚಿತ ಹೆಚ್ಚಿನ ಮತಗಳು ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ನುಡಿದಂತೆ ನಡೆದ ಸರಕಾರ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡಕುಟುಂಬಕ್ಕೆ ವರ್ಷಕ್ಕೆ ೧ ಲಕ್ಷ ರೂ ಕೊಡಲಾಗುವುದು. ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟಿದೆ. ಕೆಂದ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡವರ ಪರ ಇಲ್ಲ ಅದಾನಿ, ಅಂಬಾನಿ ಪರವಾಗಿದ್ದಾರೆ, ರೈತರ ಬಡವರ ಸಾಲ ಮನ್ನಾ ಮಾಡದೆ ಉದ್ದೀಮೆದಾರರ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವುದು ಈ ದೇಶದ ದುದೈರ್ವ ಸಂಗತಿ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿಪರ ಯೋಜನೆ ಮಾಡಿಲ್ಲ, ಜಿಲ್ಲೆಯಲ್ಲಿ ನೀರಾವರಿ ಯೋಜನೆ ಮಾಡಬೇಕಾಗಿತ್ತು ಆದರೆ ಕೇಂದ್ರ ಸಂಸತ್ತಿನ ಮೌನವಾಗಿದ್ದಾರೆ, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿದ್ದು ಅವುಗಳನ್ನು ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿಸಲ್ಲಿಲ್ಲ , ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿದರೆ ಜಿಲ್ಲೆ ಸಾಕಷ್ಟು ಅಭಿವೃದ್ದಿ ಹೊಂದುತ್ತಿತ್ತು ,ನನಗೆ ಈ ಬಾರಿ ಅರ್ಶೀವಾದ ಮಾಡಿದರೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಅಭ್ಯರ್ಥಿ ಪ್ರೋ,ರಾಜು ಆಲಗೂರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಪ್ರಚಾರ ಸಭೆನ್ನುದ್ದೇಶಿಸಿ ಮಾತನಾಡಿದರು.
ಪ್ರೊ.ರಾಜು ಆಲಗೂರ ಗೆಲುವು ಖಚಿತ ಇಡೀ ಜಿಲ್ಲಾ ವ್ಯಾಪಿ ಅಲೆದಾಡಿದಾಗ ಸಾಕಷ್ಟು ಮತದಾರರು ಅವರ ಪರವಾಗಿ ನಿಂತಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳು ಮಾಡಿರುವದರಿಂದ್ದ ರಾಜ್ಯದಲ್ಲಿ ಮಹಿಳೆಯರು ತಮ್ಮ ಕುಟುಂಬಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿರುವುದು ನೋಡಿದರೆ ಕಾಂಗ್ರೆಸ್ ಪರವಾಗಿ ಜನರು ಇದ್ದಾರೆ ಎಂದು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಾಸ್ತಾವಿಕ ಮಾತನಾಡಿದರು.
ಶಾಸಕ ಅಶೋಕ ಮನಗೂಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಕಾಂತಾ ನಾಯಕ, ಮಲ್ಲಣ್ಣಾ ಸಾಲಿ, ಅಪ್ಪಣ್ಣಾ ಕಲ್ಲೂರ, ರವಿಕುಮಾರ ಚವ್ಹಾಣ,ರಜಾಕ ಚಿಕ್ಕಗಸಿ, ಸುರೇಶ ಗೋಣಸಗಿ ,ಕಾಮೇಶ ಉಕಲಿ, ಸಿದ್ದಗೊಂಡ ಪೂಜಾರಿ, ಜಕ್ಕಪ್ಪ ಹತ್ತಳ್ಳಿ, ಮಹಾದೇವ ಗಡ್ಡದ, ಇಲಿಯಾಸ ಬೋರಾಮಣಿ,ಗುರಣ್ಣಗೌಡ ನಾಗಾವಿ, ಬಿ.ಎಂ ಪಾಟೀಲ ಕತ್ನಳ್ಳಿ, ಅಶೋಕ ನಾಗಲಾಟಿ,ಶೇಖಪ್ಪ ರೂಗಿ,ಮಹಾಂತಗೌಡ ಪಾಟೀಲ, ಸಿದ್ದು ಹತ್ತಳ್ಳಿ ,ಅಡವೇಪ್ಪ ರೋಟ್ಟಿ, ರಾಯಗೊಂಡ ನಾಟೀಕಾರ,ಮುಸ್ತಾಕ ನಾಯ್ಕೋಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.
*
ಮಾಜಿ ಉಪಮುಖ್ಯ ಮಂತ್ರಿ ಲಕ್ಷö್ಮಣ ಸವದಿ ಹಾಗೂ ಅಭ್ಯರ್ಥಿ ಪ್ರೋ,ರಾಜು ಆಲಗೂರ ಇವರಿಗೆ ತೆರೇದ ವಾಹನದಲ್ಲಿ ವಿವಿಧ ವಾದ್ಯೆ ವೈಭೋಗಗಳ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೇರವಣಿಗೆಯೊಂದಿಗೆ ಗ್ರಾಮದ ಮುಖಂಡರು ವೇದಿಕೆಗೆ ಬರಮಾಡಿಕೊಂಡರು.