ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳಿಗೆ ಹೊಂದಿಕೊಂಡಿರುವ ರೈತರ ಜಮೀನನ್ನು ಇದ್ದಕ್ಕಿದ್ದಂತೆ ಕೆಐಎಡಿಬಿ ಮೂಲಕ ಅಧಿಸೂಚನೆ ಕೊಟ್ಟಿದ್ದು, ಭೂಸ್ವಾಧೀನಕ್ಕೆ ಯಾವುದೇ ಕಾರಣಕ್ಕೂ ಜಮೀನು ಬಿಡುವುದಿಲ್ಲವೆಂದು ರೈತರು ಮೇಲೂರಿನ ಶಾಸಕರ ಸ್ವಗೃಹದಲ್ಲಿ ಶಾಸಕ ಬಿ.ಎನ್ ರವಿಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಪಿಎಲ್ ಕಂಪೆನಿಯ ಹೆಸರಿನಲ್ಲಿ ಸುಮಾರು 2000 ಎಕರೆಗೂ ಹೆಚ್ಚಿನ ರೀತಿಯಲ್ಲಿ ರೈತರಿಗೆ ಆಸೆ ಆಮಿಷಗಳನ್ನು ತೋರಿಸಿ ಅಗ್ರಿಮೆಂಟ್ ಗಳನ್ನು ಹಾಕಿಕೊಂಡು ಮೋಸ ಮಾಡಿದ್ದು ಅದರಲ್ಲಿ 521 ಎಕರೆ ಜಮೀನು ಕೆಐಡಿಬಿಗೆ ಸೇರಿರುತ್ತದೆ ಎಂಬ ಅಂಕಿ ಅಂಶಗಳೊಂದಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ೫೨೧ ಎಕರೆ ಜಮೀನು ರೈತರ ಬಳಿ ಕೆಲ ಮಧ್ಯವರ್ತಿಗಳು ಇಲ್ಲಸಲ್ಲದ ಆಸೆ ಆಮಿಷಗಳನ್ನು ಅಗ್ರಿಮೆಂಟ್‌ಗಳನ್ನು ಹಾಕಿಕೊಂಡು ರೈತರಿಗೆ ಹಣ ನೀಡಿದೆ ಮೋಸ ಮಾಡುತ್ತಿದ್ದಾರೆ.
ಆ ಕಂಪನಿಯ ಮಾಲಿಕ ಯಾರು ಕಂಪನಿಯ ವಿಳಾಸ ಗೊತ್ತಿಲ್ಲ. ಮತ್ತೆ ಯಾವುದೇ ಕೃಷಿ ಜಮೀನು ವಾಣಿಜ್ಯ ಇತರೆ ಕಂಪನಿಗಳಿಗೆ ಭೂ ಪರಿವರ್ತನೆ ಮಾಡಬೇಕಾದರೆ ಸರ್ಕಾರ ಎಲ್ಲಾ ನೀತಿ ನಿಯಮಗಳನ್ನು ಹಾಕಿ ಭೂ ಪರಿವರ್ತನೆ ಮಾಡುತ್ತಾರೆ ಆದರೆ ಪಿಎಎಲ್ ಕಂಪನಿ ರೈತರ ಜಮೀನು ಅಗ್ರಿಮೆಂಟ್ ಹಾಕಿ 13 ವರ್ಷಗಳೇ ಕಳೆದಿವೆ ಹಾಗಾಗಿ ಘನ ಸರ್ಕಾರ 521 ಎಕೆರೆ ಜಮೀನನ್ನು ಪಿಎಲ್ ಕಂಪನಿಯನ್ನು ಮಜಾಗೊಳಿಸಿ ಕೆಐಡಿಬಿಯಿಂದ ಬರುವ ಯಾವುದೇ ಪರಿಹಾರ ಸಹಾಯಧನವನ್ನು ಆ ಜಮೀನು ಮೂಲ ಖಾತೆದಾರರಿಗೆ ಸೇರಬೇಕೆಂದು ಒತ್ತಾಯಿಸಿದರು.
ಕೆಐಎಡಿಬಿ 521 ಎಕರೆ ಭೂಮಿಗೆ ನೋಟಿಫಿಕೇಷನ್ ಕೊಟ್ಟಿದೆ. ಇಲ್ಲಿರುವ ಭೂಮಿ ಫಲವತ್ತಾದ ಭೂಮಿಯಾಗಿದೆ. ಬಯಲು ಸೀಮೆಯಲ್ಲಿ ಅದರಲ್ಲೂ ಮುಖ್ಯವಾಗಿ ಈ ತಾಲ್ಲೂಕಿನ ಹಳ್ಳಿಗಳಲ್ಲಿ ಹೆಚ್ಚಾಗಿ ರೈತರು ಕೃಷಿ ಮತ್ತು ತೋಟ ಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ದಲಿತರ, ಹಿಂದುಳಿದ, ಬಡವರ ಮತ್ತು ಸಣ್ಣ ಇಳುವರಿ ಭೂಮಿಗಳಿಗೆ ಕೈ ಹಾಕಿರುವುದು ಖಂಡನೀಯವಾದದ್ದು, ಜಿಲ್ಲಾಧಿಕಾರಿಗೆ ಸಾಂಕೇತಿಕ ಮನವಿ ನೀಡುತ್ತಿದ್ದೇವೆ. ಇದಕ್ಕೆ ಮಣಿದು ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸದಿದ್ದರೆ, ಕೆಐಎಡಿಬಿ ಮತ್ತು ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಎಂ ದ್ಯಾವಪ್ಪ, ನಂದಕುಮಾರ್, ಮಂಜುನಾಥ್, ಬಾಬು,ರಮೇಶ್,ದೇವರಾಜು, ಮುನಿಯಪ್ಪ, ಚೆನ್ನಪ್ಪ, ಸೇರಿದಂತೆ ರೈತರು ಇದ್ದರು.