Tuesday, 5th November 2024

ಪಟ್ಟಣಕ್ಕೆ ಮುಖ್ಯ ಕಾಲುವೆಗೆ ನೀರು ಹರಿಸಲು ಶಾಸಕ ಹುಲಗೇರಿ ಒತ್ತಾಯ

ಲಿಂಗಸುಗೂರು : ಆಲಮಟ್ಟಿ ಸಭಾಂಗಣದಲ್ಲಿ ಸಿ. ಸಿ .ಪಾಟೀಲ್ ರವರು ಮಾನ್ಯ ಲೋಕಪಯೋಗಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ನಡೆದ 2022-23 ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಶಾಸಕ ಡಿ ಎಸ್ ಹುಲಗೇರಿ ಲಿಂಗಸೂಗೂರು ಪಟ್ಟಣಕ್ಕೆ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು.. ಪ್ರಸ್ತುತ ಮುಖ್ಯ ಕಾಲುವೆಯ ಆಧುನಿಕರಣದ ಕಾಮಗಾರಿ ನಡೆಯುತ್ತಿರುವುದರಿಂದ ಲಿಂಗಸೂರು ಪಟ್ಟಣಕ್ಕೆ ಕುಡಿಯು ನೀರಿನ ಸಮಸ್ಯೆ ವ್ಯಾಪಕವಾಗಿದೆ.

ಹೀಗಾಗಿ ಈ ಕೂಡಲೇ ಆಧುನಿಕರಣದ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಮುಖ್ಯ ಕಾಲುವೆಗೆ ನೀರು ಹರಿಸಲು ಮಾನ್ಯ ಶಾಸಕರು ಸಭೆಯಲ್ಲಿ ಧ್ವನಿ ಎತಗತುವುದರ ಮೂಲಕ ಒತ್ತಾಯ ಮಾಡಿದರು.