Saturday, 5th October 2024

ಜನ ಸೇವೆಯೇ ನನ್ನ ರಾಜಕೀಯದ ಮುಖ್ಯ ಉದ್ದೇಶ: ಶಾಸಕ ಜಾಧವ

ಚಿಂಚೋಳಿ: ಜಂಸ್ಪಂದನದ ಮೂಲ ಉದ್ದೇಶ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದನೆ ಮಾಡುವುದಾಗಿದೆ. ಇದ್ದರಿಂದ ಜನರ ಸಮಸ್ಯೆಗಳು ಹೊತ್ತಿಕೊಂಡು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಜನಸ್ಪಂದ ಕಾರ್ಯ ಕ್ರಮ ಹಮ್ಮಿಕೊಂಡಿದೆ ಎಂದು ಶಾಸಕ ಡಾ. ಅವಿನಾಶ ಉಮೇಶ ಜಾಧವ ಅವರು ಹೇಳಿದರು.

ಜಿಲ್ಲಾ ಪಂಚಾಯತ ಕ್ಷೇತ್ರದ  ಚಿಮ್ಮನಚೋಡ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕ ಪಂಚಾಯತ ಕಾರ್ಯಲಯ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ಚೆನ್ನಿಬಾಯಿ ರಾಠೋಡ ಅವರ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆ ಹಾಗೂ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು, ಸ್ಥಳೀಯ ಗ್ರಾಮ ಅಭಿವೃದ್ಧಿಯ ವಾಸ್ತವ ತಿಳಿದುಕೊಂಡು ಸಮಸ್ಯೆಗಳಿಗೆ ಪರಿಹರಿಸಲು ಜನಸ್ಪಂದನ ಸಭೆ ಇಡಲಾಗಿದೆ. ಈ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು 10 ದಿನದಲ್ಲಿ ಅರ್ಜಿಗಳ ಸ್ಥಿತಿ ಮತ್ತು ಸಲ್ಲಿಸಿದ ವಿಷಯದ ಉತ್ತರವನ್ನು ಜನರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾ ಯಿತು.

ಚಿಮ್ಮನಚೋಡ ಗ್ರಾಮಕ್ಕೆ 23 ಕೋಟಿ ರೂ ಅನುದಾನವನ್ನು ನೀಡಿ ಗ್ರಾಮ ಸಂಪೂರ್ಣ ಅಭಿವೃದ್ಧಿಗೊಳಿಸಲು ಪ್ರಯತ್ನಿಸ ಲಾಗಿದೆ. 24 ಲಕ್ಷ ರು. ಶಾಲೆಗಳ 3 ಕೊನೆಗಳ ನಿರ್ಮಾಣ, 15 ಲಕ್ಷ ರು ಅನುದಾನದಲ್ಲಿ ಹೈಮಾಕ್ಸ್ ದೀಪ, 1.48ಲಕ್ಷ ರು ಬ್ರಿಡ್ಜ್ ನಿರ್ಮಾಣಕ್ಕೆ ಅನುದಾನವನ್ನು ನೀಡಿ ಅಭಿವೃದ್ಧಿಪಡಿಸಲಾಗಿದೆ.

ಗ್ರಾಮದ ಎಲ್ಲಾ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ನಾನು ರಾಜಕೀಯ ಮಾಡಲು ಬಂದಿಲ್ಲ. ಜನರ ಸೇವೆ ಮತ್ತು ಅಭಿವೃದ್ಧಿ ಮಾಡಲು ಬಂದಿದ್ದೇನೆ. ವಿರೋಧ ಪಕ್ಷದವರು ಪ್ರತಿಯೊಂದು ಕೆಲಸದಲು ರಾಜಕೀಯ ಮಾಡುತ್ತಿದಾರೆ ಎಂದರು.

ಪ್ರಸ್ತವಿಕವಾಗಿ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೈ. ಎಲ್. ಹಂಪಣ್ಣ ಅವರು ಮಾತನಾಡಿ ವಸತಿ ಯೋಜನೆಯ ಬಗ್ಗೆ ಗ್ರಾಮದ ಜನರಿಗೆ ತಿಳಿಸಿದರು. ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ಮಾತನಾಡಿದರು.

ಈ ಸಂಧರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋವಿಂದರೆಡ್ಡಿ, ಟಿ ಎಚ್ ಓ ಶಿಕ್ಷಣ ಅಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಡಾ. ಗಫಾರ್, ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ನರೇಗಾ ಎಡಿ ನಾಗೇಂದ್ರಪ್ಪ ಬೇಡಕಪಳ್ಳಿ ಅಕ್ಷರ ದಾಸೋಹ ಅಧಿಕಾರಿ ಜಯಪ್ಪ ಚಾಪೆಲ್, ಪಶು ಅಧಿಕಾರಿ ಡಾ. ಡಿ. ಬೊಮ್ಮ ಅವರು ಇದ್ದರು.