Monday, 25th November 2024

21 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಮತ್ತಿಮಡು

ಕಲಬುರಗಿ: ತಾಲೂಕಿನ ಕಲ್ಲಬೇನೂರ್, ಬೋಳೆವಾಡ ಗ್ರಾಮಗಳಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮಡು ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಈ ಗ್ರಾಮಗಳಿಗೆ ಸರಿಯಾದ ರಸ್ತೆಗಳಿರಲಿಲ್ಲ ಹಾಗೂ ಸೇತುವೆ, ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ಸಿಸಿ ರಸ್ತೆ ಇರಲಿಲ್ಲ. ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾಮಗಾರಿಗಳು ಇದೀಗ ಪೂರ್ಣಗೊಳಿಸಲಾಗಿದೆ. ರೈತ ಆರ್ಥಿಕವಾಗಿ ಸದೃಢ ನಾದರೆ ಭಾರತ ಸದೃಢ ವಾಗುತ್ತದೆ ಎಂದು ಅವರು ಹೇಳಿದರು.

ಬೋಳೇವಾಡ ಗ್ರಾಮದಲ್ಲಿ 17.20 ಕೋಟಿ ವೆಚ್ಚದಲ್ಲಿ ಕಾಮಗಾರಿ ಸಿಸಿ ರಸ್ತೆ, ಬ್ರಿಡ್ಜ್ ಕಂ ಬ್ಯಾರೇಜ್, ಸೇತುವೆ ನಿರ್ಮಾಣ, ಒಳಚರಂಡಿ ಕಾಮಗಾರಿ ಹಾಗೂ ಕಲ್ಲಬೆನೂರ್ ಗ್ರಾಮದಲ್ಲಿ ಸಿಸಿ ರಸ್ತೆ, ಡಾಂಬರ್ ರಸ್ತೆ ಹಾಗೂ ಹೈಮಾಸ್ಟ್ ದೀಪ, ಒಳಚರಂಡಿ, ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಉಪಕರಣಗಳು ಹೀಗೆ ಒಟ್ಟು 3 ಕೋಟಿ 14 ಲಕ್ಷದ ಕೆಲಸ ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನುಳಿದ ಕಲ್ಲಬೇನುೂರ್ ದಿಂದ ಹೆಬ್ಬಾಳವರಿಗೆ ಡಾಂಬರಿಕರಣ, ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಗುತ್ತಿಗೆದಾರರಿಗೆ ಶೀಘ್ರವೇ ಪೂರ್ಣಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು ಬಿಜೆಪಿ ಸಂಗಮೇಶ ವಾಲಿ, ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರು ಅರವಿಂದ ಚೌಹಾಣ್, ಮಂಡಲ ಉಪಾಧ್ಯಕ್ಷ
ವಿನೋದ್ ಪಾಟೀಲ್, ಪ್ರಭು ಕಾಳನೂರ, ವಿಶ್ವನಾಥ್ ಪಾಟೀಲ ವೆಂಕಟ್ ಬೆನೂರ, ಲಿಂಗರಾಜು ಬೋಳೆವಾಡ, ಅರುಣ ಎಸ್ ಮುರಗೊಂಡ್, ರಾಜು ಬೊಳೆವಾಡ, ಅಂಬು ಪೂಜಾರಿ, ಜಿತೇಂದ್ರ ಬೊಗಶೆಟ್ಟಿ, ರಾಜು ಕಮ್ಮಟನ್, ಶರಣಗೌಡ ಪಾಳಾ, ಮಹೇಶ, ಶಿವಯೋಗಿ, ಸೂರ್ಯಕಾಂತ ಪಾಟೀಲ್, ಶಿವಮೂರ್ತಿ, ಈರಣ್ಣ ಹಡಪದ, ಷಣ್ಮುಖ ರೆಡ್ಡಿ, ಜಗದೇವ ಗುತ್ತೇದಾರ,ಕೆ ಸಿ ಪಾಟೀಲ್, ಮಂಜುನಾಥ್ ಸಂಗಾವಿ, ಮಾಣಿಕ ಜಾಧವ್, ನರೇಂದ್ರ ಎಇಇ. ರಾಜು ಹೋನಗುಂಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತಿ ಇದ್ದರು.