Friday, 22nd November 2024

MLA Munirathna: ಶಾಸಕ ಮುನಿರತ್ನ ವಿರುದ್ದ ಸಿಡಿದೆದ್ದ ಒಕ್ಕಲಿಗ ಸಂಘ

ಶಾಸಕ ಸ್ಥಾನ ರದ್ದುಗೊಳಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನಿರ್ದೇಶಕ ಯಲುವಳ್ಳಿ ರಮೇಶ್ ಒತ್ತಾಯ

ಚಿಕ್ಕಬಳ್ಳಾಪುರ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ನಾಯ್ಡು ಅವರನ್ನು ಜಾತಿ ನಿಂದನೆ ಮತ್ತು ಅಟ್ರಾಸಿಟಿ ಕೇಸಲ್ಲಿ ಬಂಧನ ಮಾಡಲಾಗಿದೆ ನಿಜ. ಆದರೆ ಜನಪ್ರತಿನಿಧಿಯಾಗಿ ಆತ ನಡೆದುಕೊಂಡಿರುವ ರೀತಿ ಸಂವಿಧಾನ ವಿರೋಧವಾಗಿರುವ ಕಾರಣ ಶಾಸಕ ಸ್ಥಾನ ರದ್ಧುಪಡಿಸಬೇಕೆಂದು ರಾಜ್ಯ ಒಕ್ಕಲಿಗೆ ಸಂಘದ ಹಿರಿಯ ನಿರ್ದೇಶಕ ಯಲುವಹಳ್ಳಿ ರಮೇಶ್ ಸರಕಾರವನ್ನು ಒತ್ತಾಯಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಶಾಸಕ ಮುನಿರತ್ನ ವಿರುದ್ದ ತಿರುಗಿಬಿದ್ದಿರುವ ಒಕ್ಕಲಿಗ ಸಮುದಾಯ ಆತನ ಹೇಳಿಕೆಗೆ ಬೇಸರಿಸಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಯಲುವಳ್ಳಿ ರಮೇಶ್ ಮಾತಾಡಿ ಮುನಿರತ್ನ ಅವರ ಶಾಸಕತ್ವ ರದ್ದುಗೊಳಿಸಬೇಕು. ಬಿಜೆಪಿಗೆ ಒಕ್ಕಲಿಗರ ಮೇಲೆನಾದ್ರು ಗೌರವ ಇದ್ದರೆ ಆತನನ್ನು ಪಕ್ಷದಿಂದ ಉಚ್ಚಾಟಿಸ ಬೇಕು ಎಂದು ಒತ್ತಾಯಿಸಿದರು.

ಮುನಿರತ್ನ ಶಾಸಕ ಸ್ಥಾನವನ್ನು ಕೂಡಲೆ ರದ್ದುಗೊಳಿಸಬೇಕು. ಮತ್ತೊಮ್ಮೆ ಯಾವುದೇ ಜಾತಿಯವರ ಹೆಸರೇಳಿ ನಿಂಧಿಸಬಾರದು. ಬಿಜೆಪಿ ಪಕ್ಷದ ಮುಖಂಡರು ಇದನ್ನು ಗಂಬೀರವಾಗಿ ಪರಿಗಣಿಸಿ ಆತನನ್ನು ಪಕ್ಷದಿಂದಲೆ ಅಮಾ ನತು ಮಾಡಬೇಕು. ಆದರೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅತನನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಆರ್ ಅಶೋಕ್ ಒಕ್ಕಲಿಗ ಜಾತಿಯಲ್ಲಿ ಹುಟ್ಟಿದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುವಂತೆ ಆಡುತಿದ್ದಾರೆ. ಮುನಿರತ್ನ ಸಾವಿರಾರು ಕೋಟಿ ಅಕ್ರಮವಾಗಿ ಸಂಪಾದನೆ ಮಾಡಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ದುರಹಂಕಾರಿ, ಒಕ್ಕಲಿಗ ಜಾತಿಯ ಗುತ್ತಿಗೆದಾರನನ್ನು ಮನೆಯಲ್ಲಿ ಕೂಡಿ ಹಾಕಿ ಅವರ ಹೆಣ್ಣು ಮಕ್ಕಳ ಬಗ್ಗೆ ಅಸಭ್ಯ ಮಾತುಗಳಾಡಿ ಅವಮಾನ ಪಡಿಸಿದ್ದಾನೆ. ಆತನನ್ನು ಶಾಶ್ವತವಾಗಿ ಶಾಸಕ ಸ್ಥಾನದಿಂದ ದೂರ ಇಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಒಕ್ಕಲಿಗ ಸಮುಧಾಯದ ಮುಖಂಡರು ಪುರದಗಡ್ಡೆ ಕೃಷ್ಣಪ್ಪ, ಕೊಂಡೇನಹಳ್ಳಲಿ ಚಂದ್ರಪ್ಪ, ಮೈಲಪನಹಳ್ಳಿ ಪ್ರಭಾಕರ್, ವಸಂತ, ಲಕ್ಷ್ಮಣ್ ಇತರರು ಇದ್ದರು.