Friday, 22nd November 2024

MLA Munirathna: ಮುನಿರತ್ನ  ಸದಸ್ಯತ್ವ ಅಮಾನತುಗೊಳಿಸಲು ಒತ್ತಾಯ 

ತುಮಕೂರು: ಶಾಸಕ ಮುನಿರತ್ನ (MLA Munirathna) ಮಾಡಿರುವ ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ ಹನಿಟ್ರ್ಯಾಪ್ ಹಾಗೂ ಆ‌ ಮೂಲಕ ಜೀವ ವಿರೋಧಿ ಏಡ್ಸ್ ರೋಗ ಹರಡುವ ದುಷ್ಖೃತ್ಯದ ಆರೋಪಗಳನ್ನು ಹೊತ್ತು ಜೈಲು ಪಾಲಾಗಿದ್ದಾರೆ.

ಇದು ಶಾಸನ ಸಭಾ ಸ್ಥಾನಕ್ಕೆ ಮತ್ತು ಅವರು ಶಾಸಕನಾಗಿ ಮಾಡಿದ ಪ್ರತಿಜ್ಞೆಗೆ ತೀವ್ರ ಅಪಮಾನ ಉಂಟು ಮಾಡಿರುವುದನ್ನು ಸಂವಿಧಾನ ವಿರೋಧಿ ನಡೆಯನ್ನು ಎತ್ತಿ ತೋರುತ್ತಿದೆ.

ಶಾಸನ ಸಭೆಯ ಘನತೆಯನ್ನು ಎತ್ತಿ ಹಿಡಿಯಲು ಈ ಕೂಡಲೆ ಅವರ ಶಾಸನ ಸಭಾ ಸ್ಥಾನವನ್ನು ಅಮಾನತಿ ನಲ್ಲಿಡಲು ಮತ್ತು ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ನ್ಯಾಯಂಗ ಸುಪರ್ಧಿಯ ತನಿಖೆಗೊಳಪಡಿಸಲು ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)  ಜಿಲ್ಲಾ ಸಮಿತಿ ಪದಾಧಿಕಾರಿಗಳು  ಒತ್ತಾಯಿಸಿದ್ದಾರೆ.

ಅದೇ ರೀತಿ, ಶಾಸನ ಸಭೆಯ ಘನತೆಯನ್ನು ಎತ್ತಿ  ಹಿಡಿಯಲು ಶಾಸಕ ಮುನಿರತ್ನರ ಅಮಾನತಿಗೆ ಕ್ರಮವಹಿಸು ವಂತೆಯು ವಿಧಾನ ಸಭೆಯ ಅಧ್ಯಕ್ಷರಿಗೂ ಸಿ.ಪಿ.ಐ(ಎಂ) ಮುಖಂಡರು ಆಗ್ರಹಿಸಿದ್ದಾರೆ.‌

ಇದನ್ನೂ ಓದಿ: Tumkur News: ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಪೊಲೀಸರ ನಡೆ