Friday, 25th October 2024

MLA Pradeep Eshwar: 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಶಾಸಕ ಪ್ರದೀಪ್ ಈಶ್ವರ್

ಅ.15 ರಿಂದ ನವೆಂಬರ್ 15ರ ವರೆಗೂ ನೊಂದಣಿಗೆ ಅವಕಾಶ;
ಪ್ರದೀಪ್ ಈಶ್ವರ್ ಎಂಎಲ್‌ಎ ಡಾಟ್ ಕಾಮ್ ಮೂಲಕ ಅರ್ಜಿಸಲ್ಲಿಸುವ ಸರಳ ಮಾರ್ಗ
ಪ್ರದೀಪ್ ಈಶ್ವರ್ ಸ್ಕಾಲರ್‌ಶಿಪ್-೨೦೨೪ ಹೆಸರಿನ ಕರಪತ್ರ ಬಿಡುಗಡೆಗೊಳಿಸಿ ಹೇಳಿಕೆ

ಚಿಕ್ಕಬಳ್ಳಾಪುರ : ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಖಾಸಗಿ ಶಾಲಾ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲಮೊ,ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ 10ಸಾವಿರ ಬಡ ವಿದ್ಯಾರ್ಥಿಗಳಿಗೆ ಪ್ರದೀಪ್ ಈಶ್ವರ್ ಸ್ಕಾಲರ್‌ಶಿಪ್-2024 ಹೆಸರಿನಲ್ಲಿ ವಿದ್ಯಾರ್ಥಿವೇತನ ನೀಡಲಾಗುವುದು.ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂಕವಾಗಿದ್ದು ಪ್ರದೀಪ್ ಈಶ್ವರ್ ಎಂಎಲ್‌ಎ ಡಾಟ್ ಕಾಮ್ ಮೂಲಕ ಅರ್ಜಿ ಸಲಿಸಬಹುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರ ಹೊರವಲಯ ಕಂದವಾರದ ಸಮೀಪವಿರುವ ಶಾಸಕರ ಸ್ವಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿ ಗೋಷ್ಟಿಯಲ್ಲಿ ಪ್ರದೀಪ್ ಈಶ್ವರ್ ಸ್ಕಾಲರ್‌ಶಿಪ್-೨೦೨೪ ಹೆಸರಿನ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ ದರು.

ಪ್ರದೀಪ್ ಈಶ್ವರ್ ಸ್ಕಾಲರ್ ಶಿಪ್ ೨೦೨೪ ಹೆಸರಿನ ಪೋಷ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ 60180 ಮನೆಯಿದ್ದು ಪ್ರತಿಮನೆಗೆ ಈ ವಿದ್ಯಾರ್ಥಿ ವೇತನದ ಮಾಹಿತಿಯುಳ್ಳ ಕರಪತ್ರವನ್ನು ಒಂದು ತಿಂಗಳ ಅಭಿಯಾನದ ಮೂಲಕ ತಲುಪಿಸುವ ಕೆಲಸ ಮಾಡುತ್ತೇನೆ.ಕ್ಷೇತ್ರ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ  ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ, ಐಟಿಐ, ಪಿಯುಸಿ, ಪದವಿ,ಸ್ನಾತಕೋತ್ತರ ಪದವಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರದೀಪ್ ಈಶ್ವರ್ 2024 ಹೆಸರಿನ ಸ್ಕಾಲರ್ ಶಿಪ್‌ಗಾಗಿ ಅರ್ಜಿ ಸಲಿಸಬಹುದು ಎಂದರು.

ಪ್ರದೀಪ್ ಈಶ್ವರ್ ಸ್ಕಾಲರ್‌ಶಿಪ್ ಪಡೆಯಲು ಯಾವುದೇ ನಿರ್ಬಂಧವಿಲ್ಲ, ಜಾತಿ,ಮತ, ಸಮಾಜ, ಸಮುದಾಯದ,ಪಕ್ಷ ಪಾರ್ಟಿಯ ನಿರ್ಭಂಧ ಇಲ್ಲವೇ ಇಲ್ಲ.ಇದು ಪಕ್ಷಾತೀತವಾದ ಕಾರ್ಯಕ್ರಮವಾಗಿದೆ.ಬಡತನದಲ್ಲಿ ಓದುವ ವಿದ್ಯಾರ್ಥಿ ಗಳು ಸರಕಾರಿ ಇರಲಿ ಖಾಸಗಿ ಇರಲಿ ಯಾವ ವ್ಯವಸ್ಥೆಯಲ್ಲಿ ಓದುತ್ತಿದ್ದರೂ ಅರ್ಜಿ ಸಲ್ಲಿಸಬಹುದು.ಇದಕ್ಕೆ ೭ ರಿಂದ 8 ಕೋಟಿ ಖರ್ಚು ಆಗಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದನ್ನು ಪ್ರತಿವರ್ಷ ಕೊಡುವ ಸಂಕಲ್ಪ ಮಾಡಲಾಗಿದೆ.ಪ್ರಚಾರ ಪಡೆಯದೆ ಕಳೆದ ವರ್ಷ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಎಂಬಿಬಿಎಸ್, ಇಂಜನಿಯರಿ0ಗ್ ಓದುತ್ತಿರುವ ವಿದ್ಯಾರ್ಥಿಗಳನ್ನು ಕರೆಸಿ ವಿದ್ಯಾರ್ಥಿವೇತನ ನೀಡಿದ್ದೆ. ಈ ಬಾರಿ ಹೆಚ್ಚಿನ ವಿದ್ಯಾರ್ಥಿ ಗಳಿಂದ ಬೇಡಿಕೆ ಬಂದ ಕಾರಣ  ಸುದ್ದಿಗೋಷ್ಟಿ ಮಾಡಿ ಮೊದಲೇ ಮಾಹಿತಿಪತ್ರ ಬಿಡುಗಡೆ ಮಾಡಿ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಎಂದರು.

ವಿದ್ಯಾರ್ಥಿಗಳು ಪ್ರದೀಪ್ ಈಶ್ವರ್ ಎಂಎಲ್‌ಎ ಡಾಟ್ ಕಾಮ್ ಮೂಲಕ ಅರ್ಜಿಸಲ್ಲಿಸುವ ಸರಳ ಮಾರ್ಗವನ್ನು ರೂಪಿಸಲಾಗಿದೆ. ನಾವು ಮನೆಮನೆಗೆ ತಲುಪಿಸುವ ಪೋಸ್ಟರ್‌ನಲ್ಲಿರುವ ಸ್ಕ್ಯಾನರ್ ಬಳಸಿ ಅರ್ಜಿ ಸಲ್ಲಿಸಬಹುದು. ಅಲ್ಲಿ ನಿಮ್ಮ ನೊಂದಣಿಗೆ ಅಧಾರ್ ನಂಬರ್ ಹಾಕುವ ಮೂಲಕ ಸುಲಭವಾಗಿ ನೊಂದಾಯಿಸಿಕೊಳ್ಳಬಹುದು ಎಂದರು.

ಈ ಪೋಷ್ಟರ್ ಚಿಕ್ಕಬಳ್ಳಾಪುರ ತಾಲೂಕಿನ ಪ್ರತಿ ಮನೆಗೂ ತಲುಪಲಿದೆ. ವಿದ್ಯಾರ್ಥಿಗಳು ತಾವು ಯಾವುದೇ ತೊಂದರೆ ಇಲ್ಲದೆ, ಮನೆಯಲ್ಲೆ ಕುಳಿತು ಪೋನ್ ಮೂಲಕ ನೊಂದಾಯಿಸಿಕೊ0ಡು ಸದುಪಯೋಗ ಪಡಿಸಿಕೊಳ್ಳಿ ಅ.೧೫ ರಿಂದ ನವೆಂಬರ್ 15ರ ವರೆಗೂ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಎಂದರು.

ದೀಪಾವಳಿಗೆ ೨೦ಸಾವಿರ ಮಕ್ಕಳಿಗೆ ಬಟ್ಟೆ
ಕ್ಷೇತ್ರದಲ್ಲಿ ನಾನು ಎಂಎಲ್‌ಎ ಆದ ಕೂಡಲೇ ಗಂಟು ಮಾಡುವ ಬದಲಿಗೆ ಜನರ ಸಂಕಷ್ಟಗಳ ಪರಿಹಾರಕ್ಕೆ ಅವರ ಮನೆಬಾಗಿಲಿಗೆ ನಾನೇ ಹೋಗಿದ್ದೇನೆ.ಅವರ ಕಷ್ಟಪರಿಹಾರಕ್ಕೆ ಪ್ರದೀಪ್ ಈಶ್ವರ್ ಎಂಎಲ್‌ಎ ಡಾಟ್ ಕಾಮ್ ಪ್ರಾರಂಭಿಸಿದ್ದೇನೆ. ಒಂದುವರೆ ವರ್ಷದಿಂದವರಮಹಾಲಕ್ಷ್ಮೀ ಹಬ್ಬಕ್ಕೆ ನನ್ನ ತಾಯಂದಿರಿಗೆ ಅಕ್ಕತಂಗಿಯರಿಗೆ ಹರಿಸಿಣ ಕುಂಕುಮ ಕೊಡುತ್ತಿದ್ದೇನೆ. ನನ್ನ ಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂದು ವಾರದ ಏಳು ದಿನ ದಿನದ 24ಗಂಟೆ ಕೆಲಸ ಮಾಡುವ 10 ಆಂಬುಲೆನ್ಸ್ ಮೂಲಕ ಉಚಿತ ಸೇವೆ ನೀಡುತ್ತಿದ್ದೇನೆ.ಪ್ರತಿ ದೀಪಾವಳಿಗೆ 20ಸಾವಿರ ಶಾಲಾ ಮಕ್ಕಳಿಗೆ ಹೊಸಬಟ್ಟೆ ಕೊಡಿಸುತ್ತಿದ್ದೇನೆ. ಶಿವರಾತ್ರಿಗೆ ೫ಸಾವಿರ ಅಂಗನವಾಡಿ ಮಕ್ಕಳಿಗೆ ಹೊಸಬಟ್ಟೆ ಕೊಡುವ ಕೆಲಸ ಮಾಡುತ್ತಿದ್ದೇನೆ. ನನ್ನ ಬದುಕನ್ನು ಕ್ಷೇತ್ರದ ಜನರಿಗಾಗಿ ಮೀಸಲಾಗಿಟ್ಟಿದ್ದೇನೆ. ಅಧಿಕಾರಕ್ಕಾಗಿ ನಾನು ಆಸೆಪಟ್ಟವನಲ್ಲ,ಬಂದ ಅವಕಾಶವನ್ನು ಜನಪರವಾಗಿಸುವತ್ತ ಚಿತ್ತ ನೆಟ್ಟಿದ್ದೇನೆ ಎಂದರು.

ಇದನ್ನೂ ಓದಿ: Pradeep Eshwar: ಜಿರಂಜೀವಿ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದ ಶಾಸಕ ಪ್ರದೀಪ್‌ ಈಶ್ವರ್‌; ಮೆಗಾಸ್ಟಾರ್‌ ಮೆಚ್ಚುಗೆ