ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರ ನಗರಗಳಿಗೆ ಶುದ್ಧಕುಡಿಯುವ ನೀರು ಒದಗಿಸುವ ಏಕೈಕ ಜಲಮೂಲವಾದ ಜಕ್ಕಲಮಡಗು ಜಲಾಶಯ 4 ವರ್ಷಗಳ ಬಳಿಕ ಭರ್ತಿಯಾಗಿದ್ದು ಜನಜಾನುವಾರುಗಳಿಗೆ ಒಳಿತಾಗಲಿ ಎಂದು ಬೇಡುತ್ತಾ ಶಾಸಕ ಪ್ರದೀಪ್ ಈಶ್ವರ್ ಬುಧವಾರ ಬೆಳಂಬೆಳಿಗ್ಗೆ ಬಾಹ್ಮೀ ಮಹೂರ್ತದಲ್ಲಿ ಶಾಸ್ತೊçÃಕ್ತವಾಗಿ ಬಾಗೀನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು ೧೯೫೫ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಇಲ್ಲಿ ಈಜಲಾಶಯ ನಿರ್ಮಿಸಲು ಶಂಕುಸ್ಥಾಪನೆ ಮಾಡುತ್ತಾರೆ. ನಂತರದ ದಿನಗಳಲ್ಲಿ ಈ ಜಲಾಶಯ ನಿರ್ಮಾಣವಾಗಿ ಅವಳಿ ನಗರಗಳಿಗೆ ಕುಡಿಯುವ ನೀರು ಉಣಿಸುವ ಕೆಲಸ ಮಾಡುತ್ತಿದೆ.ಚಿಕ್ಕಬಳ್ಳಾಪುರ ಜನತೆಯ ಒಳ್ಳೆಯತನ ಹೃದಯ ವೈಶಾಲ್ಯತೆ ಕಾರಣವಾಗಿ ಜಲಾಶಯ ತುಂಬಿ ಕೋಡಿಯಾಗಿ ಹರಿಯುತ್ತಿದೆ. ಇಲ್ಲಿಂದ ಚಿಕ್ಕಬಳ್ಳಾಪುರ ನಗರಕ್ಕೆ ಶೇ ೬೭ರಷ್ಟು, ಬಳಸಿದರೆ ದೊಡ್ಡಬಳ್ಳಾಪುರಕ್ಕೆ ಶೆ೩೩ರಷ್ಟು ಬಳಸಲಾಗುತ್ತಿದೆ.ಹೀಗೆ ನಗರಕ್ಕೆ ಪ್ರತಿದಿನ ೧೦ ಎಂಎಲ್ಡಿನಂತೆ ನೀರು ಹರಿಸಿ ದರೂ ೨೧೦ ದಿನಗಳಿಗೆ ಆಗಲಿದೆ.ಆದರೆ ಪ್ರಸ್ತುತ ಬೋರ್ವೆಲ್ಗಳ ನೀರನ್ನು ಬಳಸುತ್ತಿರುವುದರಿಂದ ಪ್ರತಿದಿನ ೫.೫ ಎಂಎಲ್ಡಿ ಬಳಸಿದರೆ ಒಂದುವರೆ ವರ್ಷಕ್ಕೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ತುಂಬಾ ಸಂತೋಷ ಕೊಡುವ ವಿಚಾರವಾಗಿದೆ ಎಂದರು.
ವರುಣದೇವ ಕರುಣೆ ತೋರಿ ನೀರುಸುರಿಸಿದ ಪರಿಣಾಮ ಜಲಾಶಯ ತುಂಬಿದೆ.ಇದೇ ಸಂತೋಷದಲ್ಲಿ ಶಾಸಕನಾಗಿ ಬಂದು ಬಾಗೀನ ಅರ್ಪಿಸಿ ಗಂಗಾಮಾತೆಗೆ ನಮಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನ ಜತೆಗೆ ಹಾಜರಿದ್ದ ಪೋಶೆಟ್ಟಹಳ್ಳಿ ಭಾಗದ ಹಿರಿಯ ಕಾಂಗ್ರೆಸ್ ಮುಖಂಡ ಭರಣಿ ವೆಂಕಟೇಶ್,ನಾರಾಯಣಸ್ವಾಮಿ, ಸುಧಾಕರ್ ಸೇರಿ ಎಲ್ಲಾ ಮುಖಂಡ ರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.ತಹಶೀಲ್ದಾರ್ ಅನಿಲ್, ಇಒ ಮಂಜುನಾಥ್ ಮತ್ತಿತರರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ನನಗಿರುವ ಮಾಹಿತಿಯಂತೆ ೨೦೨೮ಕ್ಕೆ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರುತ್ತೆ.ಅಲ್ಲಿಯವರೆಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ.ಎತ್ತಿನಹೊಳೆ ನೀರು ಬಂದರೆ ೨೦ ಕೆರೆಗಳಿಗೆ ಕುಡಿಯುವ ಉದ್ದೇಶಕ್ಕೆ ಈ ನೀರನ್ನು ತುಂಬಿಸಿ ಬಳಸಲಾಗುವುದು ಎಂದು ತಿಳಿಸಿದರು.\
ಇದನ್ನೂ ಓದಿ: Chikkaballapur Reservoir: ಮೈದುಂಬಿ ಹರಿದ ಜಲಾಶಯಗಳು: ಬಾಗಿನ ಅರ್ಪಣೆಗೆ ನಗರಾಡಳಿತ ಸಿದ್ಧತೆ