Friday, 13th December 2024

ಶಾಸಕ ಹರೀಶ್ ಪೂಂಜಾ ಕಾರನ್ನು ಅಡ್ಡಗಟ್ಟಿ ನಿಂದನೆ, ಜೀವ ಬೆದರಿಕೆ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರಿಗೆ ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಯೊಡ್ಡಿದ್ದಾರೆಂದು ಬಂಟ್ವಾಳ ಗ್ರಾಮಂತರ ಪೊಲೀಸ್‌ ಠಾಣೆಯಲ್ಲಿ ಕಾರಿನ ಚಾಲಕ ದೂರು ದಾಖಲಿಸಿದ್ದಾರೆ.

ಶಾಸಕರು ಗುರುವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಆಗಮಿಸಿ ಕಾರಿನಲ್ಲಿ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭ ನಗರದ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡ ಗಟ್ಟಿ ನಿಂದಿಸಿದ್ದಲ್ಲದೆ, ಮಾರಕಾಸ್ತ್ರ ತೋರಿಸಿ ಬೆದಿರಿಸಿದರೆಂದು ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ.

ಗುರುವಾರ ರಾತ್ರಿ 11.30ರ ವೇಳೆಗೆ ಘಟನೆ ನಡೆದಿದ್ದು, ದುಷ್ಕರ್ಮಿಗಳು ಪಡೀಲ್‌ನಿಂದ ಫರಂಗಿಪೇಟೆ ಯವರೆಗೆ ಶಾಸಕರ ಕಾರನ್ನು ಬೆನ್ನಟ್ಟಿದ್ದು, ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವ್ಯಾಚ್ಯವಾಗಿ ಬೈದು ತಲವಾರು ಝಳಪಿಸಿ ಪರಾರಿಯಾಗಿ ದ್ದಾರೆ.

ಗುರುವಾರ ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಮರಳುವ ವೇಳೆ ಮಂಗಳೂರು ಸರ್ಕ್ಯೂಟ್‌ಗೆ ಹೋಗಿ ಅಲ್ಲಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ರಾತ್ರಿ 10:75ರ ವೇಳೆಗೆ ಶಾಸಕರು ಸಂಬಂಧಿಕರ ಕಾರಿನಲ್ಲಿ, ನಾನು ಶಾಸಕರ ಕಾರಿನಲ್ಲಿ ತೆರಳುತ್ತಿದ್ದೆವು. ಪಡೀಲ್ ಮಾರ್ಗವಾಗಿ ಬರುತ್ತಾ ನಾಗುರಿ ರೈಲ್ವೇ ಬ್ರಿಡ್ಜ್‌ ತಳಭಾಗದಲ್ಲಿ ಸ್ಕಾರ್ಪಿಯೋ ಕಾರೊಂದು ಮೊದಲು ನಾನು ಚಲಾಯಿಸುತ್ತಿದ್ದ ಶಾಸಕರ ಕಾರನ್ನು ಹಿಂಬಾಲಿಸುತ್ತಿತ್ತು, ಇದನ್ನು ಗಮನಿಸಿ ನಾನು ಶಾಸಕರಿಗೆ ಕರೆ ಮಾಡಿದೆ. ಅವರು ತಾವಿದ್ದ ಕಾರನ್ನು ಹಿಂಬಾಲಿಸುವಂತೆ ತಿಳಿಸಿದರು.