ಚಿಕ್ಕನಾಯಕನಹಳ್ಳಿ : ಅಧಿಕಾರಿಗಳು ಸಭೆಗೆ ತಯಾರಾಗಿ ಬರಬೇಕು. ಯಾವುದೇ ನಿಖರ ಮಾಹಿತಿ ಸಂಬAಧಪಟ್ಟ ಇಲಾಖೆ ಯಿಂದ ದೊರೆಯುತ್ತಿಲ್ಲ. ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿ ಇಲಾಖೆವಾರು ಸಿಗಬೇಕು ಎಂದು ಶಾಸಕ ಸಿ.ಬಿ.ಸುರೇಶಬಾಬು ಎಚ್ಚರಿಸಿದರು.
ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಸಭೆ ನಡೆಯುವ ಹದಿನೈದು ದಿನ ಮುಂಚಿತವಾಗಿ ದಸಂಸ ನೀಡುವ ದೂರುಗಳು, ಮನವಿಗಳನ್ನು ಪಡೆದು ಪರಿಶೀಲಿಸಿ ವರದಿ ತಯಾರಿಸಿಕೊಳ್ಳಿ ಪರಿಶಿಷ್ಟರ ಸಭೆಯಲ್ಲಿ ಪ್ರತಿ ಇಲಾಖೆಯವರು ಕೈಗೊಂಡಿರುವ ಯೋಜನೆಗಳು, ಪ್ರಕರಣಗಳ ಬಗ್ಗೆ ಕ್ರಮ ಕೈಗೊಂಡಿ ರುವ ಕುರಿತು ಸಭೆಗೆ ವರದಿ ಮಂಡನೆ ಮಾಡಿ ಎಂದು ಸಮಾಜ ಕಲ್ಯಾಣಾಧಿ ಕಾರಿ ದಿನೇಶ್ ಅವರಿಗೆ ಸೂಚಿಸಿದರು.
ಕೊಡಲಾಗರ ಸರ್ವೆ ನಂ ೯೨ ಮತ್ತು ಕಂದಿಕೆರೆ ಹೋಬಳಿ ಮಾದನಹಳ್ಳಿ ಸರ್ವೆ ನಂ ೧೫ ರ ಜಮೀನುಗಳ ಮೂಲ ದಾಖಲಾತಿ ಗಳನ್ನು ತಾಲ್ಲೂಕು ಕಚೇರಿ ಸಿಬ್ಬಂದಿ ಕಳೆದಿದ್ದಾರೆ. ಕೈಬರಹದ ಪಾಣಿ, ಸ್ಕೆಚ್ ಸಂಬAಧಿಸಿ ದAತೆ ದಾಖಲೆಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಜೆರಾಕ್ಸ್ ಮಾಡಿಸುತ್ತಾರೆ. ಇದು ನಿಲ್ಲಬೇಕೆಂದು ರಂಗಸ್ವಾಮಯ್ಯ ಒತ್ತಾಯಿಸಿದಾಗ ತಹಸೀಲ್ದಾರ್ ಪ್ರತಿಕ್ರಿಯಿಸಿ ಕಳೆದಿರುವುದಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚುತ್ತೇನೆ. ಜೆರಾಕ್ಸ ಯಂತ್ರ ಕೆಟ್ಟಿದ್ದು ಅದನ್ನು ಸರಿಪಡಿಸಲಾಗಿದೆ. ದಾಖಲೆಗಳನ್ನು ಕಂಪ್ಯೂಟರಿಕರಣ ಮಾಡಲಾಗುತ್ತಿದೆ. ನೂತನ ಕಚೇರಿಗೆ ಸ್ಥಳಾಂತರಗೊಳ್ಳುವ ಮುನ್ನ ಈ ಪ್ರಕ್ರಿಯೆ ಪೂರ್ಣ ಗೊಳಿಸಲಾಗುವುದೆಂದು ಭರವಸೆ ನೀಡಿದರು.
ದಂಡ ಹಾಕುವ ಪ್ರಕ್ರಿಯೆ ಎಲ್ಲಾ ಸಮುದಾಯದಲ್ಲೂ ಇದೆ
ಅಂತರ್ಜಾತಿ ವಿವಾಹವಾದರೆ ಎಲ್ಲಾ ಸಮುದಾಯಗಳಲ್ಲೂ ದಂಡ ಹಾಕುವ ಪ್ರಕ್ರಿಯೆ ಇದೆ. ಎಲ್ಲಾ ಊರುಗಳಲ್ಲೂ ಇದು ನಡೆಯತ್ತಿದ್ದು ಯಾವುದೋ ರೀತಿಯಲ್ಲಿ ದಂಡ ವಸೂಲಿ ಮಾಡುತ್ತಾರೆ. ಊರಿನ ಹಿತದೃಷ್ಟಿಯಿಂದ ಈ ಪ್ರಕ್ರಿಯೆ ನಡೆಸುತ್ತಿದ್ದು ಇದನ್ನೇ ದೊಡ್ಡದು ಮಾಡಿಕೊಂಡು ಇಲಾಖೆಯವರು ಮಧ್ಯ ಪ್ರವೇಶಿಸುತ್ತಿದ್ದಾರೆ. ಇದರಿಂದ ಆಲದಕಟ್ಟೆ ತಾಂಡ್ಯ ಎರಡು ಭಾಗವಾಗಿದ್ದು ಹಬ್ಬವನ್ನು ಮಾಡಲಾಗಿಲ್ಲ. ಒಂದು ಶಾಂತಿ ಸಭೆ ನಡೆಸಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಒಬ್ಬ ಖಾಸಗಿ ಶಾಲಾ ಶಿಕ್ಷಕನಿಂದ ತಾಂಡ್ಯದಲ್ಲಿ ಅಶಾಂತಿ ಮೂಡಿದೆ ಎಂದು ಹೇಳುವ ಮೂಲಕ ಮುಖಂಡ ರಘುನಾಥ್ ಪರೋಕ್ಷವಾಗಿ ದಂಡ ವಸೂಲಿಗೆ ಬೆಂಬಲಿಸಿದರು.
ಸಭೆಯಲ್ಲಿ ಸಿಂಗದಹಳ್ಳಿ ರಾಜಕುಮಾರ್, ಬೇವಿನಹಳ್ಳಿ ಚನ್ನಬಸವಯ್ಯ, ಲಿಂಗದೇವರು, ವಸಂತಕುಮಾರ್, ತೀರ್ಥಪುರ ಕುಮಾರ್, ಸಿಪಿಐ ನಿರ್ಮಲ, ಇಓ ವಸಂತಕುಮಾರ್ ಸೇರಿದಂತೆ ಇಲಾಖಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.