ಅಭಿವೃದ್ದಿ ಕಾರ್ಯಕ್ಕೆ ತಲೆ ಭಾಗಿದ ಮತದಾರ
ಮಂಜು ಕಲಾಲ
ಬಸವನಬಾಗೇವಾಡಿ: ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ೬೮೧೨೬ ಮತಗಳನ್ನ ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ೪೩೨೬೩ ಮತಗಳನ್ನ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ೬೮೧೨೬ ಮತಗಳನ್ನ ಪಡೆಯುವ ಮೂಲಕ ೨೪೮೬೩ ಮತಗಳ ಅಂತರದಿoದ ಭರ್ಜರಿ ಗೆಲುವು ಸಾದಿಸಿದ್ದಾರೆ ಬಿಜೆಪಿಯಿಂದ ಟಿಕೆಟ್ ವಂಚಿತಗೊ0ಡು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಸೋಮನ ಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ೪೦೧೯೭ ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
೨೦೧೮ರಲ್ಲಿ ಶಾಸಕ ಶಿವಾನಂದ ಪಾಟೀಲ ೫೮,೬೪೭ ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ನಿಂದ ಸ್ಫರ್ಧೆ ಮಾಡಿದ್ದ ಸೋಮನಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ಅವರನ್ನ ೩೧೮೬ ಅಲ್ಪ ಮತಗಳ ಅಂತರದಿ0ದ ಸೂಲಿಸುವ ಮೂಲಕ ಗೆಲುವು ಸಾಧಿಸಿ ದ್ದರು.
ನಂತರದಲ್ಲಿ ಅಪ್ಪುಗೌಡ ಪಾಟೀಲ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು ಕೊನೆ ಗಳಗೆಯಲ್ಲಿ ಟಿಕೆಟ್ ಮಿಸ್ ಆದ ಪರಿಣಾಮ ಮತ್ತೆ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಜೆಡಿಎಸ್‌ನಿಂದ ಸ್ಫರ್ಧೆ ಮಾಡಿದರೂ ಕೂಡ ಕಳೆದ ಬಾರಿಯಷ್ಟು ಮತ ಡೆಯಲು ಸಾಧ್ಯವಾಗಲಿಲ್ಲ ಪಕ್ಷ ಬದಲಾವಣೆ ಮಾಡಿರು ವುದೇ ಅಪ್ಪುಗೌಡರ ಹಿನ್ನಡೆಗೆ ಕಾರಣವಾಯಿತು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಶಾಸಕ ಶಿವಾನಂದ ಪಾಟೀಲ ಅವರಿಗೆ ೨೦೦೮ ರಲ್ಲಿ ಸೊಲಿನ ರುಚಿ ಉಣಿಸಿದ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ೨೦೨೩ರಲ್ಲಿ ಮತ್ತೆ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಫರ್ಧೆ ಮಾಡಿದ್ದರು ಇದು ನನ್ನ ಕೊನೆ ಚುನಾವಣೆ ಎಂಭ ಅಸ್ತçದ ಮೂಲಕ ಜರ ಮುಂದೆ ಬಂದ ಮಾಜಿ ಸಚಿವ ಬೆಳ್ಳುಬ್ಬಿ ಅವರು ಕ್ಷೇತ್ರದ ಮತದಾರನ ಮನಸನ್ನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನ ಮಾಡಿರುವ ಶಾಸಕ ಶಿವಾನಂದ ಪಾಟೀಲ ಅವರು ಅಭಿವೃದ್ದಿಗಾಗಿ ನನಗೆ ಮತ ನೀಡಿ ಎಂದು ಜನರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
೨೦೧೩ ರಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಶಿವಾನಂದ ಪಾಟೀಲ ಅವರು ೨೦೦೪ರ ಚುನಾವಣೆ ಸೇರಿದಂತೆ ಒಟ್ಟು ನಾಲ್ಕು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲಿಯೇ ಚಾಣಾಕ್ಯ ರಾಜಕಾರಣಿ ಎಂದು ಹೆಸರು ವಾಸಿಯಾದ ಶಾಸಕ ಶಿವಾನಂದ ಪಾಟೀಲ ೨೦೨೩ರ ವಿಧಾನ ಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಚಾಣಾಕ್ಷö್ಯ ರಾಜಕಾರನಿ ನ್ನುವುದನ್ನು ಸಾಬೀತು ಪಡಿಸಿದ್ದಾರೆ.