Thursday, 12th December 2024

ಶಾಸಕ ಶಿವರಾಮ ಹೆಬ್ಬಾರ್ ಗೆ ಶಾಲು ಹೊದೆಸಿ ಸನ್ಮಾನ

ಮುಂಡಗೋಡು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವಗಳು ಚುರುಕು ಗೊಂಡಿದ್ದು, ಕಾರ್ಯಕರ್ತರ ಉತ್ಸಾಹ ಯಲ್ಲಾಪುರ-ಮುಂಡಗೋಡು ಕ್ಷೇತ್ರದಲ್ಲಿ ಭಾರೀ ಬಿರುಸಿನಿಂದ ಕೂಡಿದೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕ್ಷೇತ್ರದಲ್ಲಿ ಚುರುಕಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ತಾಲೂಕಿನ ತೊಗ್ರಳ್ಳಿ, ಬೆಡ್ಸಗಾಂವ್ ಭಾಗದ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಇತ್ತಿಚಿಗೆ ಭಾಜಪಾಗೆ ಸೇರ್ಪಡೆಯಾದರು.

ತೊಗ್ರಳ್ಳಿಯ ಪ್ರಸನ್ನ ಹೆಗಡೆ ಮನೆಯಲ್ಲಿ ಮಂಗಳವಾರ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅಭಿವೃದ್ಧಿ ಕಾರ್ಯಕ್ರಮ ಹಾಗು ಭಾಜಪಾದ ಸಿದ್ಧಾಂತಕ್ಕೆ ಬದ್ಧರಾಗಿ ಹಲವಾರು ಕಾರ್ಯ ಕರ್ತರು ಬಿಜೆಪಿಗೆ ಸೇರ್ಪಡೆಯಾದರು‌. ಇದೇ ವೇಳೆ ಪ್ರಸನ್ನ ತಿರುಮಲೇಶ್ವರ ಹೆಗಡೆ ಕುಟುಂಬದಿಂದ ಶಾಸಕ ಶಿವರಾಮ ಹೆಬ್ಬಾರ್ ಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.

ಈ ಸಭೆಯಲ್ಲಿ ಮಹಾಶಕ್ತಿಕೇಂದ್ರದ ಅಧ್ಯಕ್ಷರು, ಶಕ್ತಿಕೇಂದ್ರದ ಅಧ್ಯಕ್ಷರು, ಬೂತ್‌ ಅಧ್ಯಕ್ಷರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು, ಪಟ್ಟಣ ಪಂಚಾಯತ ಪಂಚಾಯಿತಿ ಸದಸ್ಯರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಶಕ್ತಿಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.