Sunday, 15th December 2024

MLA Arvind Bellad apologize: ಸಿಎಂಗೆ ಕ್ಷಮೆ ಕೋರಿದ ಶಾಸಕ ಬೆಲ್ಲದ್‌: ಟ್ವೀಟ್‌ ಮೂಲಕ ಕಾರ್ಯ ಶ್ಲಾಘಿಸಿದ ಸಿಎಂ

ಬೆಂಗಳೂರು: ಓರ್ವ ಶಾಸಕನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ʼಚಾರಿತ್ರ್ಯಹರಣದ ಪದ ಬಳಕೆ ಕೇಳಿದ್ದೇನೆ. ಇದಕ್ಕಾಗಿ ಈ ಕ್ಷಮೆಯಾಚಿಸುತ್ತೇನೆ ಎಂದು ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿದ್ದಾರೆ.

ಬೆಲ್ಲದ್‌ ಅವರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಬೆಲ್ಲದ್‌ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ತಮ್ಮ ಟ್ವೀಟ್‌ ನಲ್ಲಿ ಬೆಲ್ಲದ್‌ ನಡೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದ್ದಾರೆ.

ಬೆಲ್ಲದ್‌ ನಡೆಯನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಬೆಲ್ಲದ್‌ ಬಗ್ಗೆ ದ್ವೇಷ, ಬೇಸರ ಇಲ್ಲ. ಬೆಲ್ಲದ್‌ ಬೇಸರದಿಂದ ಕ್ಷಮೆ ಕೇಳಿದ್ದಾರೆ. ಇದು ಹೊಸತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಆಗಿದೆ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ವಿಪಕ್ಷಗಳು ಹಲವು ಕಿರಿಯ, ಹಿರಿಯ ನಾಯಕರಿಂದ ನಿಂದನೆ ಮಾಡಿದ್ದಾರೆ. ಬೆಲ್ಲದ್‌ ನಡೆ ಮೌಲ್ಯಯುತ ರಾಜಕಾರಣದ ಸಂಕೇತವಾಗಿದೆ. ಪಶ್ಚಾತ್ತಾಪಕ್ಕಿಂತ ಪ್ರಾಯಶ್ಚಿತ ಬೇರೊಂದಿಲ್ಲ ಎಂದು ಹೇಳಿದ್ದಾರೆ.