Sunday, 24th November 2024

MLA Subbareddy: ಜೋಡಿಗೊಂದು ಉಚಿತ ಸೀಮೆ ಹಸು  ನೊಂದಣೆಗೆ ನ.25 ಕೊನೆ ದಿನ: ಶಾಸಕ ಸುಬ್ಬಾರೆಡ್ಡಿ

ಡಿ.6 ರಂದು 22ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ಬಾಗೇಪಲ್ಲಿ: ಎಸ್.ಎನ್. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಉಚಿತ ಸಾಮೂ ಹಿಕ ವಿವಾಹ ಮಹೋತ್ಸವವನ್ನು ಗಡಿದಂ ಲಕ್ಷ್ಮೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಡಿಸೆಂಬರ್ ತಿಂಗಳ ೬ ರಂದು ಹಮ್ಮಿಕೊಳ್ಳಲಾಗಿದ್ದು ವಿವಾಹವಾಗುವ ಪ್ರತಿಜೋಡಿಗೆ ಒಂದೊಂದು ಸೀಮೆಹಸು ನೀಡುವುದಾಗಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು.

ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹ ಕಛೇರಿಯಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಬಾಗೇಪಲ್ಲಿ ತಾಲೂಕಿನಲ್ಲಿ 25 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ನಾನು ಕಳೆದ 21 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹಗಳ ಮೂಲಕ ಅದ್ಧೂರಿ ವಿವಾಹಗಳಿಗೆ ಬ್ರೇಕ್ ಹಾಕಿ ಬಡವರಿಗಾಗಿ ಹಮ್ಮಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಇದುವರೆವಿಗೆ ಉಚಿತ ಸಾಮೂಹಿಕ ವಿವಾಹಗಳಲ್ಲಿ ಸುಮಾರು 7500 ಕ್ಕೂ ಹೆಚ್ಚಿನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 3100 ಸೀಮೆ ಹಸುಗಳನ್ನು ಉಡುಗೊರೆಯಾಗಿ ಜೀವನ ನಿರ್ವಹಣೆಗಾಗಿ ಉಚಿತವಾಗಿ ನೀಡಲಾಗಿದೆ. ನನ್ನ ಆರಾಧ್ಯದೈವ ಗಡಿದಂ ಲಕ್ಷ್ಮೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಕಳೆದ ವರ್ಷ ನಡೆದ ಉಚಿತ ಸಾಮೂಹಿಕ ವಿವಾಹಗಳಲ್ಲಿಯೇ ನನ್ನ ಏಕೈಕ ಪುತ್ರ ಅಭಿಷೇಕ್ ಸುಬ್ಬಾರೆಡ್ಡಿಯವರ ಮದುವೆಯೂ ನಡೆದದ್ದು ದೈವಪ್ರೇ ರಣೆಯಾಗಿತ್ತು ಇದು ನಮ್ಮ ಕುಟುಂಬಕ್ಕೆ ಅತೀವ ಸಂತಸವನ್ನು ನೀಡಿತ್ತು ಎಂದರು.

ಈ ವರ್ಷ ಸಹಾ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹ ಮಾಡಿಕೊಳ್ಳಲು ಬಯಸುವವರು ಕಡ್ಡಾಯವಾಗಿ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಧುವಿಗೆ 18 ವರ್ಷ ಮತ್ತು ವರನಿಗೆ 2ವರ್ಷ ತುಂಬಿರಬೇಕು. ವಯಸ್ಸಿಗೆ ಸಂಬ0ಧಪಟ್ಟ0ತೆ ವಯಸ್ಸು ದೃಢೀಕರಣ ಪತ್ರವನ್ನು ಸಂಬ0ಧಪಟ್ಟ ಅಧಿಕಾರಿಗಳಿಂದ ಪಡೆದು ಸಲ್ಲಿಸಬೇಕು. ವಧು-ವರರ ಸಂಪೂರ್ಣ ವಿಳಾಸವನ್ನು ಸ್ಪಷ್ಟವಾಗಿ ಅರ್ಜಿಯಲ್ಲಿ ನಮೂದಿಸಬೇಕು. ವಧು-ವರರ ಸಮ್ಮತಿಯ ಒಪ್ಪಿಗೆ ಪತ್ರದ ಜೊತೆಗೆ ಅವರವರ ತಂದೆ-ತಾಯಿ ಒಪ್ಪಿಗೆಯ ಪತ್ರ ನೀಡಬೇಕಾಗುತ್ತದೆ. ಸಾಮೂಹಿಕ ವಿವಾಹಗಳಲ್ಲಿ ಕಾನೂನು ಬಾಹಿರ ವಿವಾಹಗಳಿಗೆ ಅವಕಾಶವಿಲ್ಲ. ವಿವಾಹ ನೋಂದಣಾಧಿಕಾರಿಗಳ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕು. ವಧು-ವರರ ಒಂದು ಜೊತೆ ಪೋಸ್ಟ್ ಸೈಜ್  ಭಾವಚಿತ್ರವನ್ನು ಅರ್ಜಿಯ ಜೊತೆಗೆ ಕೊಡಬೇಕು. ವಿವಾಹಗಳ ನೊಂದಣಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ೨೫-೧೧-೨೦೨೪ ಆಗಿರುತ್ತದೆ ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಪ್ರತಿ ವರ್ಷದ ಮದುವೆಗಳ  ಈ ವರ್ಷವೂ ಉಚಿತ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗುವ ವಧು ಹಾಗೂ ವರ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕಿನವರಾಗಿದ್ದರೆ ಅಂತಹ ಜೋಡಿಗೆ ಸೀಮೆ ಹಸುವೊಂದನ್ನು ಉಡುಗೊರೆಯಾಗಿ ನೀಡಲಾಗುವುದು, ಮದುವೆ ವಸ್ತ್ರ, ತಾಳಿ, ಕಾಲುಂಗುರಗಳನ್ನು ನೀಡುವುದರ ಜೊತೆಗೆ ಮದುವೆಗೆ ಆಗಮಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ

ಉಚಿತ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದ ಜೋಡಿಗಳಿಗೆ ಸರ್ಕಾರದಿಂದ 50 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೊಡಿಸಲಾಗುವುದು ಮತ್ತು ಕಡುಬಡವ ಎಸ್‌ಸಿ/ಎಸ್‌ಟಿ ಜೋಡಿಗೆ ಭೂಮಿ ಇದ್ದರೆ ಕೊಳವೆಬಾವಿಯನ್ನು ಹಾಕಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪಟ್ಟಣದ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಕಚೇರಿಯನ್ನು ಸಂಪರ್ಕಿಸಬಹುದೆAದು ಕೋರಿದ್ದಾರೆ.

ಇದನ್ನೂ ಓದಿ: MLA Munirathna: ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಶಾಸಕ ಮುನಿರತ್ನ