ಬೆಂಗಳೂರು: ಮಹೀಂದ್ರ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML), ಮಹೀಂದ್ರ ಮತ್ತು ಮಹೀಂದ್ರದ ಒಂದು ಅಂಗಸಂಸ್ಥೆಯಾಗಿದ್ದು, “ಮಹೀಂದ್ರ ಜೀತೊ ಸ್ಟ್ರಾಂಗ್” ಅನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ 200000 ಕ್ಕಿಂತ ಹೆಚ್ಚು ಸಂತೃಪ್ತ ಜೀತೊ ಗ್ರಾಹಕರಿದ್ದಾರೆ. ಜೀತೊ ಬ್ರ್ಯಾಂಡ್‌ನ ಪ್ರಮುಖ ಮೌಲ್ಯ – ಉದ್ಯಮದಲ್ಲೇ ಅತ್ಯುತ್ತಮ ಮೈಲೇಜ್ ನೀಡುವುದನ್ನು ಜೀತೊ ಸ್ಟ್ರಾಂಗ್ ಉಳಿಸಿಕೊಂಡಿದೆಯಲ್ಲದೆ, ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಹೆಚ್ಚು ವೈಶಿಷ್ಟ್ಯಗಳನ್ನು ಹೊತ್ತು ತಂದಿದೆ.
ಕೊನೆ ಮೈಲಿಯ ಕಾರ್ಗೊ ಸಾರಿಗೆಯನ್ನು ಮರುವ್ಯಾಖ್ಯಾನಿಸಲು ಜೀತೊ ಸ್ಟ್ರಾಂಗ್ ಸನ್ನದ್ಧವಾಗಿದೆ. ಡೀಸೆಲ್‌ನಲ್ಲಿ 815 ಕೆಜಿ ಹಾಗೂ CNG ಯಲ್ಲಿ 750 ಕೆಜಿಯಷ್ಟು ಅತಿ ಹೆಚ್ಚಿನ ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಉದ್ಯಮದಲ್ಲೇ ಅತ್ಯುತ್ತಮ ಮೈಲೇಜ್ (ಡೀಸೆಲ್‌ನಲ್ಲಿ 32.00 ಕಿ.ಮೀ/ಲೀ, CNG ಯಲ್ಲಿ 35.00 ಕಿ.ಮೀ/ಕೆಜಿ) ನೀಡುವ ವಿಶೇಷತೆಯನ್ನು ಹೊಂದಿದ್ದು, ಸಬ್-2 ಟನ್ ICE ಕಾರ್ಗೊ 4-ಲರ್‌ನಲ್ಲಿಯೇ ಮೊದಲು ಎನ್ನಬಹು ದಾದ ಎಲೆಕ್ಟ್ರಿಕ್ ವ್ಯಾಕ್ಯೂಮ್ ಪಂಪ್-ಸಹಾಯದ ಬ್ರೇಕಿಂಗ್, ಬಳಕೆದಾರ ಸ್ನೇಹಿ ಹೊಚ್ಚ ಹೊಸ ಡಿಜಿಟಲ್ ಕ್ಲಸ್ಟರ್ ಮತ್ತು ಸುಧಾರಿತ ಸಸ್ಪೆನ್ಶನ್ ಅನ್ನು ಒಳಗೊಂಡಿದೆ.
ಮಾಲೀಕತ್ವದ ಅನುಭವವನ್ನು ಹೆಚ್ಚಿಸಲು, ಡ್ರೈವರ್‌ಗೆ ₹ 10 ಲಕ್ಷ ಮೌಲ್ಯದ ಉಚಿತ ಅಪಘಾತ ವಿಮೆಯನ್ನು ಸಹ ಮಹೀಂದ್ರ ನೀಡಲಿದ್ದು, ತನ್ನ ಗ್ರಾಹಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತದೆ. 3 ವರ್ಷ ಅಥವಾ 72000 ಕಿ.ಮೀ ವಾರಂಟಿಯನ್ನು ಸಹ ಮಹೀಂದ್ರ ಒದಗಿಸಲಿದ್ದು, ಗುಣಮಟ್ಟ ಹಾಗೂ ಬಾಳಿಕೆಯ ಕುರಿತು ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಜೀತೊ ಸ್ಟ್ರಾಂಗ್ ವಾಹನವು ಜೀತೊ ಪ್ಲಸ್ (ಡೀಸೆಲ್ & CNG) ನ ನಂತರದ ವಾಹನವಾಗಿದ್ದು, ಅದಕ್ಕಿಂತಲೂ ಇದು 100 ಕೆಜಿ ಹೆಚ್ಚುವರಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಹೊಸ ಜೀತೊ ಸ್ಟ್ರಾಂಗ್ಗೆ ಕರ್ನಾಟಕ ಎಕ್ಸ್-ಶೋರೂಂ ಬೆಲೆಯ ಪ್ರಕಾರ ಡೀಸೆಲ್‌ಗೆ ₹. 5.28 ಲಕ್ಷ ಮತ್ತು CNG ಗೆ ₹.5.50 ಲಕ್ಷದ ಆಕರ್ಷಕ ದರ ನಿಗದಿಪಡಿಸಲಾಗಿದೆ.
MLMML ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು CEO ಶ್ರೀಮತಿ ಸುಮನ್ ಮಿಶ್ರಾ ಮಾತನಾಡಿ, “ಮಹೀಂದ್ರದಲ್ಲಿ ನಾವು ನಿರಂತರ ವಾಗಿ ಗ್ರಾಹಕರ ಅಭಿಪ್ರಾಯ ಮತ್ತು ಅವರ ಬೆಳೆಯುತ್ತಿರುವ ಅಗತ್ಯಗಳಿಗೆ ಸ್ಪಂದಿಸುತ್ತೇವೆ. ಜೀತೊ ಸ್ಟ್ರಾಂಗ್ – ತನ್ನ ಸಾಟಿ ಯಿಲ್ಲದ ಪೇಲೋಡ್ ಸಾಮರ್ಥ್ಯ, ಅತ್ಯುನ್ನತ ಮೈಲೇಜ್ ಅಷ್ಟೇ ಅಲ್ಲದೆ ಉದ್ಯಮದಲ್ಲಿ ಕೈಗೆಟುಕುವ ಆಯ್ಕೆಯನ್ನಾಗಿ ಮಾಡಿರುವ ಅದರ ಆಕರ್ಷಕ ದರದೊಂದಿಗೆ ನಿರಂತರ ಸುಧಾರಣೆಗೆ ಸಂಬಂಧಿಸಿದಂತೆ ನಮಗೆ ಇರುವ ಬದ್ಧತೆಗೆ ಪುರಾವೆಯಾಗಿದೆ. ಇದು ಕೊನೆ ಮೈಲಿಯ ಕಾರ್ಗೊ ಸಾರಿಗೆಯನ್ನು ಮಾತ್ರ ಬದಲಾಯಿಸುವುದಿಲ್ಲ ಜತೆಗೆ ಡ್ರೈವರ್ ಪಾಲುದಾರರ ಬದುಕನ್ನೂ ಸಹ ಬದಲಾಯಿಸಲಿದ್ದು, ಅವರು ಹೆಚ್ಚು ಡ್ರೈವ್ ಮಾಡಲು, ಹೆಚ್ಚು ಉಳಿಸಲು ಹಾಗೂ ಹೆಚ್ಚು ಸಾಧಿಸಲು ಅವಕಾಶ ಮಾಡಿಕೊಡುತ್ತದೆ” ಎಂದಿದ್ದಾರೆ.