Saturday, 14th December 2024

ಮೊದಲೂರು ಕೆರೆಗೆ ನೀರು ಹರಿಸುವ ಎಸ್ಕೇಪ್ ಗೇಟ್ ತೆರೆದು ಚಾಲನೆ

ಶಿರಾ: ಉಪ ಚುನಾವಣೆ ಸಮಯದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನೀಡಿದ ವಾಗ್ದಾನದಂತೆ ಮೊದಲೂರು ಕೆರೆಗೆ ಹೇಮಾವತಿ ನೀರು ಹರಿಸಿದ್ದಾರೆ.  ಶಿರಾ ದೊಡ್ಡ ಕೆರೆ ಹಾಗೂ ಕಳ್ಳಂಬೆಳ್ಳ ಕೆರೆ ಕೋಡಿ ಬಿದ್ದಿರುವುದರಿಂದ,   ನಾವು ನೀಡಿದ ಭರವಸೆಯಂತೆ ಈ ದಿನ  ಮೊದಲೂರು ಕೆರೆಗೆ ಕಳ್ಳಂಬೆಳ್ಳ ಕೆರೆಯಿಂದ ನೀರು ಹರಿಸ ಲಾಗುತ್ತಿದೆ ಎಂದು ಶಾಸಕ ಡಾಕ್ಟರ್ ಸಿ ಎಂ ರಾಜೇಶ್ ಗೌಡ ತಿಳಿಸಿದರು.
ಸೋಮವಾರ ದೊಡ್ಡ ಕೆರೆ ಹಾಗೂ ಕಳ್ಳಂಬೆಳ್ಳಕೆರೆಗೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ ನಂತರ ಕಳ್ಳಂಬೆಳ್ಳ ಕೆರೆಯಿಂದ ಮೊದ ಲೂರು ಕೆರೆಗೆ ನೀರು ಹರಿಸುವ ಎಸ್ಕೇಪ್ ಗೇಟ್ ತೆರೆದು ಚಾಲನೆ ನೀಡಿದ ನಂತರ ಮಾತನಾಡಿದರು.
ಜುಲೈ ಅಂತ್ಯದೊಳಗೆ ಮೊದಲೂರು ಕೆರೆಗೆ ನೀರು ಹರಿಸುವುದಾಗಿ ತಿಳಿಸಿದ್ದೆವು, ಅದರ ಪ್ರಕಾರ ಈ ದಿನ ನೀರು ಹರಿಸುತ್ತಿದ್ದೇವೆ. ಕಳೆದ ಬಾರಿ ಹೆಚ್ಚುವರಿ ಕೆರೆಗಳಿಗೆ ನೀರು ಹರಿಸಿದ್ದೆವು ಅದರಂತೆ ಈ ಬಾರಿಯೂ ಕೂಡ ನೀರು ಹರಿಸುತ್ತೇವೆ. ಶಿರಾ ತಾಲೂಕ್ ಅತ್ಯಂತ ಬರಪೀಡಿತ ಪ್ರದೇಶವಾಗಿದ್ದು ಸತತ ವರುಣನ ಕೃಪೆಯಿಂದ ಹಾಗೂ ಹೇಮಾ ವತಿ ಹರಿವಿನಿಂದ ಅಂತರ್ಜಲ ಮಟ್ಟ ಹೆಚ್ಚಿದ್ದು ಎಲ್ಲೆಡೆ ಹಸಿರು ಕಂಗೊಳಿಸುವುದರ ಜೊತೆಗೆ ರೈತರ ನೀರಿನ ಸಮಸ್ಯೆ ಬಗೆಹರಿಸಿದೆ ಎಂದರು.
ಯಲಿಯೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯ  ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನೀರು ಹರಿಸಲು ನೆಲದಲ್ಲಿ ಅಳವಡಿಸಿದ್ದ ಪೈಪ್ ಗಳು ಹಾಳಾಗಿದ್ದು ದುರಸ್ತಿಯ ನಂತರ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ ಈ ಹಿಂದೆ ಇದ್ದ ಶಾಸಕರು ಮದಲೂರು ಕೆರೆಯ ನೀರಿನ ವಿಚಾರ ವಾಗಿ ಇದುವರೆಗೂ ರಾಜಕೀಯ ಮಾಡಿಕೊಂಡು ಬಂದರು. ಅವರು ಅವಾಗಲೇ ನೀರನ್ನು ಹರಿಸಬಹುದಾಗಿತ್ತು ಇನ್ನೂ ನಾಲಕ್ಕು ಚುನಾವಣೆಗೆ ಇದನ್ನು ಇಟ್ಟುಕೊಳ್ಳಬೇಕೆಂಬ ದೂರಾಲೋಚನೆಯಿಂದ ಹರಿಸಲಿಲ್ಲ. ಮುಂಬರುವ ಚುನಾವಣೆಯಲ್ಲಿ ನೀರಿನ ರಾಜಕೀಯಕ್ಕೆ ಬ್ರೇಕ್ ಬಿದ್ದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿರಾ ನಗರಸಭೆ ಅಧ್ಯಕ್ಷ ಅಂಜಿನಪ್ಪ, ತುಮಲ್ ನಿರ್ದೇಶಕ ಎಸ್ ಆರ್ ಗೌಡ,  ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾರುತೇಶ್, ಬಿಜೆಪಿ ತಾಲೂಕ್ ಅಧ್ಯಕ್ಷ ವಿಜಯರಾಜ, ಮೂರ್ತಿ ಮಾಸ್ಟ್ರು, ಕೃಷ್ಣಮೂರ್ತಿ, ನಗರ ಸಭೆ ಸದಸ್ಯರುಗಳು, ಗ್ರಾಮ್ ಪಂಚಾಯ್ತಿ ಅಧ್ಯಕ್ಷರು ಸದಸ್ಯರುಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.