Tuesday, 5th November 2024

ಕೇಂದ್ರ ಸರಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಮೊಯ್ಲಿ ಕಿಡಿ

ಸತ್ತು ಹೋಗಿರುವ ಕೇಸಿಗೆ ಜೀವ ತುಂಬುವುದು ಬಿಜೆಪಿಯ ಸಾಧನೆ

ತುಮಕೂರು: ಆದಾಯ ತೆರಿಗೆ ಇಲಾಖೆಯ ಟ್ರಿಬ್ಯುನಲ್, ಚುನಾವಣಾ ಆಯೋಗದಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ ಎಂದು ತರ‍್ಪು ಬಂದು ಸತ್ತು ಹೋಗಿರುವ ನ್ಯಾಷನಲ್ ಹೆರಾಲ್ಡ್ ಕೇಸಿಗೆ ಇಡಿ ಮೂಲಕ ಜೀವ ತುಂಬಿ ಕಾಂಗ್ರೆಸ್ ಮುಖಂಡರಿಗೆ ಅನಗತ್ಯ ಕಿರುಕುಳ ನೀಡುವ ಮೂಲಕ ಪಕ್ಷದ ನೈತಿಕ ಸ್ಥೈರ‍್ಯ ಕುಗ್ಗಿಸುವ ಕೆಲಸವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪಮೊಯಿಲಿ ಆರೋಪಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿನ ಇಡಿ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತಿದ್ದ ಅವರು, ಕಾಂಗ್ರೆಸ್ ಮುಖಂಡರನ್ನು ಪದೇ ಪದೇ ಇಡೀ ಹೆಸರಿನಲ್ಲಿ ವಿಚಾರಣೆಗೆ ಕರೆದು ಹೆದರಿಸುವ ಮೂಲಕ ಪಕ್ಷದ ಬಗ್ಗೆ ಜನಸಾಮಾನ್ಯರ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಮಾಡು ತ್ತಿದ್ದಾರೆ. ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು ಅಲ್ಲ ಎಂದರು.

೨೦೦೨ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಸಂರ‍್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರಮೋದಿ, ಕೇಂದ್ರದ ಗೃಹಮಂತ್ರಿ ಅಂದಿನ ಗುಜರಾತ್ ಗೃಹ ಸಚಿವರು,೨೦೦೦ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ಕೊಲೆಯಾದರೂ, ಸ್ವತಹಃ ಅಂದಿನ ಪ್ರಧಾನಿ ವಾಜಪೇಯಿ ನಿಮ್ಮ ಆಡಳಿತ ರಾಜರ‍್ಮದಿಂದ ಕೂಡಿಲ್ಲ ಎಂಬ ಮಾತುಗಳನ್ನಾಡಿದ್ದರು.ಅಲ್ಲದೆ ರಾಜಿನಾಮೆಯನ್ನು ಬಯಸಿದ್ದರು.ಆದರೆ ಆಡ್ವಾನಿಯವರ ಮಧ್ಯಸ್ತಿಕೆಯಿಂದ ಅದು ತಪ್ಪಿ ಹೋಯಿತು.ಆದರೆ ಇಂದು ಅದೇ ಅಡ್ವಾಣಿಯವರನ್ನು ತಾವು ಯಾವ ರೀತಿ ನಡೆಸಿಕೊಂಡಿದ್ದೀರಿ ಎಂಬುದನ್ನು ಒಮ್ಮೆ ಅವಲೋಕಿಸಿ, ಪ್ರಧಾನಿ, ರಾಷ್ಟçಪತಿ ಹುದ್ದೆಯಿಂದ ತಪ್ಪಿಸಿ, ಮೂಲೆಗುಂಪು ಮಾಡಿದ್ದೀರಿ.ಇದಕ್ಕಿಂತ ದ್ವೇಷ ರಾಜಕಾರಣದ ಉದಾಹರಣೆ ಬೇಕೇ ಎಂದು ವೀರಪ್ಪ ಮೋಯಿಲಿ ಪ್ರಶ್ನಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಾವಗಡ ಶಾಸಕ ವೆಂಕಟರವಣಪ್ಪ, ದೇಶದಲ್ಲಿ ಇರುವುದು ಹಿಟ್ಲರ್ ಆಡಳಿತ.ಇಡಿ, ಐಟಿ ಗಳ ಮೂಲಕ ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದೆ.ಮೋದಿಯಂತಹ ನೂರಾರು ಹಿಟ್ರ‍್ಗಳು ಬಂದರೂ ಅದು ಸಾಧ್ಯವಿಲ್ಲ.ತಪ್ಪು ಮಾಡದ ವ್ಯಕ್ತಿಗಳ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ನೊಟೀಸ್ ಜಾರಿ ಮಾಡಿ, ಅವರ ಮಾನಸಿಕ ಸ್ಥೆöರ‍್ಯ ಕುಗ್ಗಿಸುವ ಕೆಲಸ ಮಾಡುತ್ತಿರುವ ಹಿಟ್ಲರ್ ಆಡಳಿತವನ್ನು ಕೊನೆಗಾಣಿಸದೇ ಬಿಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್,ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ,ಇಕ್ಬಾಲ್ ಅಹಮದ್,ಇಂತ್ತಿಯಾಜ್, ಹಮದ್, ಹೊನ್ನಗಿರಿಗೌಡ, ಪ್ರಸನ್ನಕುಮಾರ್, ಎಂ.ವಿ.ರಾಘ ವೇಂದ್ರ ಸ್ವಾಮಿ,ಪುಟ್ಟರಾಜು, ಬಿ.ಜಿ.ನಿಂಗರಾಜು, ಗೀತಾರುದ್ರೇಶ್, ಗೀತಮ್ಮ, ಸುಜಾತ, ಮರಿಚನ್ನಮ್ಮ, ಸಿ.ಎಲ್.ಗೌಡ, ಸಂಜೀವ ಕುಮಾರ್, ಪಾಲಿಕೆ ಸದಸ್ಯರಾದ ದೀಪಶ್ರೀ, ಪ್ರಭಾವತಿ, ಮಹೇಶ್, ಜಿಲ್ಲಾ ಉಸ್ತುವಾರಿ ಕೇಶವಮರ‍್ತಿ, ಮೆಹಬೂಬ್ ಪಾಷ, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪದಾಧಿಕಾರಿಗಳು ಪಾಲ್ಗೊಡಿದ್ದರು.