Friday, 22nd November 2024

ಊಟ ಹಾಕಲ್ಲ ಎಂದು ಬೈದಿದ್ದಕ್ಕೆ ತಾಯಿಯ ಹತ್ಯೆ

ಬೆಂಗಳೂರು: ಕೆಆರ್ ಪುರಂನ ಭೀಮಯ್ಯ ಲೇಔಟ್ ನಲ್ಲಿ ಊಟ ಹಾಕಲ್ಲ ವೆಂದು ತಾಯಿಯು ಬೈದಿದ್ದಕ್ಕೆ 18 ವರ್ಷದ ಮಗನೊಬ್ಬ ಹೆತ್ತ ತಾಯಿ ಯನ್ನೇ ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ ದುರಂತ ಸಂಭವಿಸಿದೆ.

ತಾಯಿ ನೇತ್ರ (40) ಕೊಲೆಗೆ ಈಡಾಗಿರುವ ದುರ್ದೈವಿಯಾಗಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಮಗನು ಕಾಲೇಜಿಗೆ ಹೋಗಲು ತಯಾರಾದಾಗ, ತನ್ನ ತಾಯಿಗೆ ಊಟ ಬಡಿಸು ಎಂದು ಕೇಳಿಕೊಂಡಾಗ ತಾಯಿ ಕೋಪದಲ್ಲಿ ನೀನು ನನ್ನ ಮಗನೆ ಅಲ್ಲ ಊಟ ಹಾಕಲ್ಲವೆಂದು ಬೈದಿದ್ದಾಳೆ .

ಮಗ ಅಲ್ಲಿಯೇ ಇದ್ದ ರಾಡ್ ನಿಂದ ಬಲವಾಗಿ ತಾಯಿಗೆ ಹೊಡೆದಿದ್ದಾನೆ. ತಾಯಿ ಸಾವನಪ್ಪಿದಿರುವ ಕುರಿತು ಖಚಿತವಾದ ಮೇಲೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೆ ಆರ್ ಪುರಂ ಠಾಣೆ ಪೊಲೀಸ್ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.