Thursday, 19th September 2024

MP Dr K Sudhakar: ಸಂಸದ ಸುಧಾಕರ್, ನಗರಸಭೆ ನಿಯೋಜಿತ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಮುಖಂಡರು

ಸವಾಲು ಪ್ರತಿಸವಾಲು ಬಹಿರಂಗ ಚರ್ಚೆಯ ಮಾತಿನ ಬಾಣ ಬಿರುಸುಗಳಿಗೆ ಸುಸ್ತಾದ ಮಾಧ್ಯಮದವರು

ಚಿಕ್ಕಬಳ್ಳಾಪುರ: ನಗರಸಭೆ ಚುನಾವಣೆಯ ಬಳಿಕ ಶಾಸಕ ಪ್ರದೀಪ್ ಈಶ್ವರ್ ನೀಡಿದ ಹೇಳಿಕೆ ಖಂಡಿಸಿ ಶುಕ್ರವಾರ ನಗರಸಭೆಯ ನೂತನ ಅಧ್ಯಕ್ಷ ಗಜೇಂದ್ರ ಹಾಗೂ ಜೆ.ನಾಗರಾಜ್ ಸುದ್ದಿಗೋಷ್ಟಿ ನಡೆಸುತ್ತಿದ್ದಂತೆ ಶನಿವಾರ ಶಾಸಕ ಪ್ರದೀಪ್ ಬೆಂಬಲಿಗರು ಸೇರಿ ಕಾಂಗ್ರೆಸ್ ಮುಖಂಡರಿ0ದ ಸಾಲುಸಾಲು ಸುದ್ದಿಗೋಷ್ಟಿ ನಡೆದ ಸಂಸದ ಡಾ.ಕೆ.ಸುಧಾ ಕರ್, ನಗರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಾಚ್ಯ ಪದ ಪ್ರಯೋಗ , ಪ್ರತಿ-ಸವಾಲು ಎಸೆಯುವ ಮೂಲಕ ವಾಗ್ದಾಳಿ ನಡೆಸಿದರು.

ಮೊದಲಿಗೆ ಶಾಸಕರ ಬೆಂಬಲಿಗರಾದ ಎಸ್‌ಸಿ, ಎಸ್‌ಟಿ ಮುಖಂಡರು ಸುದ್ದಿಗೋಷ್ಟಿಯನ್ನು ನಡೆಸಿ ಡಾ.ಕೆ.ಸುಧಾಕರ್ ಶಾಸಕರಾಗಿದ್ದ ಅವಧಿಯಲ್ಲಿ ಪರಿಶಿಷ್ಟರಿಗೆ ಸರ್ಕಾರಿ ಸವಲತ್ತು, ಅನುದಾನ ನೀಡದೇ ಮೋಸ ಮಾಡಿದ್ದರು, ಗಂಗ ಕಲ್ಯಾಣ ಯೋಜನೆ, ಸಾಗುವಳಿ ಚೀಟಿ ವಿತರಣೆ ಸೇರಿ ಎಲ್ಲ ವಿಚಾರಗಳಲ್ಲಿ ಅನ್ಯಾಯ ಮಾಡಿದ್ದಾರೆ. ಅಲ್ಲದೆ ಪರಿಶಿಷ್ಟರ ಮೇಲೆ ವಿನಾಕಾರಣ ಸುಳ್ಳು ಮೊಕದ್ದಮೆ ದಾಖಲಿಸಿ ಕಿರುಕುಳ ನೀಡಿ, ಅವರ ವಿರುದ್ಧ ಮಾತನಾಡದ ದುಸ್ಥಿತಿ ನಿರ್ಮಿಸಿದ್ದರೆಂಬ ಆರೋಪ ಮಾಡಿದರು.

ಇದನ್ನೂ ಓದಿ: Dr K Sudhakar: ಜಿಲ್ಲೆಗೆ ನೀರು ಕೊಡುವ ಉದ್ದೇಶ ಇದ್ದರೆ ಆಂಧ್ರದ ಕೃಷ್ಣಾನದಿ ನೀರು ಕೊಡಿ- ಡಾ.ಕೆ.ಸುಧಾಕರ್

ಮುಖಂಡ ಸುದಾ ವೆಂಕಟೇಶ್ ಮಾತನಾಡಿ, ಅಭಿವೃದ್ಧಿ ಮಾಡುವ ನಾಯಕನ ಪರ ಜನ ಇರುತ್ತಾರೆ, ತಂದೆತಾಯಿ ಬಗ್ಗೆ ಮಾತನಾಡಿದರೂ ತಪ್ಪು, ಹೆತ್ತವರಿಗೆ ಗೌರವ ನೀಡಬೇಕಿದೆ. ಆದರೆ ಶುಕ್ರವಾರ ಸವಾಲು ಹಾರಿರುವವರು ಡಿಎನ್‌ಎ ಸರ್ಟಿಫಿಕೆಟ್ ತರಲಿ, ನಾವೂ ತರುತ್ತೇವೆ, ಶಿಡ್ಲಘಟ್ಟ ವೃತ್ತದಲ್ಲಿ ಬಹಿರಂಗ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ವಿನಾಕಾರಣ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಆಗಬಾರದು, ಅಲ್ಲದೆ ಯಾವುದೇ ಜನಪ್ರತಿ ನಿಧಿ ಅವಾಚ್ಯ ಪದಗಳ ಬಳಕೆ ಮಾಡುವುದು ಖಂಡನೀಯ ಎಂದರು.

ಕಳೆದ ೧೦ ವರ್ಷ ಅಧಿಕಾರಿದಲ್ಲಿದ್ದವರು, ಸೋಲಿಲ್ಲದ ಸರದಾರ ಎಂದೇ ಬಿಂಭಿಸಿದ್ದವರು ಮನೆಗೆ ಹೋಗಿದ್ದರು. ಜನವಿರೋಧಿಗಳು, ಅಭಿವೃದ್ದಿ ಮಾಡದವರು ಮನೆಗೆ ಹೋಗುತ್ತಾರೆಂಬುದಕ್ಕೆ ಇದು ನಿದರ್ಶನ. ಇನ್ನು ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರ ಶಾಂತಿಯುತವಾಗಿತ್ತು. ಆದರೆ ಇದೀಗ ಕ್ಷೇತ್ರದಲ್ಲಿ ದೌರ್ಜನ್ಯ ನಡೆಸುವ ಪ್ರಯತ್ನ ಗಳು ನಡೆಯುತ್ತಿದೆ ಇದು ಖಂಡನೀಯ. ಯಾರೇ ಆಗಲೀ ಕ್ಷೇತ್ರದ ಅಭಿವೃದ್ಧಿ ಮತ್ತು ಜನಪರ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಬಳಿಕ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ನಗರಸಭಾ ಸದಸ್ಯರು ಸುದ್ದಿಗೋಷ್ಟಿ ನಡೆಸಿ ಕಳೆದ ಸೆ.12ರಂದು ನಡೆದ ನಗರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ನಗರಸಭಾ ಸದಸ್ಯರನ್ನು ಹೈಜಾಕ್ ಮಾಡಿ ಅವರನ್ನು ಬೆದರಿಸಿ ಬಿಜೆಪಿಯು ವಾಮಮಾರ್ಗದ ಮೂಲಕ ಅಧಿಕಾರ ಗಿಟ್ಟಿಸಿಕೊಂಡಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನದೇ ತಾವೇ ಅಧ್ಯಕ್ಷರೆಂದು ಬೀಗುವುದು ಸರಿಯಲ್ಲ. ಅಲ್ಲದೆ ಶಾಸಕರಿಗೆ ಧಮ್ಕಿ ಹಾಕುವ ಪ್ರವೃತ್ತಿಯನ್ನು ಕೈಬಿಡಬೇಕೆಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ಪೊಲೀಸರನ್ನು ನಿಂದಿಸುವ ಮೂಲಕ ಸಂಸದ ಸುಧಾಕರ್ ದರ್ಪವನ್ನು ಸಾರ್ವಜನಿಕರ ಎದುರು ಪ್ರದರ್ಶಿಸಿದ್ದು, ಇನ್ನು ಅಡ್ಡ ಮತದಾನ ಎಲ್ಲ ಸದಸ್ಯರನ್ನು ಅನರ್ಹಗೊಳಿಸಲಾಗುವುದು, ಅಭಿವೃದ್ಧಿಯ ವಿಚಾರದಲ್ಲಿ ಸಹಕಾರ ನೀಡಲಿ ಆದರೆ ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ. ಹಾಗೊಂದು ವೇಳೆ ವಿನಾಕಾರಣ ಕೆದಕಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ನಗರಸಭೆಯಲ್ಲಿ ಕಾಂಗ್ರೆಸ್ ಸೋಲಲು ಯಾವುದೇ ನಾಯಕರು ಕಾರಣರಲ್ಲ, ಪಕ್ಷದ ಚಿಹ್ನೆಯಡಿ ಗೆದ್ದು, ನಮ್ಮ ಬೆನ್ನಿಗೆ ಚೂರಿ ಹಾಕಿದ ಸದಸ್ಯರೇ ನೇರ ಕಾರಣ. ನಗರಸಭೆ ಸದಸ್ಯ ರನ್ನು ಹೆದರಿಸಿ ಮತ ಪಡೆದು ನಗರಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಿಜೆಪಿಗೆ ಮತ ನೀಡಿರುವ ಯಾವುದೇ ಸದಸ್ಯರು ಮನಸ್ಸಾಕ್ಷಿಯಾಗಿ ಮತ ಹಾಕಿಲ್ಲ, ಒತ್ತಡ, ಆಮಿಷಗಳಿಂದ ಮತ ಪಡೆದು ಬಿಜೆಪಿಯವರು ಗೆದ್ದಿದ್ದಾರೆ ಎಂದು ಆರೋಪಿಸಿದರು.

ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಶಾಸಕರ ಬೆಂಬಲಿಗರ ಸುದ್ದಿಗೋಷ್ಟಿಯಂತೂ ಪತ್ರಕರ್ತರೇ ಅಸಹ್ಯ ಪಡುವಷ್ಟು ಅವಾಚ್ಯ ಶಬ್ದಗಳಿಂದ ಸಂಸದರು ಮತ್ತು ನಗರಸಭೆ ನೂತನ ಅಧ್ಯಕ್ಷರನ್ನು ನಿಂದಿಸಿದರು. ಶಾಸಕರ ಅಭಿವೃದ್ಧಿ ಬಗ್ಗೆ ಮಾತನಾಡದ ಅವರ ಬೆಂಬಲಿಗರು, ಸುಧಾಕರ್ ಅವರು ಸಂಸದರಾದ ಬಳಿಕ ಶಾಂತವಾಗಿದ್ದ ಚಿಕ್ಕಬಳ್ಳಾಪುರ ಮತ್ತೆ ಭಯದ ವಾತವರಣ ನಿರ್ಮಾಣವಾಗಿದೆ, ಅವರ ಅಕ್ರಮ ಸಂಪಾಧನೆ, ಅವರ ತಂದೆ ಶಿಕ್ಷಕರಾಗಿ ಒಂದು ದಿನವೂ ಪಾಠ ಮಾಡದ ಬಗ್ಗೆ,ಕೋವಿಡ್ ಸಂದರ್ಭದ ಹಗರಣದ ಬಗ್ಗೆ, ಅಹಿಂದ ನಾಯಕರ ಏಳಿಗೆ ಸಹಿಸದ ಸುಧಾಕರ್ ಕಿಡಿಗೇಡಿತನದ ಬಗ್ಗೆ ಗಂಭೀರ ಆರೋಪ ಮಾಡಿದರು.

Leave a Reply

Your email address will not be published. Required fields are marked *