ಶಿರಸಿ: ಕಾಗೇರಿ ಕಚೇರಿಯಲ್ಲಿ ಜನಜಂಗುಳಿ. ಒಂದು ಪಕ್ಷದ ವ್ಯಕ್ತಿ ಇನ್ನೊಂದು ಪಕ್ಷ ಸೇರ್ಪಡೆಯಾಗುತ್ತಾನೆಂದರೆ ಅವನ ಹಿಂದೆ ಬರುವ ಕಾರ್ಯಕರ್ತರ ಪಡೆಯೇ ಮುಖ್ಯ. ಹಾಗೆಯೇ ಆಗಿದ್ದಿಂದು. ಸಂಸದ ಕಾಗೇರಿ (MP Vishweshwar Hegde Kaageri) ಕಚೇರಿಗಿಂದು ಮಾಜಿ ವಿಪ ಸದಸ್ಯ ಘೋಟ್ನೇಕರ್ ಬೇಟಿ ನೀಡಿದ್ದರು. ಅವರ ಹಿಂದೆ ನೂರಾರು ಜನರೂ ಬಂದಿದ್ದರು. ಇದು ಪಕ್ಷ ಸೇರ್ಪಡೆ ಕಾರ್ಯಕ್ರಮವಲ್ಲ. ಘೋಟ್ನೇಕರ್ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಇದೇ ತಿಂಗಳು 30 ರಂದು ಎಂದು ಹೇಳುವುದಕ್ಕಾಗಷ್ಟೇ ಬಂದಿದ್ದು. ಆದರೂ ಅವರ ಹಿಂಬಾಲಕರು ಸಾಕಷ್ಟು ಜನ ಬಿಜೆಪಿ(Bharatiya Janata Party) ಗೆ ಬೆಂಬಲವಾಗಿ ಬಂದಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಘೋಟ್ನೇಕರ್, ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಯದ ಮೇರೆಗೆ ನ.30ಕ್ಕೆ ಶಿರಸಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುವುದಾಗಿ ಹೇಳಿದರು.
ಜೆಡಿಎಸ್ ಪಕ್ಷದ ಮೇಲೆ ಬೇಜಾರಿಲ್ಲ. ಆದರೆ ಹಳಿಯಾಳ ಕ್ಷೇತ್ರದ ನನ್ನ ಬೆಂಬಲಿಗರು ಬಹುತೇಕ ಬಿಜೆಪಿ ಕಡೆ ಒಲವು ಹೊಂದಿದ್ದಾರೆ. ಈಗಾಗಲೇ ಹಲವರು ಬಿಜೆಪಿ ಸೇರಿದ್ದಾರೆ. ಹಳಿಯಾಳ ಭಾಗದ ಮೂಲ ಬಿಜೆಪಿಗರು ಕೂಡ ನನ್ನ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದೆ. ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈಗಾಗಲೆ ಸೇರ್ಪಡೆ ವಿಚಾರ ಚರ್ಚಿಸಲಾಗಿದೆ. ನನ್ನ ಗೆಲುವಿನಲ್ಲಿ ಸುನೀಲ ಹೆಗಡೆ ಜತೆ ಘೋಟ್ನೇಕರ್ ಸಹಕಾರ ಸಾಕಷ್ಟಿದೆ. ಮರಾಠಾ ಸಮುದಾಯದ ನಾಯಕರಾಗಿರುವ ಅವರು ಬಿಜೆಪಿ ಸೇರ್ಪಡೆ ಆಗುತ್ತಿರುವುದು ಮತ್ತಷ್ಟು ಬಲ ತರಲಿದೆ’ ಎಂದರು.
ಈಗಾಗಲೇ ಕಾಂಗ್ರೆಸ್ ಆಡಳಿತ ಕೆಟ್ಟ ಸ್ಥಿತಿ ತಲುಪಿದೆ. ಯಾರೊಬ್ಬರಿಂದಲೂ ಅದನ್ನು ಸಹಿಸಲು ಆಗುತ್ತಿಲ್ಲ ಎಂದರು.
ಇದನ್ನೂ ಓದಿ: vishweshwarHegdeKaageri