Saturday, 14th December 2024

ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲ : ಶಾಸಕ ಎಂ ಟಿ ಕೆ 

ಗುಬ್ಬಿ: ತಾಲೂಕಿನ ಕಡಬ ಗ್ರಾಮದಲ್ಲಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ 2022 -23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ನೂತನ ಗೋಧಾಮು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ ಮಾಡುತ್ತ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ರಾಜ್ಯದ ರೈತರ ಸಮಸ್ಯೆಯನ್ನು ಅರಿಯುವಲ್ಲಿ ವಿಫಲವಾಗಿದೆ ಎಂದು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ  ತಿಳಿಸಿದರು.

ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು ಜನಸಾಮಾನ್ಯರಿಗೆ ಕುಡಿಯಲು ನೀರಿನ ಸಮಸ್ಯೆ ಸೃಷ್ಟಿಯಾಗಿದೆ ಇಂತಹ ಪರಿಸ್ಥಿತಿ ಯಲ್ಲಿ ತಮಿಳುನಾಡಿಗೆ ನೀರು ಬಿಡಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ರಾಜ್ಯದ ರೈತರಿಗೆ ಮಾಡುತ್ತಿರುವ ಮೋಸ ಎಂದ ಅವರು ಕೊಬ್ಬರಿ ಬೆಲೆ ದಿನೇದಿನೇ ಕುಸಿಯುತ್ತಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕಿದೆ. ಬೆಂಬಲ ಬೆಲೆಗಾಗಿ ತಾಲೂಕಿನ ರೈತರನ್ನು ಶೀಘ್ರದಲ್ಲಿ ಸಭೆ ಕರೆದು ಪಾದಯಾತ್ರೆಯ ಮೂಲಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಕಡಬ ವಿ ಎಸ್ ಎಸ್ ಎನ್  ಅಧ್ಯಕ್ಷ ಪ್ರೇಮ್ ಕುಮಾರ್, ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸುರೇಶ್ ಗೌಡ, ಪ್ರಭಣ್ಣ   ಸಂಘದ ಉಪಾಧ್ಯಕ್ಷ ಡಿ ಹುಚ್ಚವೀರೇಗೌಡ, ಮುಖ್ಯ ಕಾರ್ಯನಿರ್ವಣಾಧಿಕಾರಿ ಮೋಹನ್ ಕುಮಾರ್ ಎಂ ಸಿ, ನಿರ್ದೇಶಕರಾದ ಬಸವರಾಜಯ್ಯ ಬಿ ಆರ್, ಕುಮಾರ್ ಕೆ ಎನ್, ನಾಗಯ್ಯ, ಚಂದ್ರಯ್ಯ, ವಿಕಾಸ್ ಗೌಡ, ಬಸವೇಶ್, ಪುಟ್ಟನರಸಯ್ಯ, ಟಿ ಎನ್ ರಾಧಾ, ಕವಿತ, ವಿಜಯಕುಮಾರ್ ಉಪಸ್ಥಿತರಿದ್ದರು