Thursday, 12th December 2024

ದೂರು ನೀಡಲು ಹೋದ ವ್ಯಕ್ತಿಯ ಅರ್ಜಿ ಸ್ವೀಕರಿಸದೇ ಅಲೆದಾಟ

ಮೂಡಲಗಿ: ಯಾವುದೇ ವ್ಯಕ್ತಿ ದೂರು ಕೂಡಲು ಪೊಲೀಸ್ ಠಾಣೆಯ ಮೇಟ್ಟಿಲು ಏರಿದರೇ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆ ವ್ಯಕ್ತಿಯ ದೂರನ್ನು ಸ್ವೀಕರಿ ಸಲೆಬೇಕು. ಆದರೇ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಅವರು ದೂರು ನೀಡಲು ಹೋದ ವ್ಯಕ್ತಿಯ ಅರ್ಜಿ ಸ್ವೀಕರಿಸದೇ ಅಲೆದಾಟಿಸಿರುವ ಘಟನೆ ಜರುಗಿದೆ.

ಪೊಲೀಸ್ ಠಾಣೆಯ ಮೇಲಾಧಿಕಾರಿಗಳೇ ಹೀಗೇ ದೂರು ಕೂಡಲು ಬಂದ ವ್ಯಕ್ತಿಗೆ ಕಿರುಕುಳ ನೀಡಿದೇ ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಹೇಗೆ ನಂಬಿಕೆ ಬರುತ್ತೆ. ಪೊಲೀಸ್ ಠಾಣೆಗೆ ಹೋದರೇ ನಮ್ಮಗೆ ರಕ್ಷಣೆ ಸಿಗುತ್ತದೆ ಎಂದು ಸಾರ್ವಜನಕರು ನಂಬಿದ್ದಾರೆ ಆದರೆ ಇಂತಹ ಅಧಿಕಾರಿಗಳಿಂದ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಘಟನೆ ವಿವರ : ಕಳೆದ ಮೇ.4ರಂದು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ನಿವಾಸಿ, ಧರೇಪ್ಪ ಹೊನ್ನಳ್ಳಿ ಎಂಬಾತನ ಮೇಲೆ ಅದೇ ಗ್ರಾಮದ ಚಂದ್ರಕಾ0ತ ಖಣದಾಳೆ ಹಾಗೂ ಅವರ ಸಹೋದರು ಆಸ್ತಿ ವಿಚಾರವಾಗಿ ಧರೇಪ್ಪ ಹೊನ್ನಳ್ಳಿ ಮೇಲೆ ಹಲ್ಲೆ ಮಾಡಿ ಜೀವಬೇದರಿಕೆ ಹಾಕಿ ಕೈಗೆ ಬಲವಾದ ಗಾಯವಾಗಿದೆ. ಹಿನ್ನಲೆಯಲ್ಲಿ ಧರೇಪ್ಪ ಹೊನ್ನಳ್ಳಿ ಎಂಬಾತ ಹಾರೂಗೇರಿ ಪೊಲೀಸ್ ಠಾಣೆಯ ಮೇಟ್ಟಿಲು ಹತ್ತಿದರು ಸಹ ಅಲ್ಲಿಯ ಅಧಿಕಾರಿ ಪಿಎಸ್‌ಐ ಅವರು ದೂರು ದಾಖಲಿಸಿಕೊಳ್ಳದೇ ಅಲೆದಾಟಿಸಿದ್ದಾರೆ. ನಂತರ ಧರೇಪ್ಪ ಹೊನ್ನಳ್ಳಿ ಮೂಡಲಗಿ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಹಾರೂಗೇರಿ ಪೊಲೀಸ್ ಠಾಣೆ ದೂರವಾಣಿ ಮೂಲಕ ಎಮ್‌ಎಲ್‌ಸಿ ನೀಡಿದರೂ ಸಹ ಸಂಜೆ ವರೆಗೂ ಯಾವುದೇ ಸಿಬ್ಬಂದಿಗಳು ಆಸ್ಪತ್ರೆಗೆ ಬರದೇ ಸತ್ತಾಹಿಸಿದ್ದಾರೆ. ಧರೇಪ್ಪ ಹೊನ್ನಳ್ಳಿ ಸ್ಥಳೀಯ ವರದಿಗಾರರ ಗಮನಕ್ಕೆ ತಂದ ಕೂಡಲೇ ಸಿಪಿಎಸ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನಲೆ ಸಿಬ್ಬಂದಿಗಳು ಕಳಿಸಿ ಧರೇಪ್ಪ ಹೊನ್ನಳ್ಳಿ ಎಂಬಾತನ ಕಡೆಯಿಂದ ದೂರು ಸ್ವೀಕರಿಸಿದ್ದಾರೆ. ಆದರೆ ಧರೇಪ್ಪ ಹೊನ್ನಳ್ಳಿ ಬರೆದು ಕೊಟ್ಟತಂಹ ದೂರಿನಲ್ಲಿ 307 ಐಪಿಸಿ ಕಾಯ್ದೆ ಸೇರಿದಂತೆ ಇನ್ನೂ ಅನೇಕ ಕಾಯ್ದೆಗಳನ್ನು ನಮೂದಿಸಿದರೂ ಸಹ ಪಿಎಸ್‌ಐ ಅವರು ಕೇಸ್ ದಾಖಲು ಮಾಡುವಾಗ 307 ಐಪಿಸಿ ಕಾಯ್ದೆಯನ್ನು ಬಿಟ್ಟು ಇನ್ನೂಳಿದ ಕಾಯ್ದೆಗಳನ್ನು ಪ್ರಕರಣದಲ್ಲಿ ದಾಖಲು ಮಾಡಿದ್ದಾರೆ.

ಆದರೇ ಕೈಗೆ ಬಲವಾದ ಪೇಟ್ಟು ಬಿದ್ದಿದರೂ ಸಹ ಹಾಗೂ ಪರಿಶೀಲನೆಗೆ ಬಂದ ಪೊಲೀಸ್ ಸಿಬ್ಬಂದಿಗಳಿಗೆ ವೈದ್ಯಾಧಿಕಾರಿಗಳು ನೀಡಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದರೂ ಸಹ ಆ ಪೊಲೀಸ್ ಠಾಣೆಯ ಪಿಎಸ್‌ಐ ಅವರು ತಮ್ಮ ಅಧಿಕಾರಿದ ಗರ್ವದಿಂದ ತಮ್ಮ ಬೇಕಾದ ರೀತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಡಿದ್ದಾರೆ ಎಂದು ಧರೇಪ್ಪ ಹೊನ್ನಳ್ಳಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನಾದರೂ ಮೇಲಾಧಿಕಾರಿಗಳು ಈ ಘಟನೆ ಬಗ್ಗೆ ಮಾಹಿತಿ ಪಡೆದು ಆ ವ್ಯಕ್ತಿಗೆ ಸೂಕ್ತ ನ್ಯಾಯ ಒದಗಿಸುತ್ತಾರಾ ಎಂದು ಕಾದು ನೋಡಬೇಕು.