Friday, 15th November 2024

Mukesh Ambani: ವಿಶ್ವದ 100 ಶಕ್ತಿಶಾಲಿ ಉದ್ಯಮಿಗಳ ಫಾರ್ಚೂನ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನಂ.12

Mukesh Ambani

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ದೇಶದಲ್ಲಿ ಮಾತ್ರವಲ್ಲ, ವಿಶ್ವದ ಪ್ರಬಲ ಉದ್ಯಮಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಫಾರ್ಚೂನ್ ನಿಯತಕಾಲಿಕೆ 2024 ರ ಪ್ರಭಾವಿ- ಪ್ರಬಲ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಕೇಶ್ ಅಂಬಾನಿ, ಅಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯರಾಗಿದ್ದಾರೆ. ಈ ಪಟ್ಟಿಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಇತರ ಆರು ವ್ಯಕ್ತಿಗಳೂ ಸೇರಿದ್ದಾರೆ. ಈ ವ್ಯಕ್ತಿಗಳು ದೊಡ್ಡ ವ್ಯವಹಾರಗಳ ಸಂಸ್ಥಾಪಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಹೊಸ ಆವಿಷ್ಕಾರಗಳನ್ನು ಕಂಡುಹಿಡಿದವರು. ಫಾರ್ಚೂನ್ ಇತ್ತೀಚೆಗೆ ಉದ್ಯಮ ಜಗತ್ತಿನ 100 ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ | Haridasara Dinachari Movie: ʼಹರಿದಾಸರ ದಿನಚರಿʼ ಚಿತ್ರದ ಟ್ರೇಲರ್ ಔಟ್‌

ಮುಕೇಶ್ ಅಂಬಾನಿ ಅವರು ರಿಲಯನ್ಸ್ ಸಮೂಹದ ಮಾಲೀಕರಾಗಿದ್ದಾರೆ ಮತ್ತು ದೇಶದ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರು ಪ್ರಮುಖರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ ಅವರು ವಿಶಿಷ್ಟವಾದ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಜಿಯೋ ಆರಂಭಿಸುವ ಮೂಲಕ ದೇಶದ ಟೆಲಿಕಾಂ ಕ್ಷೇತ್ರದ ಮುಖವನ್ನೇ ಬದಲಿಸಿದ್ದಾರೆ. ದೇಶದ ಡಿಜಿಟಲೈಸೇಷನ್ ಅಭಿವೃದ್ಧಿಗೆ ಉತ್ತೇಜನ ನೀಡಿದ್ದು, ಕಂಪನಿಯು ರೀಟೇಲ್ ವಲಯದಲ್ಲೂ ಪ್ರತಿದಿನ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ಕಂಪನಿಯು ಹಸಿರು ಶಕ್ತಿ ವಲಯದಲ್ಲಿಯೂ ಹೊಸ ಉತ್ಸಾಹದಿಂದ ಕೆಲಸ ಮಾಡುತ್ತಿದೆ.

ಈ ಸುದ್ದಿಯನ್ನೂ ಓದಿ | Job Guide: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ 275 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಮುಕೇಶ್ ಅಂಬಾನಿ ಅವರನ್ನು ಹೊರತುಪಡಿಸಿ, ಫಾರ್ಚೂನ್ ಪವರ್‌ಫುಲ್ ಉದ್ಯಮಿಗಳ ಪಟ್ಟಿ 2024 ರಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ ಮತ್ತು ಎನ್ ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಎರಡನೇ ಸ್ಥಾನದಲ್ಲಿದ್ದಾರೆ. ಸತ್ಯ ನಾಡೆಲ್ಲಾ ಮೂರನೇ ಸ್ಥಾನದಲ್ಲಿದ್ದರೆ, ವಾರನ್ ಬಫೆಟ್ ನಾಲ್ಕನೇ ಸ್ಥಾನದಲ್ಲಿ ಮತ್ತು ಜೇಮಿ ಡಿಮನ್ 5ನೇ ಸ್ಥಾನದಲ್ಲಿದ್ದಾರೆ. ಟಿಮ್ ಕುಕ್ ಅವರು ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಮಾರ್ಕ್ ಝುಕರ್‌ಬರ್ಗ್ 7ನೇ ಸ್ಥಾನದಲ್ಲಿದ್ದಾರೆ ಮತ್ತು ಸ್ಯಾಮ್ ಆಲ್ಟ್‌ಮ್ಯಾನ್ 8ನೇ ಅತ್ಯಂತ ಶಕ್ತಿಶಾಲಿ ಉದ್ಯಮಿಯಾಗಿದ್ದಾರೆ. ಮೇರಿ ಬಾರ್ರಾ ಮತ್ತು ಸುಂದರ್ ಪಿಚೈ ಕ್ರಮವಾಗಿ 9 ಮತ್ತು 10 ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ ಅವರಿಗಿಂತ ಸ್ವಲ್ಪ ಮೊದಲು ಅಂದರೆ, 11 ನೇ ಸ್ಥಾನದಲ್ಲಿ ಅಮೆಜಾನ್‌ನ ಜೆಫ್ ಬೆಜೋಸ್ ಇದ್ದಾರೆ.