Tuesday, 5th November 2024

Murder Case: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಾಯಿ!

Murder Case

ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಹೆತ್ತತಾಯಿಯೇ ಪ್ರಿಯಕರನೊಂದಿಗೆ ಸೇರಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಪೈಶಾಚಿಕ ಘಟನೆ ನಗರದಲ್ಲಿ ನಡೆದಿದೆ. ರಾಮನಗರದ ಕೆಂಪೇಗೌಡ ಸರ್ಕಲ್‌ನಲ್ಲಿ ಘಟನೆ ನಡೆದಿದ್ದು, ಮೂರು ಮತ್ತು ಹನ್ನೊಂದು ತಿಂಗಳ ವಯಸ್ಸಿನ ಮಕ್ಕಳ ಹತ್ಯೆ (Murder Case) ಮಾಡಲಾಗಿದೆ.

3 ವರ್ಷದ ಕಬಿಲ್ ಹಾಗೂ 11 ತಿಂಗಳ ಕಬಿಲನ್ ಎಂಬ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ವೀಟಿ ಎಂಬ ಮಹಿಳೆ ಶಿವು ಎಂಬಾತನ ಜತೆಗೆ ಮುದವೆಯಾಗಿದ್ದಳು. ಮದುವೆ ಬಳಿಕ ಫ್ರಾನ್ಸಿಸ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಕೆಲ ದಿನಗಳ ಹಿಂದೆ ರಾಮನಗರಕ್ಕೆ ಬಂದಿದ್ದ ಸ್ವೀಟಿ, ಪ್ರಿಯಕರನೊಂದಿಗೆ ಸರಸಕ್ಕೆ ಇಬ್ಬರು ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ಕೊಲೆ ಮಾಡಿದ್ದಾಳೆ.

ಮಗುವನ್ನು ಮಣ್ಣು ಮಾಡಲು ಹೋದಾಗ ಸ್ಮಶಾನ ಸಿಬ್ಬಂದಿ ಅನುಮಾನಗೊಂಡು ಮಗು ಹೇಗೆ ಸಾವನ್ನಪ್ಪಿತು ಎಂದು ಕೇಳಿದ್ದಾರೆ. ಇದಕ್ಕೆ ತಾಯಿ ಸ್ವೀಟಿ, ಜ್ವರದಿಂದ ಮಗು ಮೃತಪಟ್ಟಿದೆ ಎಂದು ಹೇಳಿದ್ದಾಳೆ. ಬಳಿಕ ಸ್ಮಶಾನ ಸಿಬ್ಬಂದಿ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಮಗುವನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. 15 ದಿನಗಳ ಹಿಂದೆ ಇದೇ ರೀತಿ ಮತ್ತೊಂದು ಮಗುವನ್ನು ತಾಯಿ ಕೊಲೆ ಮಾಡಿದ್ದಳು ಎಂದು ತಿಳಿದುಬಂದಿದೆ. ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Delhi High Court: ಸತ್ತ ಮಗನ ವೀರ್ಯದಿಂದ ಮೊಮ್ಮಗು ಪಡೆಯಲು ವೃದ್ಧ ದಂಪತಿಯಿಂದ ನ್ಯಾಯಾಂಗ ಹೋರಾಟ; ಕೋರ್ಟ್‌ ಹೇಳಿದ್ದೇನು?

ಮಗಳ ಲವ್‌ಗೆ ಬೇಸತ್ತು ಕೊಲೆಗೆ ಸುಫಾರಿ ಕೊಟ್ಟ ಅಮ್ಮನೇ ಹತ್ಯೆಯಾದಳು! ಪ್ಲ್ಯಾನ್‌ಗೆ ಟ್ವಿಸ್ಟ್‌ ಸಿಕ್ಕಿದ್ದು ಎಲ್ಲಿ?

Viral News

ನವದೆಹಲಿ: ದಿಲ್ಲಿಯಲ್ಲಿ ನಡೆದ ಈ ಘಟನೆ ಯಾವುದೇ ಕ್ರೈಂ ಥ್ರಿಲ್ಲರ್‌ ಚಿತ್ರಕ್ಕೂ ಕಡಿಮೆ ಇಲ್ಲ. ಪತ್ತೆದಾರಿ ಕಾದಂಬರಿಯನ್ನೂ ಮೀರಿಸುವ ಈ ಬೆಳವಣಿಗೆ ಎಂತಹವರನ್ನೂ ಅಚ್ಚರಿಗೆ ತಳ್ಳುತ್ತದೆ. 17 ವರ್ಷದ ಮಗಳ ಪ್ರೇಮ ಸಂಬಂಧದಿಂದ ಬೇಸತ್ತ ತಾಯಿಯೊಬ್ಬಳು ಆಕೆಯನ್ನು ಕೊಲೆ ಮಾಡಲು ಸುಪಾರಿ ಕಿಲ್ಲರ್‌ ಒಬ್ಬನನ್ನು ನೇಮಿಸಿದ್ದರು. ಬಳಿಕ ಈ ಪ್ರಕರಣ ಯಾರೂ ಊಹಿಸಿದ ತಿರುವು ಪಡೆದುಕೊಂಡಿದ್ದು, ಸುಪಾರಿ ಕಿಲ್ಲರ್‌ ಸುಪಾರಿ ನೀಡಿದ ಮಹಿಳೆಯನ್ನೇ ಕೊಲೆ ಮಾಡಿದ್ದಾನೆ. ಸದ್ಯ ಈ ಘಟನೆ ದೊಡ್ಡ ಸುದ್ದಿಯಾಗಿದೆ. ಅಕ್ಟೋಬರ್ 6ರಂದು ಮಹಿಳೆಯ ಮೃತದೇಹ ಪತ್ತೆಯಾಗುವುದರೊಂದಿಗೆ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾದ ವಿವರ ಇಲ್ಲಿದೆ (Viral News).

ತನ್ನ ಮಗಳನ್ನು ಕೊಲೆ ಮಾಡಲು ಸುಪಾರಿ ಕಿಲ್ಲರ್‌ ಸುಭಾಷ್‌ ಎಂಬಾತನನ್ನು ನೇಮಿಸಿ ಆತನ ಕೈಯಿಂದಲೇ ಕೊಲೆಯಾದ ಮಹಿಳೆಯನ್ನು 42 ವರ್ಷದ ಅಲ್ಕಾ ದೇವಿ ಎಂದು ಗುರುತಿಸಲಾಗಿದೆ. ಅಕ್ಟೋಬರ್ 6ರಂದು ಇವರ ಶವ ಉತ್ತರ ಪ್ರದೇಶದ ಇಟಾ ಜಿಲ್ಲೆಯ ಜಸ್ರತ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿ ಹೊಲದಲ್ಲಿ ಕಂಡು ಬಂದಿದ್ದು ತನಿಖೆ ವೇಳೆ ಕೊಲೆ ರಹಸ್ಯ ಹೊರ ಬಿದ್ದಿದೆ.

ಘಟನೆ ವಿವರ

ಸುಪಾರಿ ಹತ್ಯೆಯ ಈ ಕಥೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಪ್ರತಿ ಅಧ್ಯಾಯವು ತೆರೆದುಕೊಳ್ಳುತ್ತಿದ್ದಂತೆ ಪಾತ್ರಧಾರಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ, ಪ್ರಕರಣ ಸಂಕೀರ್ಣವಾಗುತ್ತಾ ಹೋಗುತ್ತದೆ. ಅಕ್ಟೋಬರ್ 5ರಂದು ಅಲ್ಕಾ ದೇವಿ ಇಟಾ ನಗರಕ್ಕೆ ತೆರಳಿದ್ದರು. ಸಂಜೆಯಾದರೂ ಮನೆಗೆ ಬರದಿದ್ದಾಗ ಪತಿ ರಮಾಕಾಂತ್ ಆಕೆಯ ಮೊಬೈಲ್‌ಗೆ ಕರೆ ಮಾಡಲು ಯತ್ನಿಸಿದರೂ ಸ್ವಿಚ್ ಆಫ್ ಆಗಿತ್ತು. ಪತ್ನಿ ಹೋಗಿರಬಹುದಾದ ಸ್ಥಳಗಳಲ್ಲಿ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಕೊನೆಗೆ ಅಕ್ಟೋಬರ್ 6ರ ಸಂಜೆ ಪೊಲೀಸರು ಕರೆ ಮಾಡಿ ಆಗಮಿಸುವಂತೆ ತಿಳಿಸಿದ್ದರು. ಈ ವೇಳೆ ರಮಾಕಾಂತ್‌ ಪೊಲೀಸರು ತೋರಿಸಿದ ಶವ ಅಲ್ಕಾ ದೇವಿಯದ್ದು ಎಂದು ಗುರುತಿಸಿದರು.

ಅಲ್ಕಾ ದೇವಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಈ ವೇಳೆ ರಮಾಕಾಂತ್ ಅನುಮಾನ ವ್ಯಕ್ತಪಡಿಸಿ ಜಸ್ರತ್ಪುರ ಪೊಲೀಸ್ ಠಾಣೆಯಲ್ಲಿ ತಮ್ಮ ಗ್ರಾಮದ ಅಖಿಲೇಶ್ ಮತ್ತು ಅನಿಕೇತ್ ಎಂಬ ಇಬ್ಬರ ವಿರುದ್ಧ ದೂರು ದಾಖಲಿಸಿದರು.

ಅದಕ್ಕೂ ಒಂದು ಕಾರಣವಿದೆ. ಕೆಲವು ದಿನಗಳ ಹಿಂದೆ ಇವರಿಬ್ಬರು ರಮಾಕಾಂತ್-ಅಲ್ಕಾ ದೇವಿ ದಂಪತಿಯ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿದ್ದರು. ಬಳಿಕ ಅಖಿಲೇಶ್‌ನನ್ನು ಬಂಧಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದರು. ಘಟನೆಯ ನಂತರ ಮಗಳ ಸುರಕ್ಷತೆ ಬಗ್ಗೆ ಕಳವಳಗೊಂಡಿದ್ದ ಅಲ್ಕಾ ದೇವಿ ಆಕೆಯನ್ನು ಫರೂಕಾಬಾದ್ ಜಿಲ್ಲೆಯ ಸಿಕಂದರ್ಪುರ್ ಖಾಸ್ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿದ್ದರು. ಅಲ್ಲಿ ಅಪ್ರಾಪ್ತ ಬಾಲಕಿ 38 ವರ್ಷದ ಸುಭಾಷ್ ಜತೆ ಸಂಬಂಧ ಬೆಳೆಸಿದ್ದಳು. ಈ ಹಿಂದೆ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸುಭಾಷ್ ಅವಳಿಗೆ ಮೊಬೈಲ್ ಫೋನ್ ಕೂಡ ಕೊಡಿಸಿದ್ದ. ಅಲ್ಕಾ ತನ್ನ ಮಗಳ ಪ್ರೇಮ ಸಂಬಂಧದಿಂದ ಬೇಸತ್ತಿದ್ದರು. ಎಷ್ಟು ಬುದ್ದಿವಾದ ಹೇಳಿದರೂ ಮಾತು ಕೇಳದ ಅವಳನ್ನು ಕೊಲ್ಲಲು ನಿರ್ಧರಿಸಿದರು. ಅದಕ್ಕಾಗಿ ಸುಭಾಷ್‌ಗೆ ಸುಪಾರಿ ನೀಡಿ ಕೊಲೆ ಮಾಡಿದರೆ 50,000 ರೂ. ನೀಡುವುದಾಗಿ ತಿಳಿಸಿದ್ದರು. ಅಚ್ಚರಿ ಎಂದರೆ ಅವರಿಗೆ ತಮ್ಮ ಮಗಳು ಸಂಬಂಧ ಹೊಂದಿದ್ದು ಇದೇ ಸುಭಾಷ್‌ ಜತೆ ಎನ್ನುವುದು ತಿಳಿದಿರಲಿಲ್ಲ.

ಸುಭಾಷ್ ತನ್ನ ಪ್ರೇಯಸಿಯ ಬಳಿ ಆಕೆಯ ತಾಯಿಯ ಯೋಜನೆಯನ್ನು ವಿವರಿಸಿದ್ದ. ಕೂಡಲೇ ಆಕೆ ತಾಯಿಯನ್ನು ಕೊಂದರೆ ಆತನನ್ನು ಮದುವೆಯಾಗುವುದಾಗಿ ತಿಳಿಸಿದಳು. ಬಳಿಕ ಸುಭಾಷ್‌ ಅಲ್ಕಾ ದೇವಿಯನ್ನು ಕರೆಸಿ ಕತ್ತು ಹಿಸುಕಿ ಕೊಂದು ಹೊಲದ ಬಳಿ ಎಸೆದಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಸುದ್ದಿಯನ್ನೂ ಓದಿ: Physical Abuse: ಪ್ರಿಯಕರನ ಜೊತೆ ಸುತ್ತಾಡಿದ ಕಾಲೇಜು ಹುಡುಗಿ ಕೊನೆಗೆ ಗರ್ಭಪಾತ ಮಾತ್ರೆ ತಿಂದು ಸಾವು