Friday, 22nd November 2024

Murder Case: ಬೆಳಗಾವಿ ಉದ್ಯಮಿ ಕೊಲೆ ಕೇಸ್‌; ಹಾರ್ಡ್‌ ಡಿಸ್ಕ್‌ನಲ್ಲಿ ಮಹಿಳೆಯರ ಜತೆಗಿನ ಖಾಸಗಿ ವಿಡಿಯೊ ಪತ್ತೆ!

Murder Case

ಬೆಳಗಾವಿ: ಬೆಳಗಾವಿಯ ಉದ್ಯಮಿ ಸಂತೋಷ್ ಪದ್ಮಣ್ಣನವರ್ ಕೊಲೆ ಪ್ರಕರಣಕ್ಕೆ (Murder Case) ಸ್ಫೋಟಕ ತಿರುವು ಸಿಕ್ಕಿದೆ. ಉದ್ಯಮಿಯ ಮನೆಯಲ್ಲಿದ್ದ ಹಾರ್ಡ್‌ ಡಿಸ್ಕ್‌ನಲ್ಲಿ ಹಲವು ಮಹಿಳೆಯರ ಜತೆಗಿರುವ ಖಾಸಗಿ ಫೋಟೊ ಮತ್ತು ವಿಡಿಯೊ ಪತ್ತೆಯಾಗಿವೆ. ಹಾರ್ಡ್‌ ಡಿಸ್ಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

ಉದ್ಯಮಿ ಸಂತೋಷ್​ ನೂರಾರು ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ನಂತರ ಅವುಗಳನ್ನು ಹಾರ್ಡ್​​ ಡಿಸ್ಕ್​ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು ಎನ್ನಲಾಗಿದೆ. ಪೊಲೀಸರು 13 ಹಾರ್ಡ್ ಡಿಸ್ಕ್, ಮನೆಯ ಸಿಸಿಟಿವಿ ಡಿವಿಆರ್, ಮೂರು ಪೆನ್ ಡ್ರೈವ್​​ಗಳನ್ನು ವಶಕ್ಕೆ ಪಡೆದು, ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

ಏನಿದು ಪ್ರಕರಣ?

ಅ.9ರಂದು ಸಂತೋಷ್ ಪದ್ಮಣ್ಣನವರ್ ಮೃತಪಟ್ಟಿದ್ದರು. ಕುಟುಂಬಸ್ಥರು ಹೃದಯಾಘಾತದಿಂದ ಉದ್ಯಮಿ ಸಾವನಪ್ಪಿದ್ದಾರೆ ಎಂದು ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ವೇಳೆ ಸಂತೋಷ್ ಪುತ್ರಿ ತನ್ನ ತಂದೆಯ ಸಾವು ಹೃದಯಘಾತದಿಂದ ಅಗಿಲ್ಲ ಎಂದು ಅನುಮಾನ ವ್ಯಕ್ತಪಡಿಸಿ, ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ತಾಯಿ ಉಮಾ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತೋಷ್ ಪತ್ನಿ ಉಮಾ ಸೇರಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Baba Siddique: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಗುಜರಿ ವ್ಯಾಪಾರಿ ಪೊಲೀಸ್‌ ಬಲೆಗೆ; ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

ವಿಚಾರಣೆ ವೇಳೆ ಪತ್ನಿ ಉಮಾ, ತಾನು ಮತ್ತು ಫೇಸ್​ಬುಕ್​ ಗೆಳೆಯರು ಸೇರಿಕೊಂಡು ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದರು. ಉದ್ಯಮಿ ಸಂತೋಷ್‌ಗೆ ಹಲವು ವಿವಾಹೇತರ ಸಂಬಂಧಗಳು ಇದ್ದಿದ್ದರಿಂದಲೇ ಕೊಲೆ ಮಾಡಿರುವುದಾಗಿ ಪತ್ನಿ ಹೇಳಿದ್ದರು. ಅಲ್ಲದೇ ಹಾರ್ಡ್ ಡಿಸ್ಕ್​ನಲ್ಲಿ ಅಶ್ಲೀಲ ವಿಡಿಯೊಗಳ ಬಗ್ಗೆಯೂ ಮಾಹಿತಿ ನೀಡಿದ್ದರು. ಜತೆಗೆ, ಪತಿ ಸಂತೋಷ ಪದ್ಮಣ್ಣನ್ನವರ ಮಕ್ಕಳ ಎದುರು ಬೆತ್ತಲಾಗಿ ಓಡಾಡುತ್ತಿದ್ದರು ಅಂತ ಪೊಲೀಸರ ಮುಂದೆ ಹೇಳಿದ್ದರು. ಈ ವಿಡಿಯೋಗಳನ್ನು ಕೂಡ ಉಮಾ ಪೊಲೀಸರಿಗೆ ನೀಡಿದ್ದರು.