Friday, 13th December 2024

ಸರಕಾರಿ ನೌಕರನ ಕೊಲೆ 

ತುಮಕೂರು: ಸರಕಾರಿ ನೌಕರನೋರ್ವನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ತುಮಕೂರಿನ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕ ಹರೀಶ್ ಕೊಲೆಯಾಗಿರುವ ದುರ್ದೈವಿ.
ನಗರದ ಉಪ್ಪಾರಹಳ್ಳಿ ಬಳಿ ಇರುವ ಸರ್ವೋದಯ ಶಾಲೆ ಮುಂಭಾಗದಲ್ಲಿ ಶವ ಪತ್ತೆಯಾಗಿದ್ದು, ಬುಧವಾರ ಬೆಳಗ್ಗೆ  ಸಾರ್ವಜನಿಕರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.