ವಿಜಯಪುರ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಆಡಳಿತಾತ್ಮಕ ವಿಚಾರವಾಗಿ ಅವರ ತೇಜೋವಧೆಗೆ ಷಡ್ಯಂತ್ರ ನಡೆದಿದ್ದು, ಅವರ ಮೇಲಿನ ಆರೋಪಗಳು ಸುಳ್ಳಾಗಲಿವೆ ಎಂದು ಜಿಲ್ಲೆಯ ಸ್ವಾಮೀಜಿಗಳ ಒಕ್ಕೂಟ ಒಕ್ಕೂರಲಿನಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ 15ಕ್ಕೂ ಹೆಚ್ಚು ಸ್ವಾಮೀಜಿಗಳು, ಇದೊಂದು ಷಡ್ಯಂತ್ರ, ಅವರ ವಿರಿದ್ದ ಸಮರ್ಥ ಅಧಿಕಾರಿಯಿಂದ ತನಿಖೆ ನಡೆಸಬೇಕು. ಅವರು ಸಮಾಜಕ್ಕೆ ನೀಡಿರುವ ಕೊಡುಗೆ, ಸಾಮಾಜಿಕ ಕಾರ್ಯಗಳನ್ನು ಸಹಿಸದೆ ಕೆಲವರು ಹೀಗೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಆಲಮೇಲಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸ್ವಾಮೀಜಿಗಳ ಹೆಸರು ಕೆಡಿಸಲು ಕೆಲವರು ಮಕ್ಕಳನ್ನು ಬಳಸಿಕೊಂಡು ಈ ರೀತಿ ಆರೋಪ ಮಾಡಿರುವುದು ತಪ್ಪು. ನಾವೆಲ್ಲರೂ ಚಿತ್ರದುರ್ಗ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರಿಗೆ ನೈತಿಕ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುರುಘಾ ಶರಣರು ಹಿರಿಯರಿದ್ದಾರೆ, ಅವರು ಯಾವುದೇ ರೀತಿಯ ಪಲಾಯನ ಮಾಡುವ ಸ್ವಾಮಿಜಿಗಳಲ್ಲ. ತಮ್ಮ ವಕೀಲರನ್ನು ಭೇಟಿ ಮಾಡಲು ಹೋಗಿದ್ದರು. ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಕೆಲವರು ನದುದುಕೊಳ್ಳುತ್ತಿರುವುದನ್ನು ಖಂಡಿಸಿದರು.
ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಸತ್ಯ ಹೊರಬೇಕಾದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸ್ವಾಮಿಜಿಗಳೇ ಹೇಳುವಂತೆ ಕಳೆದ 15 ವರ್ಷಗಳಿಂದ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಹಿಂದೆ ಒಂದು ದೊಡ್ಡ ಶಾದ್ಯ್ನ್ತ್ರವೇ ಇದೆ. ಸರಕಾರ ಒಬ್ಬ ಹಿರಿಯ ಪೂಜ್ಯರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ತಪ್ಪು. ಸೂಕ್ತ ತನಿಖೆ ನಡೆದರೆ ಅವರು ಆರೋಪ ಮುಕ್ತರಾಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.
ಮಠಕ್ಕೆ ಭಕ್ತರೇ ಆಧಾರ. ಭಕ್ತರೇ ಸುಪ್ರೀಂ. ಅವರು ಹೇಳಿದಂತೆ ಎಲ್ಲಾ ಸ್ವಾಮೀಜಿಗಳು ಕೇಳಲೇಬೇಕು. ಸ್ವಾಮೀಜಿಗಳ ಮೇಲಿನ ಸುಳ್ಳು ಆರೋಪಗಳಿಂದ ನಾವೆಲ್ಲರೂ ಮನನೊಂದಿದ್ದೇವೆ. ಅದಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಂಥನಾಳ ವೃಷಭಲಿಂಗ ಸ್ವಾಮೀಜಿ, ಸಿಂದಗಿಯ ಡಾ.ಪ್ರಭುಲಿಂಗ ಶಿವಾಚಾರ್ಯರು, ನಾಗಠಾಣ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು, ಮಸಿಬಿನಾಳದ ಡಾ. ಸಿದ್ಧರಾಮ ಸ್ವಾಮೀಜಿ, ಆಲಮೇಲ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಯಾಂಕಂಚಿಯ ಅಭಿನವ ರುದ್ರಮುನಿ ಸ್ವಾಮೀಜಿಗಳು ಸೇರಿದಂತೆ 15ಕ್ಕೂ ಹೆಚ್ಚು ಸ್ವಾಮೀಜಿಗಳು ಉಪಸ್ಥಿತರಿದ್ದರು.