Thursday, 12th December 2024

ನಿಮ್ಮ ಪರಿಶ್ರಮಕ್ಕೆ ಫಲ ನೀಡುವ ಕರ್ತವ್ಯ ನನ್ನದು

ಕ್ಷೇತ್ರದ ಎಲ್ಲಮ್ಮ ದೇವಿ ದರ್ಶನ ಪಡೆದು ಕ್ಷೇತ್ರಕ್ಕೆ ಲಗ್ಗೆ

ಬಿಜೆಪಿ ಮುಖಂಡರ ಜೊತೆಗೆ ಬಿ.ವಿ ನಾಯಕ ಸಭೆ.

ಮಾನ್ವಿ : ಮಾನವಿ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಅಭ್ಯರ್ಥಿ ಬಿ.ವಿ ನಾಯಕ ಇಂದು ಕಾರ್ಯಕರ್ತರ ಸಮ್ಮುಖದಲ್ಲಿ ನೀರಮಾನವಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆದು ಮಾನ್ವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರಕ್ಕೆ ಲಗ್ಗೆ ಇಟ್ಟರು.

ಪಟ್ಟಣದ ಮಾನಪ್ಪ ನಾಯಕ ಇವರ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ನಾನು ನನ್ನ ತಂದೆ ಸೇರಿದಂತೆ ನಮ್ಮ ಕುಟುಂಬವೇ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ಯಾರೋ ಒಬ್ಬ ವ್ಯಕ್ತಿಯ ಸ್ವಾರ್ಥ ರಾಜಕಾರಣಕ್ಕೆ ಬೇಸತ್ತು ಮನನೊಂದು ಪಕ್ಷ ತೊರೆಯಬೇಕಾಗಿ ಬಂದಿರುವ ಕಾರಣ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿ ಮಾನ್ವಿ ಕ್ಷೇತ್ರದ ಅಭ್ಯರ್ಥಿಯಾಗಿ ದ್ದೇನೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದು ಬಿಜೆಪಿ ಅಭ್ಯರ್ಥಿ ಬಿ ವಿ ನಾಯಕ ಸ್ಥಳೀಯ ನಾಯಕರಿಗೆ ಮನವಿ ಮಾಡಿದರು.

ಮಾನ್ವಿ ತಾಲೂಕಿನ ಬಿಜೆಪಿ ಪಕ್ಷದ ಆಕಾಂಕ್ಷಿಗಳು ಹಗಲಿರುಳು ಶ್ರಮವಹಿಸಿ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡಿದ್ದೀರಿ ಎನ್ನುವ ಸಂಪೂರ್ಣ ಮಾಹಿತಿ ನನ್ನಲ್ಲಿದೆ ನಾನಿಲ್ಲಿ ಬಿಜೆಪಿ ಸಾಂಕೇತಿಕ ಅಭ್ಯರ್ಥಿ ಅಷ್ಟೇ ಆದರೆ ಅದರ ಸಂಪೂರ್ಣ ಅಧಿಕಾರ ನಿಮ್ಮಲ್ಲಿರುತ್ತದೆ ಯಾವುದೇ ಕಾರಣದಿಂದ ನಿಮ್ಮನ್ನು ಹಾಗೂ ನಿಮ್ಮ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡದೆ ನೀವು ತಿಳಿಸಿದ ಕಾರ್ಯವನ್ನು ನಾನು ಮಾಡಿಯೇ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು..

ಈ ಸಂದರ್ಭದಲ್ಲಿ ಬಿಜೆಪಿ ಚುನಾವಣೆ ಉಸ್ತುವಾರಿ ಮಾಜಿ ಮೇಯರ್ ಕಾರ್ತಿರಡ್ಡಿ, ಬಂಡಾ ಹೈದರಾಬಾದ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಟಿಕೆಟ್ ಆಕಾಂಕ್ಷಿಗಳಾಗಿದ್ದಾ ಮಾನಪ್ಪ ನಾಯಕ, ಅಯ್ಯಪ್ಪ ನಾಯಕ, ಕೋಟ್ರೇಶಪ್ಪ ಕೋರಿ, ಸೇರಿ ದಂತೆ ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮರಡ್ಡಿ ಬೋಗವತಿ, ಶರಣಪ್ಪಗೌಡ, ಮಲ್ಲಿಕಾರ್ಜುನ ಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.