ತುಮಕೂರು: ಜನಕಲ್ಯಾಣ ಟ್ರಸ್ಟ್(ರಿ),ತುಮಕೂರು ಇವರ ವತಿಯಿಂದ ನವೆಂಬರ್ 26ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಸಿದ್ದವಿನಾಯಕ ಸಮುದಾಯಭವನದಲ್ಲಿ ನಾರಿಶಕ್ತಿ ಸಂಗಮ ಹೆಸರಿನ ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಹಿಳಾ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ವೀಣಾ ಪರಮೇಶ್ ತಿಳಿಸಿದ್ದಾರೆ
ನಗರದ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಾರಿ ಶಕ್ತಿ ಸಂಗಮ ಹೆಸರಿನಲ್ಲಿ ಸಮಾನ ಮನಸ್ಕ ಮಹಿಳೆಯರನ್ನು ಒಗ್ಗೂಡಿಸಿ, ಅವರಲ್ಲಿ ರಾಷ್ಟಿçÃಯ ಚಿಂತನೆಗಳು,ಮಹಿಳಾ ಸಮಸ್ಯೆಗಳ ಚರ್ಚೆ, ಪರಿಹಾರ ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳುವ ಉದ್ದೇಶ ಇದಾಗಿದೆ ಎಂದರು.
ನಾರಿಶಕ್ತಿ ಸಂಗಮ ಹೆಸರಿನಲ್ಲಿ ಮಹಿಳಾ ಸಮಾವೇಶದಲ್ಲಿ ಪ್ರಮುಖವಾಗಿ ಕೃಷಿ, ಕೈಗಾರಿಕೆ, ವೈದ್ಯಕೀಯ, ಸೇನೆ, ಅಂತರಿಕ್ಷ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಔದ್ಯೋಗಿಕ ಕ್ಷೇತ್ರ ಸೇರಿದಂತೆ 11 ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯ ರನ್ನು ಒಂದೆಡೆ ಕಲೆ ಹಾಕಿ, ಇದನ್ನು ಹೊರಜಗತ್ತಿಗೆ ತೊರಿಸಿಕೊಡುವ ನಿಟ್ಟಿನಲ್ಲಿ ಇಂತಹ 400ಕ್ಕೂ ಹೆಚ್ಚು ಸಮಾವೇಶಗಳನ್ನು ದೇಶದಾದ್ಯಂತ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಹಮ್ಮಿಕೊಳ್ಳಲು ಮುಂದಾಗಿದೆ ಎಂದು ನುಡಿದರು.
ಸಮಾವೇಶವನ್ನು ಸಾಮಾಜಿಕ ಕಾರ್ಯಕರ್ತೆ ಯಶೋಧಮ್ಮ ಉದ್ಘಾಟಿಸುವರು.ಮುಖ್ಯ ಅತಿಥಿಗಳಾದ ತಿಪಟೂರಿನ ಸರಕಾರಿ ವೈದ್ಯಕೀಯ ಆಸ್ಪತ್ರೆಯ ಡಾ.ಸುಮನ,ಮುಖ್ಯ ವಕ್ತಾರರಾಗಿ ವಿದುಷಿ ಅಮೃತವರ್ಷಿಣಿ ಉಮೇಶ್, ಭಾಗವಹಿಸಲಿದ್ದು, ಅಧ್ಯಕ್ಷತೆ ಯನ್ನು ಮಹಿಳಾ ಸಮಾವೇಶ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶ್ರೀಮತಿ ಮರಿಚನ್ನಮ್ಮ ವಹಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭದಲ್ಲಿ ಸಾವಯವ ಕೃಷಿಕರಾದ ಸುಧಾ ಸುದರ್ಶನ್,ಮುಖ್ಯ ವಕ್ತಾರರಾಗಿ ಶಿಕ್ಷಣ ತಜ್ಞೆ ರಾಧ ರಾಮ ಸ್ವಾಮಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷೆ ನೇತ್ರ ತಜ್ಞರಾದ ವೀಣಾ ಪರಮೇಶ್ ವಹಿಸುವರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಮರಿಚನ್ನಮ್ಮ, ಸಂಯೋಜಕರಾದ ವಾಸವಿಗುಪ್ತ, ಡಾ.ಭಾಗ್ಯಲಕ್ಷ್ಮಿ, ಚೈತ್ರ ಮಂಜುನಾಥ್,ಶ್ರೀದೇವಿ ಆನಂತರಾಮು, ಸುಮಾ ಬಾಬು, ನಿವೃತ್ತ ಸರಕಾರಿ ವಕೀಲರಾದ , ಮಮತ ಮತ್ತಿತರರು ಪಾಲ್ಗೊಂಡಿದ್ದರು.