Sunday, 8th September 2024

ನಾಡ ದೇವತೆ ಬಿದರಾಂಬಿಕ ದೇವಿಯ ಅದ್ದೂರಿ ಸಿಡಿ ಉತ್ಸವ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಬಿದರೆಗುಡಿಯ ನಾಡದೇವತೆಯ ಸಿಡಿ ಉತ್ಸವ ಕಾರ್ಯ ಕ್ರಮವು ಬಹಳ ಅದ್ದೂರಿಯಾಗಿ ಭಕ್ತಿ ಸಮರ್ಪಣೆಯಲ್ಲಿ ಭಾನುವಾರ ಮುಂಚಾನೆ ಸಮಯದಲ್ಲಿ ಸಾವಿರಾರು ಭಕ್ತ ಸಮೂಹದ ಮಧ್ಯೆ ನಡೆಯಿತು.

೬೪ ಸೀಮೆಯ ಹಳ್ಳಿಗೂ ಹೆಚ್ಚು ಹೆಸರಾಗಿರುವ ಬಿದರೆಗುಡಿ ಬಿದರೆಮ್ಮ ದೇವಿ ಯು ಪಕ್ಕದ ಗ್ರಾಮಗಳಾದ ಮತ್ತಿಹಳ್ಳಿ, ಮಡೆನೂರು, ಗೌಡನಕಟ್ಟೆಯ ಬಿದರೆಮ್ಮ ಉತ್ಸವ ಮೂರ್ತಿಗಳ ತೇರು ಮೆರವಣಿಗೆಯ ಮೂಲಕ ಆಗಮಿಸಿ ಬಿದರೆಮ್ಮ ದೇವಾಲಯದ ಧರ್ಮ ದರ್ಶಿ ಶಿವಕುಮಾರ್‌ ರವರ ನೇತೃತ್ವದಲ್ಲಿ ಕರೀಕೆರೆ ಹಾಗೂ ಚಿಕ್ಕಬಿದರೆ ಗ್ರಾಮಗಳ ಗ್ರಾಮಸ್ಥರಿಂದ ಸಿಡಿ ಕಂಬಗಳನ್ನು ತಳಿರು ತೋರಣ ಗಳಿಂದ ಹಣ್ಣು ಹಂಪಲುಗಳಿ0ದ, ಆಟಿಕೆಗಳಿಂದ, ಸಿಹಿ ತಿಂಡಿಗಳಿ0ದ ಶೃಂಗಾರ ಮಾಡಿದ ೭೦ ಅಡಿ ಹೆಚ್ಚು ಉದ್ದದ ಸಿಡಿ ಕಂಬಕ್ಕೆ ದೇವರ ಮಕ್ಕಳೆಂದು ಕರೆಯುವ ವ್ಯಕ್ತಿಯನ್ನು ದೈವಾನುಗ್ರಹದ ಮೂಲಕ ಕುಳ್ಳರಿಸಿ ಉತ್ಸವವು ಭಕ್ತಿ ಪರಾಕಷ್ಟೆಯಲ್ಲಿ ನಡೆಯಿತು.

error: Content is protected !!