Thursday, 19th September 2024

Dr G Parameshwar: ನಾಗಮಂಗಲ ಗಲಭೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವುದಿಲ್ಲ-ಜಿ.ಪರಮೇಶ್ವರ್

ಕಲಬುರಗಿ: ನಾಗಮಂಗಲ ಪ್ರಕರಣ(Nagamangala Incident) ದಲ್ಲಿ ಎಲ್ಲವೂ ಎಕ್ಸಾಮಿನೆಶನ್ ಮಾಡುತ್ತಿದ್ದು, ಯಾರನ್ನು ಸಹ ರಕ್ಷಣೆ ಮಾಡುವುದಾಗಲಿ, ಯಾರನ್ನು ಸಹ ಅನಾವಶ್ಯಕ ಶಿಕ್ಷಿಸುವುದಿಗಲಿ ಮಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Home Minister Dr G Parameshwar) ತಿಳಿಸಿದರು.

ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಭಾಗಿಯಾಗಲು ಕಲಬುರಗಿ (Kalaburagi) ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೆ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಯನ್ನು ಅಮಾನತು ಮಾಡಲಾಗಿದ್ದು, ರಾಜ್ಯ ಸರ್ಕಾರ ಘಟನೆ ಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದರು.

ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಮಾಡಲಿ ಆದರೂ, ನಾವು ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುವು ದಿಲ್ಲ. ನಾನು ಆಕಸ್ಮಿಕವಾಗಿ ಹೇಳಿರುವ ಮಾತನ್ನು ಹೇಗೆ ಬೇಕಾದ್ರೂ ಟ್ವಿಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಮಾತನಾಡಿದ ಅವರು, ದೂರು ಯಾವಾಗ ಕೊಟ್ಟರು ಆವಾಗಲೇ ಪೋಲಿಸರು ಆಕ್ಟ್ ಮಾಡಿದ್ದಾರೆ. ನಟ ದರ್ಶನ್ ಬಂಧನದ ಸಂದರ್ಭದಲ್ಲಿ ಆದ ಪ್ರಕರಣದ ಬಗ್ಗೆ ವರದಿ ತರಿಸಿ ಕೊಂಡು ಬೇರೆ ಬೇರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡಲಾಗಿದೆ.

ದರ್ಶನ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಚಾರ ಮಾಡುತ್ತೇವೆ ಎಂದ ಅವರು, ಈ ವಿಷಯ ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವುದು ಡೌಟ್. ಬಂದರೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Dr G Parameshwar: ಅಪಘಾತ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ, ಸ್ಥಳ ಪರಿಶೀಲಿಸಿದ ಸಚಿವ ಪರಮೇಶ್ವರ್