Sunday, 8th September 2024

ಮುಂದೆ ಮೋದಿಯನ್ನು ಪ್ರದಾನಿ ಮಾಡುವ ಸಲುವಾಗಿ ನಾಗೇಶ್ ಗೆಲ್ಲಿಸಿ: ಅಮಿತ್ ಷಾ

ಕೊಬ್ಬರಿ ಬಿಟ್ಟು ಸುಪಾರಿಗೆ ಎಂ.ಎಸ್.ಪಿ ಎಂದ ಅಮಿತ್ ಷಾ

ತಿಪಟೂರು : ಮುಸ್ಲಿಂರಿಗೆ ಇದ್ದ ಮೀಸಲಾತಿಯನ್ನು ಮಾಯಮಾಡಿದ್ದೇವೆ, ಅದು ಸಂವಿಧಾನಕ್ಕೆ ವಿರುದ್ದವಾಗಿತ್ತು ಅದನ್ನು ತೆಗೆದು ಸಂವಿಧಾನಿಕವಾಗಿ ಮೀಸಲಾತಿ ಸಿಗಬೇಕಾಗಿದ್ದ ಒಕ್ಕಲಿಗ, ಲಿಂಗಾಯತರಿಗೆ ಕೊಡು ತ್ತಿದ್ದೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ತಿಳಿಸಿದರು.

ತಿಪಟೂರು ಬಿ.ಜೆ.ಪಿ ಅಭ್ಯರ್ಥಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರ ಮತಯಾಚಿಸಲು ತ್ರಿಮೂರ್ತಿ ಚಿತ್ರಮಂದಿರ ಹತ್ತಿರದಿಂದ ಸಿಂಗ್ರಿನ0ಜಪ್ಪ ವೃತ್ತದವರೆಗೆ ರೋಡ್ ಷೋ ನಡೆಸಿ ಮಾತನಾಡಿದ ಅವರು ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರೈತರ ಆದಾಯ ದ್ವಿಗುಣ ಗೊಳಿಸುತ್ತಿದ್ದೇವೆ, ಕೊಬ್ಬರಿಗೆ (ಸುಫಾರಿ ಎಂದರು) ಕನಿಷ್ಟ ಬೆಂಬಬಲ ಬೆಲೆಯನ್ನು ಕೊಟ್ಟಿದ್ದೇವೆ.

ಸಂವಿಧಾನಿಕವಾಗಿ ಮೀಸಲಾತಿ ಸಇಗಬೇಕಾಗದವರಿಗೆ ಕೊಟ್ಟು ದೇಶವು ಅಭಿವೃದ್ಧಿ ಪತದ್ತ್ ಸಆಗುವಂತೆ ಮಾಡುತ್ತಿದ್ದೇವೆ. ಹಾಗೂ ನಿಮ್ಮ ನಾಗೇಶ್ ಸಾಕ್ಷÄ ಅಭಿವೃದ್ಧಿಯನ್ನು ಮಾಡಿ ದ್ದಾರೆ. ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ ನಾಗೇಶ್‌ಗೆ ಮತ ನೀಡಿ ಗೆಲ್ಲಿಸಿ. ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ನರೇಂದ್ರಮೋದಿಗೆ ಮತನೀಡಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ ಸರ್ಕಾರ ವನ್ನು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿ.ಸಿ. ನಾಗೇಶ್ ರವರ ಜೊತೆಯಲ್ಲಿ ರಾಜ್ಯ ಎಸ್.ಸಿ.ಮೋರ್ಚಾ ಉಪಾಧ್ಯಕ್ಷ ಗಂಗರಾಜು, ಆಯರಹಳ್ಳಿ ಶಂಕರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಬಳ್ಳಿಕಟ್ಟೆ, ನಗರ ಬಿಜೆಪಿ ಅಧ್ಯಕ್ಷ ಗುಲಾಬಿ ಸುರೇಶ್, ಎಚ್.ಬಿ.ದಿವಾಕರ್ ವಾಹನ ದಲ್ಲಿದ್ದರು.

ಜನಸಂದಣಿಯಲ್ಲಿ ಮೊಬೈಲ್ ಕಳ್ಳರ ಕರಾಮತ್ತು ಜೋರಾಗಿದ್ದು ಸಾಕಷ್ಟು ಜನರ ಮೊಬೈಲ್‌ಗಳು ಕಳ್ಳತನವಾಗಿದ್ದು ಒಂದು ಕಡೆಯಾದರೆ ರೋಡ್‌ಷೋಗೆ ಬಂದ ಕಾರ್ಯಕರ್ತರಿಗೆ ಯಾರು ಬಂದಿದ್ದಾರೆ ಎಂಬುದೇ ಗೊತ್ತಿಲ್ಲದೇ ಇರುವುದು ವಿಪರ್ಯಾಸ, ಇನ್ನು ಜೆ.ಡಿ.ಎಸ್ ರೇವಣ್ಣ ಬಂದಿದ್ದಾರೆ ಎಂದಿರುವ ಒಂದು ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೃಹಸಚಿರ ರಕ್ಷಣಾ ವ್ಯೂಹದಿಂದ ಸಾರ್ವಜನಿಕರಿಗೆ ತೊಂದರೆ : ಕೇಂದ್ರ ಗೃಹಸಚಿವ ಎಂದು ಮೇಲೆ ಅವರಿಗೆ ಭದ್ರತೆ ನೀಡುವುದು ಸೈನಿಕರ ಮತ್ತು ಆರಕ್ಷಕರ ಆದ್ಯ ಕರ್ತವ್ಯ ಆದರೆ ಈ ಕಟ್ಟು ನಿಟ್ಟಿನ ಭದ್ರತೆಯಿಂದ ಸಾರ್ವಜನಿಕರಿಗೆ ಇನ್ನಿಲ್ಲದ ಕಷ್ಟವಾಗಿತು, ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗುವಂತಿಲ್ಲ, ರಸ್ತೆ ದಾಟುವಂತಿಲ್ಲ, ವಾಹನಗಳನ್ನು ಆರಕ್ಷಕರು ಒಳಗೆ ಬಿದೇ ಇದ್ದರಿಂದ ಸಾರ್ವಜನಿಕರು ಚುನಾವನೆಯನ್ನೇ ಶಪಿಸುತ್ತಾ ಆರಕ್ಷಕರ ಮೇಲೆ ಇಡಿ ಶಾಪ ಹಾಕಿ ಗೊಣಗು ತ್ತಲೇ ಸುತ್ತವರಿದು ತಮ್ಮ ಸ್ಥಳವನ್ನು ಪಲುಪಿದರು.

error: Content is protected !!