Sunday, 15th December 2024

ವರ್ಷ ಪೂರೈಸಿದ “ನಮ್ಮ ಆರೋಗ್ಯ ಕೇಂದ್ರ”

ತಿಪಟೂರು: ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ತಿಪಟೂರಿನಲ್ಲಿ ಪ್ರಾರಂಭವಾಗಿರುವ ನಮ್ಮ ಆರೋಗ್ಯ ಕೇಂದ್ರಗಳಿಗೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ.
ಹಾಲ್ಕುರಿಕೆ ಗ್ರಾಮದಲ್ಲಿ ಮೊದಲ ಬಾರಿಗೆ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಯಿತು. ನಂತರ ಕೆ.ಬಿ ಕ್ರಾಸ್ ನಲ್ಲಿ  ಇನ್ನೊಂದು ಆರೋಗ್ಯ ಕೇಂದ್ರದ ಘಟಕವನ್ನು ಆರಂಭಿಸಲಾಯಿತು. ಈ ಎರಡು ಘಟಕಗಳು ನೂರಾರು ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ತುಮಕೂರು ಜಿಲ್ಲೆಯಲ್ಲಿಯೇ ಮೊದಲ ಖಾಸಗಿ ಯೋಜನೆಯಾಗಿದೆ ಎಂಬುದು ಹೆಮ್ಮೆ ವಿಚಾರ. ನಮ್ಮ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ ಜನಸ್ಪಂದನ ಟ್ರಸ್ಟ್ ನ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ (ಟುಡ) ಸಲ್ಲುತ್ತದೆ.ಆರ್ಟಿಸ್ಟ್ ಫಾರ್ ಹರ್ ನ ಸಿಇಓ ಡಾ.ಹೇಮಾ ದಿವಾಕರ್,ಎಂ ಜೆ ಎಸ್ಪಿ ಆರ್ ನ ಮುಖ್ಯಸ್ಥ,ಎಂ.ಜೆ.ಶ್ರೀಕಾಂತ್ ಅವರು ನಮ್ಮ ಆರೋಗ್ಯ ಕೇಂದ್ರದ ಸ್ಥಾಪನೆಯ ನೇತೃತ್ವ ವಹಿಸಿದ್ದರು.
ನಮ್ಮ ಆರೋಗ್ಯ ಕೇಂದ್ರವು ಸೋಮವಾರ- ಶುಕ್ರವಾರದಿಂದ 3 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಬಿಪಿ, ಶುಗರ್ ಪರೀಕ್ಷೆ, ಜ್ವರ ತಪಾಸಣೆ ಮಾಡಲಾಗುತ್ತದೆ. ಆರೋಗ್ಯ ಸಖಿಯರು ‘ಹೆಲ್ತ್ ಫಾರ್ ಹರ್’ ಆ್ಯಪ್ ಮೂಲಕ ರೋಗಿಗಳನ್ನು ಒಬಿಜಿ ತಜ್ಞರೊಂದಿಗೆ ಸಂಪರ್ಕಿಸಿ ಪರಿಹಾರಗಳನ್ನು ಪಡೆಯಲು ನೆರವಾಗುತ್ತಾರೆ.ಹಾಗೆಯೇ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಹೆಣ್ಣು ಮಕ್ಕಳ ಆರೋಗ್ಯದ ಕುರಿತು ಜಾಗೃತಿಯನ್ನು ಮೂಡಿಸುತ್ತಾರೆ.
ಮಹಿಳೆಯರ ಪ್ರಸ್ತುತ  ಬಂಜೆತನ,ಗರ್ಭಕೋಶ ಸಮಸ್ಯೆ,ಬಿಳಿಮುಟ್ಟು , ಅನೀಮಿಯಾ,ಮುಟ್ಟಿನ ಸಮಸ್ಯೆ, ಕಾಲುನೋವು, ಮಂಡಿನೋವು ಇನ್ನಿತರ ಯಾವುದೇ‌ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಕೌನ್ಸಲಿಂಗ್ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಿದ್ದು,ಎಂಜೆ ಶ್ರೀಕಾಂತ್ ಅವರ ಪ್ರಕಾರ, 2019ರ ಕೋವಿಡ್ ಸಾಂಕ್ರಾಮಿಕ ರೋಗವು ವಿಕೇಂದ್ರೀಕೃತ ವೈದ್ಯಕೀಯ ಆರೈಕೆ ಸೌಲಭ್ಯವನ್ನು ಹೊಂದುವ ಪ್ರಾಮುಖ್ಯತೆ ಸೇರಿದಂತೆ ಅನೇಕ ವಿಷಯಗಳನ್ನು ಕಲಿಸಿತು.ನಮ್ಮ ಆರೋಗ್ಯ ಕೇಂದ್ರವು ಅದರ ಉದ್ದೇಶವನ್ನು ಪೂರೈಸುತ್ತಿದ ಎಂದು ಹೇಳಿದರು.