Sunday, 8th September 2024

ಜೀವವನ್ನು ಕಾಪಾಡಿದಂತೆ ಮರ ಗಿಡಗಳನ್ನು ರಕ್ಷಿಸಿ ಪೋಷಿಸಬೇಕು

ತಿಪಟೂರು: ಜಗತ್ತಿನಲ್ಲಿ ಜೀವಿಸುವ ಪ್ರತಿ ಮನುಷ್ಯರು ತಮ್ಮ ಜೀವವನ್ನು ಕಾಪಾಡಿದಂತೆ ಮರ ಗಿಡಗಳನ್ನು ರಕ್ಷಿಸಿ ಪೋಷಿಸಬೇಕು ಪ್ರತಿ ಜೀವ ಕುಲಕ್ಕೆ ಪ್ರಕೃತಿಯ ಕೊಡುಗೆ ಅಪಾರವಾಗಿದ್ದು ಜಗತ್ತಿನ ಪ್ರತಿ ಜೀವಸಂಕುಲಕ್ಕೆ ಭಗವಂತನ ಕೊಡುಗೆಯಿದೆ ಎಂದು ಶ್ರೀ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ನೊಣವಿನಕೆರೆ ಎಸ್.ಕೆ.ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ ಮಾತನಾಡಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡಿ ಪೋಷಕರು ತಮ್ಮ ಮಕ್ಕಳನ್ನು ಪೋಷಿಸಿದಂತೆ ಗಿಡ ಮರಗಳನ್ನು ಪೋಷಿಸಿ ದಾಗ ಮಾತ್ರ ಕಾಣುವ ದೇವರಾದ ಗಿಡಮರಗಳು ಪೂಜಿಸಿದಂತೆ ಪ್ರತಿಯೊಬ್ಬರೂ ಲಾಲನೆ ಮತ್ತು ಪಾಲನೆಯಲ್ಲಿ ತೊಡಗಿ ಕೊಳ್ಳಬೇಕು ಎಂದು ತಿಳಿಸಿದರು.

ಈ ಸಮಯದಲ್ಲಿ ಶಾಲೆಗೆ ನೂತನವಾಗಿ ಪ್ರವೇಶ ಪಡೆದ ಮಕ್ಕಳಿಗೆ ಸಸಿಗಳನ್ನು ನೀಡಿ ವಿದ್ಯಾಭ್ಯಾಸಕ್ಕೆ ಪ್ರವೇಶ ಮಾಡಿಕೊಳ್ಳಲಾಯಿತು. ಈ ಸಂದರ್ಭ ದಲ್ಲಿ ಪ್ರಾಂಶುಪಾಲರಾದ ಷಣ್ಮುಖ್, ಶಿಕ್ಷಕಿಯರಾದ, ಪವಿತ್ರ, ಶರಣ್ಯ ಕವಿತಾ, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಇದ್ದರು

error: Content is protected !!