ತುಮಕೂರು: ಅರಣ್ಯ ಇಲಾಖೆವತಿಯಿಂದ ನಗರದ ಗೊಲ್ಲಹಳ್ಳಿಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರದ ಭಾಗ ಮನುಷ್ಯ, ಆದರೆ ಮನುಷ್ಯ ಪರಿಸರ ತನ್ನ ಭಾಗ ಎಂದು ತಿಳಿದು ಅದರ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಪ್ರಕೃತಿ ವಿಕೋಪಗಳನ್ನು ನಾವು ಕಾಣಬಹುದಾಗಿದೆ. ಪರಿಸರದ ಭಾಗವಾಗಿ ನಾವೆಲ್ಲರು ಅದನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನಗರಪಾಲಿಕೆ ಆಯುಕ್ತ ದರ್ಶನ್ ಮಾತನಾಡಿ, ತುಮಕೂರು ಜಿಲ್ಲೆ ಅತ್ಯಂತ ದೊಡ್ಡ ಜಿಲ್ಲೆ. ಇಲ್ಲಿನ ಪರಿಸರ ಕಾಪಾಡಬೇಕೆಂದರೆ ನಾವುಗಳು ಹೆಚ್ಚು ಹೆಚ್ಚು ಮರಗಳನ್ನು ನಡೆಬೇಕಾಗುತ್ತದೆ. ಅದರಲ್ಲಿ ಸಕಲ ಜೀವರಾಶಿಗಳಿಗೆ ಮೇವು ಒದಗಿಸುವ ಗಿಡ ಮರಗಳನ್ನು ನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುವಂತೆ ಮಾಡಬೇಕಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಡಿಎಫ್‌ಒ ಅನುಪಮ,ಸಾಮಾಜಿಕ ವಲಯ ಡಿಎಫ್‌ಒ ನಾಗರಾಜು, ಎಸಿಎಫ್ ಮಹೇಶ್ ಮಾಲಗತ್ತಿ, ಆರ್.ಎಫ್.ಒ ಪವಿತ್ರ, ಇಒ ಜೈಪಾಲ್, ಎನ್.ಸಿ.ಸಿ.ಲೆಪ್ಟಿನೆಂಟ್ ಪ್ರದೀಪಕುಮಾರ್, ಹವಲ್ದಾರ್ ಚಂದ್ರಶ್ರೇಷ್ಟ, ಗ್ರಾಪಂ ಉಪಾಧ್ಯಕ್ಷ ಸಂಪತ್ ಕುಮಾರ್, ಸದಸ್ಯರಾದ ಬಸವರಾಜು, ಅಸೀಫ್‌ವುಲ್ಲಾ ಖಾನ್, ಎನ್.ಸಿ.ಸಿ. ಕೆಡೆಟ್, ಶಾಲಾ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.