– ಕೈವಾರದ ನಾಟ್ಯಾಂಜಲಿ ನೃತ್ಯ ಕಲಾ ಅಡಾಡೆಮಿಯ ಬಾಲ ಕಲಾವಿದರಿಗೆ ಪ್ರಶಸ್ತಿ
– ಅಕಾಡೆಮಿಯ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರಿಗೆ “ಕಲಾ ಸೌರವ’ ಪ್ರಶಸ್ತಿ
ಚಿಂತಾಮಣಿ: ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ “ಶ್ರೀ ಕೃಷ್ಣಾರ್ಪಣಾ ಸಂಪೂರ್ಣ ಕೃಷ್ಣಲೀಲಾ” ಕಾರ್ಯಕ್ರಮದಲ್ಲಿ ಚಿಂತಾಮ ತಾಲೂಕಿನ ಕೈವಾರದ ನಾಟ್ಯಾಂಜಲಿ ನೃತ್ಯ ಕಲಾ ಅಡಾಡೆಮಿಯ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರ ಶಿಷ್ಯವೃಂದದ ಭರತನಾಟ್ಯ ಪ್ರದರ್ಶನ ಕಣ್ಮನ ಸೆಳೆಯಿತು.
ನಿರಂತರ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ಬೆಂಗಳೂರು ಇವರ ಸಾರಥ್ಯದಲ್ಲಿ ಶ್ರೀ ವಿದ್ಯಾಸಾಗರ ಶ್ರೀಪಾದರ ಆಶೀರ್ವಾದದೊಂದಿಗೆ ಆಯೋಜಿಸಲಾಗಿದ್ದ “ಶ್ರೀ ಕೃಷ್ಣಾರ್ಪಣ ಸಂಪೂರ್ಣ ಕೃಷ್ಣಲೀಲಾ” ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಅಡಾಡೆಮಿಯ ಬಾಲ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ಬಾಲ ಕಲಾವಿದರಿಗೆ ಬಿರುದು, ಪ್ರಮಾಣ ಪತ್ರ ವಿತರಣೆ, ಮೆಡಲ್ ಹಾಕಿ ಗೌರವಿಸಲಾಯಿತು.
ಸದಾ ಕಾಲ ಬಾಲಕಲಾವಿದರಿಗೆ ಸೂರ್ತಿ ತುಂಬುತ್ತಾ, ಸಾಧನೆಗೆ ಬೆನ್ನುಲುಬಾಗಿ ನಿಂತ ನಾಟ್ಯಾಂಜಲಿ ನೃತ್ಯ ಕಲಾ ಅಡಾಡೆಮಿಯ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರಿಗೆ ಇದೇ ಸಂದರ್ಭದಲ್ಲಿ “ಕಲಾ ಸೌರವ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಭರತನಾಟ್ಯ ಪ್ರದರ್ಶನ ನೀಡಿದ ಅಕಾಡೆಮಿಯ ಪಾವನಿಕುಮಾರ್, ಅಸ್ಮಿತಾ ಸಿ.ಆರ್., ಕೆ.ಎ.ಲಲಿತಾ, ನಿಶ್ಚಿತಾ ಎಂ., ಶ್ರೀದುರ್ಗಾ ಕೆ.ಜೆ., ಮೇಧಪ್ರಿಯಾ ಆರ್., ಯಶಿಕಾ ಬಿ.ಎಸ್., ಉನ್ನತಿ ಕುಮಾರ್, ಪೂರ್ವಿಕಾ ಎಲ್., ವಿ.ಗುರುಪ್ರಿಯಾ, ದೀಕ್ಷಾ ಟಿ.ರಾಜ್, ಮೌಲ್ಯಾಶ್ರೀ ಕೆ.ಎಸ್. ಅವರಿಗೆ ಇದೇ ವೇಳೆ “ನಾಟ್ಯ ಕೌಸ್ತುಭ” ಬಿರುದು ಹಾಗೂ ಪ್ರಮಾಣ ಪತ್ರ ವಿತರಣೆ, ಮೆಡಲ್ ಹಾಕಿ ಗೌರವಿಸಲಾಯಿತು.