Saturday, 14th December 2024

ಎನ್ಸಿಸಿ ಘಟಕ ತೆರೆಯಲು ಒತ್ತಾಯ

ಚಿಕ್ಕನಾಯಕನಹಳ್ಳಿ: ತಾಲೂಕಿನ ಮೂರು ಪ್ರಥಮ ರ‍್ಜೆ ಕಾಲೇಜುಗಳಲ್ಲಿ ಎನ್ಸಿಸಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಂಚಾಲಕ ಎ.ಎಂ. ಕುಮಾರಯ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದ್ದಾರೆ.

ಬುಧವಾರ ಪಟ್ಟಣಕ್ಕೆ ಭೇಟಿ ನೀಡಿದ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಚಿಕ್ಕ ನಾಯಕನಹಳ್ಳಿ, ಹುಳಿಯಾರು ರ‍್ಕಾರಿ ಪ್ರಥಮ ರ‍್ಜೆ ಕಾಲೇಜು ಹಾಗೂ ನವೋದಯ ಪ್ರಥಮ ರ‍್ಜೆ ಕಾಲೇಜುಗಳಲ್ಲಿ ಎರಡು ಸಾವಿರಕ್ಕಿಂತ ಅಧಿಕ ವಿದ್ಯರ‍್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎನ್ಸಿಸಿ ಘಟಕ ಸ್ಥಾಪನೆಯಿಂದ ರಾಷ್ಟ್ರಪ್ರೇಮ, ಶಿಸ್ತು, ಸಂಯಮ, ಜವಾಬ್ದಾರಿ ಮೂಡುತ್ತದೆ. ಎನ್ಸಿಸಿಯ ಸಿ ರ‍್ಟಿಫಿಕೇಟ್ಹೊಂದಿದ ವಿದ್ಯರ‍್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ರ‍್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ದೊರೆಯುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ಎನ್ಸಿಸಿ ಅಭ್ರ‍್ಥಿಗಳಿಗೆ ವಿಶೇಷ ಕೋಟಾ ಅಡಿಯಲ್ಲಿ ಸ್ಥಾನ ದೊರಕಿಸಿಕೊಳ್ಳಬಹುದಾಗಿದೆ. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ‍್ಯೋತ್ಸವ, ಗಣರಾಜ್ಯೋತ್ಸವಗಳಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶವಿದೆ. ವಿಶೇಷ ಹಾಗೂ ಸೂಕ್ಷ್ಮ ಸಂರ‍್ಭಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಗಸ್ತು ತಿರುಗಲು ಎನ್ಸಿಸಿ ಅಭ್ರ‍್ಥಿಗಳ ಸೇವೆ ಪಡೆಯಬಹುದಾಗಿದೆ. ಪ್ರಸಕ್ತ ಶೈಕ್ಷಣಿಕ ರ‍್ಷದಿಂದಲೇ ಘಟಕ ಆರಂಭಿಸಲು ಸಂಬಂಧಪಟ್ಟವರಿಗೆ ಸೂಕ್ತ ನರ‍್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.