ರಾಯಚೂರು: ಜಿಲ್ಲೆಯ ನೀರಮಾನ್ವಿ ಬೆಟ್ಟದಲ್ಲಿ ಸುಮಾರು ಕಳೆದ 6 ತಿಂಗಳು ಗಳಿಂದ ಬೀಡುಬಿಟ್ಟಿರುವ ಚಿರತೆ ಇಂದಿನವ ರೆಗೂ ಯಾವುದೇ ಗ್ರಾಮಸ್ಥರಿಗಾಗಲಿ ಸಾಕು ಪ್ರಾಣಿ ಗಳನ್ನಾಗಲೀ ಮುಟ್ಟಲಿಲ್ಲ, ಆದರೆ ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲಿ ಜನವಸತಿಯ ಪ್ರದೇಶಕ್ಕೆ ಬಂದು ಹೋಗುವ ಕಾಡುಪ್ರಾಣಿಗಳು ಇದೀಗ ಹಗಲಲ್ಲಿ ಅದೂ ಜನರೆದುರೇ ಬಂದು ಹೋಗುತ್ತಿರುವುದು ಆತಂಕ ಉಂಟು ಮಾಡಲಾರಂಭಿಸಿದೆ.
ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆಯೊಂದು ಹಗಲಿನಲ್ಲೇ ಪ್ರತ್ಯಕ್ಷವಾಗಿದೆ. ಮಾತ್ರವಲ್ಲ, ಗ್ರಾಮಸ್ಥರ ಎದುರೇ ಕುರಿಯೊಂದನ್ನು ಕಚ್ಚಿಕೊಂಡು ಹೋಗಿದು ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ನಡೆದಿದೆ.
ಚಿರತೆ ತಿಂದು ಉಳಿದಿರುವ ಪ್ರಾಣಿಗಳ ದೇಹಗಳ ಭಾಗಗಳು ಗ್ರಾಮ ನಿವಾಸಿ ರಮೇಶ್ ಎಂಬವರಿಗೆ ಸೇರಿದ ಕುರಿ ಇದಾಗಿದ್ದು, ಕಣ್ಣೆದುರೇ ಕುರಿಯನ್ನು ಕೊಂಡೊಯ್ದಿರುವುದು ಜನರಲ್ಲಿ ನಿದ್ದೆಗೆಡಿಸಿ ಆತಂಕ ಮೂಡಿಸಿದೆ. ಕಳೆದ ಬೆಟ್ಟದಲ್ಲಿ ನಾಯಿ, ಕುರಿ, ನವಿಲುಗಳನ್ನ ಕೊಂದು ತಿಂದು ಹಾಕಿರುವುದು ಗಮನಕ್ಕೆ ಬಂದಿದೆ.
ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಗಳನ್ನ ಹಾಕಿದ್ದರೂ, ಚಿರತೆಗಳು ಅದಕ್ಕೆ ಬಿದ್ದಿಲ್ಲ.ಅರಣ್ಯ ಅಧಿಕಾರಿಗಳ ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿದರು ಚಿರತೆಗಳು ಮಾತ್ರ ಬಹಳ ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.