Thursday, 21st November 2024

New Economic Corridor: ಬೆಂಗಳೂರು-ಕಲ್ಯಾಣ ಕರ್ನಾಟಕದ ಸಂಪರ್ಕ ಸಾಧಿಸಲು ಹೊಸ ಕಾರಿಡಾರ್‌ ಯೋಜನೆ…ಏನಿದರ ವಿಶೇಷತೆ?

New Economic Corridor

ಬೆಂಗಳೂರು: ರಾಜಧಾನಿ ಬೆಂಗಳೂರು (Capital Bangalore) ಹಾಗೂ ಕಲ್ಯಾಣ ಕರ್ನಾಟಕ(Kalyana Karnataka)ದ ನಡುವೆ ಸಂಪರ್ಕ ಸಾಧಿಸಲು ರಾಜ್ಯ ಸರ್ಕಾರವು ಹೊಸ ಆರ್ಥಿಕ ಕಾರಿಡಾರ್‌ (New Economic Corridor) ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಈ ಯೋಜನೆಯ ಜವಾಬ್ದಾರಿಯನ್ನು ಮೊದಲ ಬಾರಿ ಪಿಡಬ್ಲ್ಯುಡಿ ಸಚಿವಾಲಯ(PWD ministry) ಕ್ಕೆ ವಹಿಸಲಾಗಿದ್ದು, ಇದಕ್ಕೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿ (KKRDB) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

ಈ ನೂತನ ಕಾರಿಡಾರ್‌ ಯೋಜನೆಯು ಏಳು ಜಿಲ್ಲೆಗಳನ್ನು ಹಾದು ಹೋಗಲಿವೆ. ಅವು ಬೀದರ್‌(Bidar) , ಕಲಬುರಗಿ(Kalaburagi) , ಯಾದಗಿರಿ(Yadgir) , ರಾಯಚೂರ್‌(Raichur), ಕೊಪ್ಪಳ(Koppal), ಬಳ್ಳಾರಿ(Bellary) ಹಾಗೂ ವಿಜಯನಗರ(Vijayanagar) ಜಿಲ್ಲೆ ಜತೆಗೆ ಚಿತ್ರದುರ್ಗ(Chitradurga), ತುಮಕೂರು(Tumkur) ಹಾಗೂ ಬೆಂಗಳೂರು ಕೂಡ ಸೇರಿವೆ. ಈ ನಿಟ್ಟಿನಲ್ಲಿ ವರದಿ ತಯಾರಿಸಲು ಪಿಡಬ್ಲ್ಯುಡಿ ಸಚಿವಾಲಯ ಟೆಂಡರ್‌ ಕೂಡ ಕರೆದಿದೆ. ಈ ವರದಿ ಮುಖಾಂತರ ಕಾರಿಡಾರ್‌ ನಿರ್ಮಿಸಲು ಎಷ್ಟು ಭೂಮಿ ಬೇಕು? ಅದರಲ್ಲಿ ಭೂಸ್ವಾಧೀನ ವರದಿ ಹಾಗೂ ವೆಚ್ಚದ ಕುರಿತು ಸಮಗ್ರ ಚಿತ್ರಣ ಸಿಗಲಿದೆ.

ಗ್ರೀನ್‌ ಫೀಲ್ಡ್‌ ಎಕ್ಸ್‌ʼಪ್ರೆಸ್‌ (Green Field Expressway)ನಿರ್ಮಾಣದ ಹೊಣೆಗಾರಿಕೆಯನ್ನು ಪಿಡಬ್ಲ್ಯುಡಿ ಸಚಿವಾಲಯವು ಮೊದಲ ಬಾರಿ ಹೊರಲಿದೆ. ಸದ್ಯ ರಾಷ್ಟ್ರೀಯ ಹೆದ್ದಾರಿ 50(National Higway 50)ರಲ್ಲಿ ಬೆಂಗಳೂರು ಹಾಗೂ ಬೀದರ್‌ ನಡುವಿನ ಸಂಚಾರಕ್ಕೆ 12 ರಿಂದ 14 ಗಂಟೆ ವ್ಯಯಿಸಬೇಕು. ಇದರಲ್ಲಿ ಮಹಾರಾಷ್ಟ್ರದ ನಾಂಡೇದ್‌ (Nanded of Maharashtra)ಹಾಗೂ ಕರ್ನಾಟಕದ ಚಿತ್ರದುರ್ಗ ಜಿಲ್ಲೆ(Chitradurga) ಯಲ್ಲಿ ಸಂಪರ್ಕಿಸಬಹುದಾಗಿದೆ.

ಈ ಹೊಸ ಕಾರಿಡಾರ್‌(600 ಕಿಮೀ) ಯೋಜನೆಯಿಂದ, ಸರಕು ಸಾಗಣೆ ಮತ್ತು ಜನ ಸಂಚಾರವನ್ನು ಹೆಚ್ಚು ಸುರಕ್ಷತೆ, ದಕ್ಷತೆ ಹಾಗೂ ಪ್ರಯಾಣದ ವೆಚ್ಚ ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ. ಈ ಕಾರಿಡಾರ್‌ ನಿಂದ ಪ್ರಮುಖ ಕೈಗಾರಿಕಾ ವಲಯಗಳು, ಜಿಲ್ಲೆಗಳ ಕೇಂದ್ರ ಸ್ಥಾನಗಳು ಹಾಗೂ ಹಣಕಾಸು ಇಲಾಖೆಗಳಿಗೆ ಸಂಪರ್ಕ ಸಾಧಿಸಬಹುದು.

ಸರಕಾರವು, ರಾಜ್ಯ ಹೆದ್ದಾರಿ 104 ಅನ್ನು ಇನ್ನಷ್ಟು ಅಭಿವೃದ್ದಿಗೊಳಿಸುವತ್ತ ಯೋಜನೆ ರೂಪಿಸುತ್ತಿದೆ. ಈ 50 ಕಿಮೀ ಉದ್ದದ ಟೋಲ್‌ ಮುಕ್ತ ರಸ್ತೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport) ವನ್ನು ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ನಂದಿ ಬೆಟ್ಟ(Nandi Hill) ದ ಸಂಪರ್ಕ ಸಾಧ್ಯ. ಸದ್ಯ ಈ ರಸ್ತೆ ಪುನರ್‌ ನಿರ್ಮಾಣ(Road Renovation) ವಾಗುತ್ತಿದೆ. ಇದು 2.6 ಕಿಮೀ ಉದ್ದವಾಗಿದ್ದು, 24.38 ಕೋಟಿ ರೂ. ವೆಚ್ಚದಲ್ಲಿ ಕೆಲಸ ಸಾಗುತ್ತಿದೆ.