Sunday, 15th December 2024

NIA ತಂಡದ ವಶಕ್ಕೆ ಅಬ್ದುಲ್ ಸುಕ್ಕೂ‌ರ್: ತನಿಖೆ ಚುರುಕು

ಕಾರವಾರ: ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್‌ನಲ್ಲಿ ನಕಲಿ ದಾಖಲೆ ನೀಡಿರುವ ಆರೋಪದಡಿ ದುಬೈನಿಂದ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಬಕ್ರಿದ್ ಹಬ್ಬದ ನಿಮಿತ್ತ ಆಗಮಿಸಿದ್ದ ಅಬ್ದುಲ್ ಸುಕ್ಕೂ‌ರ್ ಎಂಬಾತನನ್ನು ಮಂಗಳವಾರ ಬೆಳಿಗ್ಗೆ NIA ತಂಡ ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಬೆಂಗಳೂರಿನಿಂದ ಐದು ಜನರಿದ್ದ NIA ತಂಡ ಶಿರಸಿಗೆ ಆಗಮಿಸಿ ನಂತರ ಬನವಾಸಿ ಠಾಣಾ ವ್ಯಾಪ್ತಿಯ ದಾಸನಕೊಪ್ಪಕ್ಕೆ ತೆರಳಿದ್ದು ಅಬ್ದುಲ್ ಸುಕ್ಕೂರ್ ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಸದ್ಯ ಹೆಚ್ಚನ ಮಾಹಿತಿ ತಿಳಿದುಬರಬೇಕಿದ್ದು ವಿಚಾರಣೆಗಾಗಿ NIA ತಂಡ ಅಬ್ದುಲ್ ಸುಕ್ಕೂರ್‌ನನ್ನು ಬೆಂಗಳೂರಿಗೆ ಕರೆದೊಯ್ದಿದೆ.