Thursday, 12th December 2024

ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ’ಅತ್ಯುತ್ತಮ ಪೊಲೀಸ್ ಠಾಣೆ’ ಪ್ರಶಸ್ತಿ

ನಿಪ್ಪಾಣಿ: 2022ನೇ ವರ್ಷದ ಕರ್ನಾಟಕದ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಶಸ್ತಿ ನೀಡಲಾಗಿದೆ.

ರಾಜ್ಯದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯು ಈ ವರ್ಷದ ದೇಶದ ಅತ್ಯುತ್ತಮ ಠಾಣೆಯೆಂಬ ಹೆಸರು ಪಡೆದುಕೊಂಡಿದೆ.

ಪ್ರತಿ ವರ್ಷ ಗೃಹ ವ್ಯವಹಾರಗಳ ಸಚಿವಾಲಯ ಆಯ್ಕೆ ಮಾಡುವ ಭಾರತದ ಹತ್ತು ಉತ್ತಮ ಪೊಲೀಸ್ ಠಾಣೆಗಳ ಪೈಕಿ ಈ ವರ್ಷ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯು ಸ್ಥಾನ ಪಡೆದುಕೊಂಡಿದೆ.

ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣೆಯ ದಕ್ಷ ಠಾಣಾಧಿಕಾರಿ ಪಿ.ಎಸ್‌.ಐ ಅನಿಲ್ ಕುಂಬಾರ್ ರವರು ತಮ್ಮ ಸಿಬ್ಬಂದಿಗಳು ಹಾಗೂ ತಮ್ಮ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳಿ ಶ್ಲಾಘಿಸಿದ್ದಾರೆ.

ಕಳೆದ ವರ್ಷ ಕರ್ನಾಟಕದಿಂದ ರಾಯಚೂರು ಜಿಲ್ಲೆಯ ಮಾಣ್ವಿ ಪೊಲೀಸ್ ಠಾಣೆಯು ಈ ಹೆಗ್ಗಳಿಕೆಗೆ ಪಾತ್ರ ವಾಗಿದ್ದು, ಪೊಲೀಸ್ ಠಾಣೆಗಳಲ್ಲಿ ಲಭ್ಯವಿರುವ ಸೇವೆಗಳು ಮತ್ತು ಸೌಲಭ್ಯಗಳ ವಿಷಯದಲ್ಲಿ ಪೊಲೀಸ್ ಠಾಣೆ ಗಳಿಗೆ ಶ್ರೇಯಾಂಕ ನೀಡಲು ಗೃಹ ವ್ಯವಹಾರಗಳ ಸಚಿವಾಲಯವು ವಾರ್ಷಿಕವಾಗಿ ಭಾರತದ ಟಾಪ್ ಹತ್ತು ಪೊಲೀಸ್ ಠಾಣೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.