ಚಿಂತಾಮಣಿ: ವಾಣಿಜ್ಯ ನಗರಿ, ಚಿಂತಾಮಣಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳಿಗೆ ಎಡೆ ಯಾಗುತ್ತಿದ್ದರು ಪೊಲೀಸ್ ಇಲಾಖೆ ಕ್ರಮ ವಹಿಸದೆ ಸೈಲೆಂಟ್ ಆಗಿದ್ದಾರೆ.
ಇತ್ತೀಚೆಗೆ ಚಿಂತಾಮಣಿ ನಗರದ ಶಿಡ್ಲಘಟ್ಟ ರಸ್ತೆಯ ಆದರ್ಶ ಚಿತ್ರಮಂದಿರದ ಮುಂಭಾಗ ಅಪಘಾತವಾಗಿ ಪತಿ ಪತ್ನಿ ಇಬ್ಬರು ಮೃತಪಟ್ಟಿರುವ ಘಟನೆ ಆಗಿತ್ತು.
ಇಂತಹ ಘಟನೆಗಳಿಗೆ ಮುಖ್ಯ ಕಾರಣ ಮುಖ್ಯ ರಸ್ತೆಗಳಲ್ಲಿ ವಾಹನ ಸವಾರರು ಎಲ್ಲಂದರಲ್ಲಿ ನಿಲ್ಲಿಸಿ ಹೋಗುತ್ತಾರೆ. ಅದಲ್ಲದೆ ಚಿಂತಾಮಣಿ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಇರುವ ಮೆಕಾನಿಕ್ ಅಂಗಡಿಗಳ ಮುಂಭಾಗ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಬೇರೆ ವಾಹನ ಸವಾರರಿಗೆ ತೊಂದರೆ ಮಾಡುತ್ತಿದ್ದರು ಪೋಲಿಸ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ರೈತ ಸಂಘದ ರಮಣಾರೆಡ್ಡಿ ಮಾಧ್ಯಮದವರಿಗೆ ತಿಳಿಸಿದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಚಿಂತಾಮಣಿ ನಗರ ಭಾಗದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮತ್ತು ಘನ ವಾಹನ ನಿಲುಗಡೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇದ್ದರು ವಾಹನಗಳು ಎಲ್ಲೊಂದರಲ್ಲಿ ನಿಲ್ಲಿಸುತ್ತಿರುವುದರಿಂದಾಗಿ ಸಾರ್ವಜನಿಕರೂ ಸಂಕಷ್ಟ ಅನುಭವಿಸುವಂತಾಗಿದೆ.
ಈ ಕೂಡಲೇ ಪೊಲೀಸ್ ಇಲಾಖೆ ಎಲ್ಲದರಲ್ಲಿ ವಾಹನಗಳು ನಿಲ್ಲಿಸುವವರ ಮೇಲೆ ಹಾಗೂ ಮೆಕಾನಿಕ್ ಅಂಗಡಿಗಳ ಮುಂದೆ ಫುಟ್ ಪಾತ್ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.