Sunday, 15th December 2024

ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತ: ಸಂಚಾರ ನಿರ್ಬಂಧ

ದಕ್ಷಿಣ ಕನ್ನಡ: ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತಗೊಂಡಿದ್ದು, ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿನ 2ನೇ ತಿರುವಿನಲ್ಲಿ ಸೇತುವೆಯ ತಡೆಗೋಡೆ ಕುಸಿತ ಗೊಂಡಿದೆ. ಅಲ್ಲದೇ ಸ್ಯಾಬ್ ಕೂಡ ಬಿರುಕುಗೊಂಡಿದೆ. ರಸ್ತೆ ಕುಸಿತಗೊಂಡು, ಬಿರುಕು ಬಿಟ್ಟಿರುವ ಸ್ಥಳದಲ್ಲಿ ಬ್ಯಾರಿಗೇಟ್ ಹಾಕಿ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಅಲ್ಲದೇ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.

ಜಿಲ್ಲೆಯ ಮಂಗಳೂರು ಸೇರಿದಂತೆ ಕರಾವಳಿ ಭಾಗಕ್ಕೆ ಬೆಂಗಳೂರಿನ ಜನರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ರಸ್ತೆಗಳು ಭಾರಿ ಮಳೆಯಿಂದಾಗಿ ಕುಸಿತಗೊಂಡ ಪರಿಣಾಮ, ಜನರು ತೊಂದರೆಗೆ ಸಿಲುಕುವಂತೆ ಆಗಿದೆ.