ಬೆಂಗಳೂರು : ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಫರ್ವೇಜ್ ಅಲಿ ಫಹೀಮ್, ದನೀಶ್ ಅಲಿ ಫರ್ವೇಜ್, ಶಾಬಾಜ್ ಖಾನ್ , ಅಬ್ದುಲ್ ಕಪೂರ್ ಸೇರಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್ ಬಳಿ ತಮಗಾದ ಕೆಟ್ಟ ಅನುಭವವನ್ನು ನಟಿ ಹರ್ಷಿಕಾ ಪೂಣಚ್ಚ ಹಂಚಿಕೊಂಡಿದ್ದರು.
ಹರ್ಷಿಕಾ ಹಾಗೂ ಭುವನ್ ಕೆಲವು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ಹೋಟೆಲ್ಗೆ ಹೋಗಿ ಊಟ ಮಾಡಿ ಬರುವಾಗ ಆರೋಪಿಗಳು ಸುಖಾ ಸುಮ್ಮನೆ ತಗಾದೆ ತೆಗೆದು ಜಗಳ ಮಾಡಿದ್ದರು. ಬಳಿಕ ಅವರ ಭಾಷೆಯಲ್ಲಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು.