Sunday, 15th December 2024

ಬಿಸಿಲ ಝಳ: ಹೋಟೆಲ್‌ಗ‌ಳ ವ್ಯಾಪಾರ ವಹಿವಾಟು ಇಳಿಮುಖ

ಬೆಂಗಳೂರು: ರಾಜಧಾನಿಯಲ್ಲಿ ದಿನಕಳೆದಂತೆ ಬಿಸಿಲ ಝಳ ಹೆಚ್ಚಿದ್ದು, ಕಾದ ಕೆಂಡವಾಗಿದೆ. ಹೋಟೆಲ್‌ ಉದ್ಯಮದ ಮೇಲೂ ಪರಿಣಾಮ ಬೀರಿದೆ.

ಮಧ್ಯಾಹ್ನ ಆಗುತ್ತಿದ್ದಂತೆ ವಾತಾವರಣದಲ್ಲಿ ಬಿಸಿಗಾಳಿ ಅಧಿಕವಾಗಲಿದೆ.

ಜನರು ಈ ಸಮಯದಲ್ಲಿ ಮನೆ ಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಹೊರಗಿನ ಕೆಲಸವಿದ್ದರೂ 11 ಗಂಟೆ ಒಳಗೆ ಮುಗಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆ ಕುಟುಂಬ ಸಮೇತರಾಗಿ ಹೋಟೆಲ್‌ಗೆ ಬಂದು ಊಟ ಸವಿಯುತ್ತಿದ್ದ ಗ್ರಾಹಕರು, ಬಿಲಿಸಿನ ಅಲೆಯ ಹೊಡೆತದಿಂದ ಸಂರಕ್ಷಿಸಿಕೊಳ್ಳಲು ಈಗ ಮನೆಯಿಂದ ಹೊರಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ 2 ತಿಂಗಳುಗಳಿಂದ ಹೋಟೆಲ್‌ಗ‌ಳ ವ್ಯಾಪಾರ ವಹಿವಾಟು ಇಳಿಮುಖವಾಗಿದೆ.

ಕಳೆದ ಒಂದೆರಡು ತಿಂಗಳಿಂದ ವಾತಾವರಣದಲ್ಲಿ ಬಿಸಿಲ ಪ್ರಭಾವ ಹೆಚ್ಚುತ್ತಲೇ ಇದೆ. ಇದರಿಂದಾ ಗಿಯೇ ಶೇ.30 ರಿಂದ 40ರಷ್ಟು ಹೋಟೆಲ್‌ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ಹೇಳುತ್ತಾರೆ.

ಮಧ್ಯಾಹ್ನ 12 ರಿಂದ 3ರ ವರೆಗೆ ಬಿಲಿಸಿನಲ್ಲಿ ಹೋಗುವುದನ್ನು ತಪ್ಪಿಸಿ ಎಂದು ಮನವಿ ಮಾಡಿದೆ. ಇದನ್ನು ಜನರು ಪಾಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಹೊರಗೆ ಬರುತ್ತಿಲ್ಲ.

ವಿಪರೀತ ಬಿಸಿಲಿನ ಧಗೆ ಇರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ಜನರು ಟೀ, ಕಾಫಿ ಸೇವಿಸುತ್ತಿಲ್ಲ. ವಿಪರೀತ ಶೆಖೆಯಿರುವ ಹಿನ್ನೆಲೆಯಲ್ಲಿ ಗ್ರಾಹಕರು ತಂಪು ಪಾನೀಯಗಳಿಗೆ ಮೊರೆ ಹೋಗು ತ್ತಿದ್ದಾರೆ.

ನಿಂಬೆ ಜ್ಯೂಸ್‌, ಮ್ಯಾಂಗೋ ಜ್ಯೂಸ್‌, ಕಲ್ಲಂಗಡಿ ಹಣ್ಣಿನ ಜ್ಯೂಸ್‌, ಲಸ್ಸಿ ಸೇರಿ ಇನ್ನಿತರ ತಂಪು ಪಾನೀಯ ಗಳು ಹೆಚ್ಚಿನ ರೀತಿಯಲ್ಲಿ ಮಾರಾಟ ವಾಗುತ್ತಿವೆ ಎಂದು ಹೋಟೆಲ್‌ ವ್ಯಾಪಾರಿಗಳು ಹೇಳುತ್ತಾರೆ.