Sunday, 15th December 2024

ಪ್ರಧಾನಿ ತೆರಳುವ ಹಿನ್ನೆಲೆ: ಮುಖ್ಯಮಂತ್ರಿ ವಿಶೇಷ ವಿಮಾನ ಇಳಿಯಲು ನಿರಾಕರಣೆ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ವಿಮಾನ ಇಳಿಯಲು ಅನುಮತಿ ನಿರಾಕರಿಸಲಾಗಿದೆ.

ಸಾಂವಿಧಾನಿಕ ಮುಖ್ಯಸ್ಥರಾದ ಪಿಎಂ ಮತ್ತು ಸಿಎಂ ಚುನಾವಣಾ ಪ್ರಚಾರಾರ್ಥ ಬೆಳಗಾವಿ ಪ್ರವಾಸದಲ್ಲಿದ್ದು, ಇಬ್ಬರ ವಿಮಾನಗಳು ಬೆಳಗಾವಿಯಲ್ಲಿ ಇಳಿಯಬೇಕಿತ್ತು.

ಶನಿವಾರ ತಡರಾತ್ರಿಯೇ ಬೆಳಗಾವಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಗರದ ಮಾಲಿನಿ ಮೈದಾನದಲ್ಲಿ ಸಾರ್ವಜನಿಕ ಸಭೆಯ ಬಳಿಕ ಶಿರಸಿಗೆ ತೆರಳಲಿದ್ದಾರೆ.

11:45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಪ್ರಧಾನಿ ತೆರಳುವ ಹಿನ್ನೆಲೆಯಲ್ಲಿ ಇತರ ವಿಮಾನಗಳ ಪ್ರವೇಶ ಸಾಂಬ್ರಾ ನಿಲ್ದಾಣದಲ್ಲಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ನಿಲ್ದಾಣಕ್ಕೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುಮತಿ ನಿರಾಕರಿಸಲಾಗಿದೆ.

ಜಿಲ್ಲೆಯ ವಿವಿಧ ಪ್ರಚಾರ ಸಭೆಗಳಲ್ಲಿ ಭಾಗವಹಿಸಬೇಕಿರುವ ಸಿದ್ದರಾಮಯ್ಯ ಅವರು ಪರ್ಯಾಯವಾಗಿ ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಇಳಿದು, ರಸ್ತೆ ಮಾರ್ಗವಾಗಿ ಬೆಳಗಾವಿ ಜಿಲ್ಲೆ ಪ್ರವೇಶಿಸಲಿದ್ದಾರೆ.