Thursday, 12th December 2024

ಶಿವಮೊಗ್ಗ-ಬೆಂಗಳೂರು ಮಧ್ಯಾಹ್ನ ರೈಲು ಸೌಲಭ್ಯ

ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರಿಗೆ ಮಧ್ಯಾಹ್ನ ರೈಲಿನ ಸೌಲಭ್ಯ ಜಿಲ್ಲೆಯ ಜನತೆಗೆ ಸಿಗುತ್ತಿದೆ.

ಶಿವಮೊಗ್ಗ – ಯಶವಂತಪುರ – ಬಾಣಸವಾಡಿ ನಡುವೆ ಈ ರೈಲು ಸಂಚರಿಸಲಿದ್ದು, ಶಿವಮೊಗ್ಗ ನಗರವನ್ನು ಮಧ್ಯಾಹ್ನ 1-05 ಕ್ಕೆ ಬಿಡಲಿದೆ. ಸಂಜೆ 5-30ಕ್ಕೆ ತುಮಕೂರನ್ನು ತಲುಪಲಿದ್ದು, ಅಲ್ಲಿಂದ 5-40ಕ್ಕೆ ಹೊರಟು ಸಂಜೆ 6-50 ಕ್ಕೆ ಯಶವಂತಪುರ ತಲುಪಿ 7-40 ಕ್ಕೆ ಬಾಣಸವಾಡಿ ತಲುಪಲಿದೆ.

ಬೆಳಗ್ಗೆ 5-50ಕ್ಕೆ ಬಾಣಸವಾಡಿಯಿಂದ ಹೊರಡುವ ಈ ರೈಲು 6-40ಕ್ಕೆ ಯಶವಂತಪುರ, 7-55 ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ 8-05ಕ್ಕೆ ಬಿಡಲಿರುವ ರೈಲು, ಮಧ್ಯಾಹ್ನ 12-30 ಕ್ಕೆ ಶಿವಮೊಗ್ಗ ತಲುಪಲಿದೆ.